ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ನಡೆಯುತ್ತಿರುವ ಪಂಚರತ್ನ ರಥಯಾತ್ರೆಯೂ ಮಧುಗಿರಿ ವಿಧಾನಸಭಾ ಕ್ಷೇತ್ರ ಮುಗಿಸಿ ಇದೀಗ ಕೊರಟಗೆರೆ ವಿಧಾನಸಭಾ ಕ್ಷೇತ್ರ ಪ್ರವೇಶಿಸಿದ್ದು ಯಾತ್ರೆಯ ವೇಳೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಬಿಜೆಪಿ-ಕಾಂಗ್ರೆಸ್ ವಿರುದ್ದ ಹರಿಹಾಯ್ದಿದ್ದಾರೆ.
ಕೊರಟಗೆರೆ ವಿಧಾನಸಭಾ ಕ್ಷೇತ್ರವು ಜೆಡಿಎಸ್ ಭದ್ರಕೋಟೆಯಾಗಿದ್ದು ಸುಧಾಕರ್ ಲಾಲ್ ಗೆಲುವು ಸಾಧಿಸಲಿದ್ದಾರೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕೆಪಿಸಿಸಿ ಅಧ್ಯರಾಗಿದ್ದಾಗಲೇ ಅವರನ್ನು ಸಿಎಂ ಮಾಡಲಿಲ್ಲ 2013ರಲ್ಲಿ ಪರಮೇಶ್ವರ್ ಅವರನ್ನು ಸೋಲಿಸಿದವರು ಯಾರು? ಅವ್ರನ್ನು ಜೆಡಿಎಸ್ ನವರು ಸೋಲಿಸಿದ್ರಾ ಕಾಂಗ್ರೆಸ್ ನವರೇ ಸೋಲಿಸಿದರು ಅಂತ ಅವರೇ ಹೇಳಿದ್ದಾರೆ ಎಂದು ಪರೋಕ್ಷವಾಗಿ ಕಾಂಗ್ರೆಸ್ ವಿರುದ್ದ ಗುಡುಗಿದ್ದಾರೆ.
ಮಹಾರಾಷ್ಟ್ರದ ಕನ್ನಡಿಗರಿಗೆ ನೀರು ಪೂರೈಕೆ ವಿಚಾರವಾಗಿ ಪ್ರತಿಕ್ರಿಯಿಸಿ ನೀರು ಪೂರೈಕೆ ಮಾಡಿದ ಆ ಸರ್ಕಾರಕ್ಕೆ ಹೆಚ್ಡಿಕೆ ಅಭಿನಂದನೆ ರಾಜ್ಯದ ಹಳ್ಳಿಗಳ ಬಗ್ಗೆಯೂ ಸರ್ಕಾರ ಮುತೂವರ್ಜಿ ವಹಿಸಲಿ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಪರಿಶುದ್ಧ ನೀರು ಸಿಗುತ್ತಿಲ್ಲ ಅದೇ ವೇಗದಲ್ಲಿ ನಮ್ಮ ರಾಜ್ಯದ ಜನರಿಗೂ ನೀರು ಪೂರೈಸಲಿ ಎಂದಿದ್ದಾರೆ.

ಮಧುಗಿರಿಯಲ್ಲಿ ಚಿಕಿತ್ಸೆ ಸಿಗದೆ ಬಾಲಕನ ಸಾವಿಗೆ ಪ್ರತಿಕ್ರಿಯಿಸಿ ಈ ರೀತಿಯ ಕೇಸ್‌ಗಳು ಮರುಕಳಿಸದಂತೆ ಕಠಿಣ ಕ್ರಮ ವಹಿಸಬೇಕು ರಾಜ್ಯದ ಎಲ್ಲಾ ಜಿಲ್ಲಾ ಆರೋಗ್ಯಾಧಿಕಾರಿಗಳ ಸಭೆ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ನಿರ್ಲಕ್ಷ್ಯ ವಹಿಸಿದ್ರೆ ನಿಮ್ಮನ್ನೇ ಸಸ್ಪೆಂಡ್ ಮಾಡ್ತೇವೆ ಎಂಬ ಎಚ್ಚರಿಕೆ ನೀಡಬೇಕು ಆಸ್ಪತ್ರೆಗಳಲ್ಲಿ ವೈದ್ಯರು, ಸಿಬ್ಬಂದಿ ಪ್ರಾಮಾಣಿಕ ಕೆಲಸ ಮಾಡಬೇಕು. ನಿರ್ಲಕ್ಷ್ಯ ಕೇಸ್ ಬೆಳಕಿಗೆ ಬಂದ ತಕ್ಷಣ ಕ್ರಮ ಕೈಗೊಳ್ಳುವುದು 2 ತಿಂಗಳ ಬಳಿಕ ಆ ಸಿಬ್ಬಂದಿ ಮತ್ತೆ ಕೆಲಸಕ್ಕೆ ಬರುತ್ತಾರೆ.
ಈ ರೀತಿ ಕ್ರಮಗಳಿಂದ ಯಾವುದೇ ಉಪಯೋಗ ಇಲ್ಲ ಕೆಲಸ ಮಾಡುವವರಿಗೆ ಭಯ, ಭಕ್ತಿ ಇರಬೇಕು ವೈದ್ಯರು,ಸಿಬ್ಬಂದಿ ರೋಗಿಗಳನ್ನು ದೇವರಂತೆ ಕಾಣಬೇಕು ಎಂದು ಸಲಹೆ ನೀಡಿದ್ದಾರೆ.