ಸೀಬೆ ಹಣ್ಣನ್ನು ಹೆಚ್ಚು ಜನ ಇಷ್ಟಪಟ್ಟು ಸೇವಿಸ್ತಾರೆ. ನಮ್ಮ ಮನೆಯ ಸುತ್ತಮುತ್ತ ಒಂದಲ್ಲ ಒಂದು ಸೀಬೆ ಮರ ಇದ್ದೇ ಇರುತ್ತದೆ. ಈ ಹಣ್ಣಿನಿಂದ ಆರೋಗ್ಯಕ್ಕೆ ಎಷ್ಟುಲ್ಲ ಪ್ರಯೋಜನಗಳಿದೆಯೋ, ಅದೇ ರೀತಿ ಸೀಬೆ ಮರದ ಎಲೆಗಳಿಂದಲೂ ಕೂಡ ಅಷ್ಟೇ ಲಾಭಗಳಿವೆ ಆಯುರ್ವೇದ ಸೇರದಂತೆ ಹಲವು ಮನೆಮದ್ದುಗಳಲ್ಲಿ ಕೂಡ ಸೀಬೆ ಎಲೆಗಳನ್ನು ಬಳಸುತ್ತಾರೆ.ಹಾಗಿದ್ರೆ ಏನೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಎಂಬುವುದರ ಮಾಹಿತಿ ಇಲ್ಲಿದೆ.
ಔಷಧೀಯ ಪ್ರಯೋಜನಗಳು
ಸೀಬೆ ಎಲೆಯನ್ನು ಬಿಸಿನೀರಿಗೆ ಹಾಕಿ ಚೆನ್ನಾಗಿ ಕುದಿಸಿ ನಂತರ ಆ ನೀರನ್ನ ಸೇವಿಸುವುದರಿಂದ ಆರೋಗ್ಯಕ್ಕೆ ಒಂದಲ್ಲ ಎರಡಲ್ಲ ಸಾಕಷ್ಟು ಪ್ರಯೋಜನಗಳಿವೆ. ಈ ಎಲೆಯಲ್ಲಿ ಆಂಟಿ ಬ್ಯಾಕ್ಟೀರಿಯಲ್, ಆಂಟಿ ಇನ್ಫ್ಲಾಮೇಟರಿ ಹಾಗೂ ಹಾಗೂ ಆಂಟಿ ಡಯಾಬಿಟಿಕ್ ಅಂಶಗಳು ಹೆಚ್ಚಿದ್ದು, ನಮ್ಮ ದೇಹದ ಬ್ಲಡ್ ಶುಗರ್ ಲೆವೆಲ್ ಅನ್ನು ರೆಗುಲೇಟ್ ಮಾಡುತ್ತದೆ. ದೇಹದಲ್ಲಿ ಆಗುವ ಬ್ಯಾಕ್ಟೀರಿಯಲ್ ಇನ್ಫೆಕ್ಷನ್ ವಿರುದ್ಧ ಹೋರಾಡುತ್ತದೆ ಹಾಗೂ ತಡೆಯುತ್ತದೆ.
ಚರ್ಮ ಹಾಗೂ ಕೂದಲ ಆರೋಗ್ಯ
ಸೀಬೆ ಎಲೆಯಲ್ಲಿ ಇರುವಂತಹ ಆಂಟಿ ಮೈಕ್ರೋಬಿಯಲ್ ಅಂಶ ಮುಖದಲ್ಲಾಗುವಂತ ಮೊಡವೆಗಳನ್ನ ತಡೆಯುತ್ತದೆ ಹಾಗೂ ಆಗಿರುವ ಮೊಡವೆಯನ್ನ ಕಡಿಮೆ ಮಾಡುತ್ತದೆ.
ಆರೋಗ್ಯಕರ ಕೂದಲನ್ನು ಉತ್ತೇಜಿಸುತ್ತದೆ, ನೆತ್ತಿಯನ್ನು ಪೋಷಿಸುತ್ತದೆ, ತಲೆಹೊಟ್ಟು ಮತ್ತು ತುರಿಕೆ ಕಡಿಮೆ ಮಾಡುತ್ತದೆ.
ಜೀರ್ಣಾಂಗ ಆರೋಗ್ಯವನ್ನು ಉತ್ತೇಜಿಸುತ್ತದೆ
ಸೀಬೆ ಎಲಿಯ ಟಿ ಸೇವಿಸುವುದರಿಂದ ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳು ಬ್ಯಾಕ್ಟೀರಿಯಾದ ಸೋಂಕಿನ ವಿರುದ್ಧ ಹೋರಾಡುತ್ತವೆ. ಹಾಗೂ ಅತಿಸಾರ ಕಡಿಮೆಯಾಗುತ್ತದೆ. ಜೀರ್ಣಕಾರಿ ಸಮಸ್ಯೆಗಳನ್ನು ಶಮನಗೊಳಿಸಲು ಸಹಾಯ ಮಾಡುತ್ತದೆ.