ಬೆಂಗಳೂರು: ಮಾ.19: ಉರಿಗೌಡ, ದೊಡ್ಡ ನಂಜೇಗೌಡ ವಿವಾದ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ವಿರುದ್ದ ಮಾಜಿ ಸಿಎಂ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಉರೀಗೌಡ, ನಂಜೇಗೌಡ ಕಥೆ ಕಟ್ಟಿಕೊಂಡು ಇರ್ತೀರಾ, ಇಲ್ಲ ಹೊಲ ಉಳುವ ಬೋರೇಗೌಡನ ಕಷ್ಟ ನೋಡ್ತೀರಾ? ಬಿಜೆಪಿಯವರಿಗೆ ಏನು ಕೆಲಸ ಇಲ್ದೆ, ಈ ವಿಚಾರ ಇಟ್ಟುಕೊಂಡು ಆಟ ಆಡ್ತಿದ್ದಾರೆ.

ಆಲಿಕಲ್ಲು ಮಳೆ ಬಿದ್ದು ಜನ ಸಾಯ್ತಿದ್ದಾರೆ. ಇದನ್ನ ನೋಡಬೇಕೊ ಅಥವಾ ಕಾಲ್ಪನಿಕ ವಿಚಾರಗಳಿಗೆ ಪ್ರಾಸಸ್ಥ್ಯ ಕೊಡಬೇಕಾ ಎಂದು ಬಿಜೆಪಿ ಸರ್ಕಾರದ ವಿರುದ್ಧ ಹೆಚ್ ಡಿಕೆ ಹರಿಹಾಯ್ದರು.. ಉರಿಗೌಡ, ದೊಡ್ಡ ನಂಜೇಗೌಡ ಹೆಸರಿನಲ್ಲಿ ಸಿನಿಮಾ ಯಾವನು ಮಾಡ್ತಾನೋ ಅದು ಅವನಿಗೆ ಸೇರಿದ್ದು. ಸಿನಿಮಾ ಕಥೆ ಏನು ಒರ್ಜಿನಲ್ಲ, ಕಾಲ್ಪನಿಕ ವಿಚಾರ ಇಟ್ಟುಕೊಂಡು ಸಿನಿಮಾ ಮಾಡ್ತಾರೆ.. ಮುನಿರತ್ನ ವಿರುದ್ದ ಏಕವಚನದಲ್ಲಿ ಕಿಡಿ ಕಾರಿದ ಕುಮಾರಸ್ವಾಮಿ, ಸುವರ್ಣ ಮಂಡ್ಯ ಪುಸ್ತಕದಲ್ಲಿ ಉರೀಗೌಡ, ನಂಜೇಗೌಡ ಹೆಸರು ಪ್ರಸ್ತಾಪಿಸಿದ್ದಾರೆ. ಆ ಪುಸ್ತಕದಲ್ಲಿ ಹೈದರಾಲಿ, ಟಿಪ್ಪು ವಿರುದ್ಧ ಸೆಟೆದು ನಿಂತಿದ್ರು ಅಂತ ಇದೆ. ಅಲ್ಲೇನಾದ್ರು ಉರಿಗೌಡ, ದೊಡ್ಡ ನಂಜೇಗೌಡ ಕುತ್ತಿಗೆ ಕೂಯ್ದ್ರು ಅಂತಾ ಇದಿಯಾ.? ಇಲ್ಲ ಯುದ್ದ ಮಾಡಿ ತಲೆ ತೆಗೆದ್ರು ಅಂತಿದೀಯಾ ಎಂದರು. ಮೊದಲು ಹೊಲ ಉಳುವ ಬೋರೇಗೌಡ ಸಾಯ್ತಾ ಇದ್ದಾನಲ್ಲ ಅವನ್ನ ನೋಡಲಿ. ಉರಿಗೌಡ, ನಂಜೇಗೌಡ ಇದ್ರೊ ಇಲ್ವೊ ಅಂತಾ ಆಮೇಲೆ ಹುಡುಕೋಣಾ ಎಂದು ಬಿಜೆಪಿ ವಿರುದ್ಧ ಕಿಡಿ ಕಾರಿದರು..

ನಾನು ಚುನಾವಣೆ ನಡೆಸಬೇಕು. ಮಂಡ್ಯದಲ್ಲಿ ಉರಿಗೌಡ, ನಂಜೇಗೌಡರ ಪ್ರತಿಮೆ ನಿರ್ಮಾಣ ಮಾಡ್ತಾರಂತೆ. ಪ್ರತಿಮೆ ಇಲ್ಲದಿದ್ದರೆ ದೊಡ್ಡ ದೇವಸ್ಥಾನವನ್ನೆ ನಿರ್ಮಾಣ ಮಾಡಿಕೊಳ್ಳಲಿ. ಈ ವಿಚಾರದಿಂದ ಚುನಾವಣೆಯಲ್ಲಿ ಯಾವುದೇ ವರ್ಕೌಟ್ ಆಗಲ್ಲ. ಈಗಿನ ಜನರ ಕಷ್ಟ ನೋಡದೆ, ಹಳೆ ಕಥೆ ಇಟ್ಕೊಂಡು ಬಂದ್ರೆ ಜನರು ವೋಟ್ ಹಾಕ್ತಾರಾ ಎಂದು ಬಿಜೆಪಿ ವಿರುದ್ದ ಹೆಚ್.ಡಿ.ಕುಮಾರಸ್ವಾಮಿ ಹಿಗ್ಗಾಮುಗ್ಗ ವಾಗ್ದಾಳಿ ನಡೆಸಿದ್ದಾರೆ.
ಜೆಡಿಎಸ್ ಪುಟ್ಕೋಸಿ ಪಕ್ಷ ಹೇಳಿಕೆ ಹೆಚ್ ಡಿಕೆ ಕೆಂಡಾಮಂಡಲ..!

ಜೆಡಿಎಸ್ ಪುಟ್ಕೋಸಿ ಪಕ್ಷ ಎಂಬ ನರೇಂದ್ರಸ್ವಾಮಿ ಹೇಳಿಕೆ ವಿಚಾರಕ್ಕೆ ಮಂಡ್ಯದ ವಿ.ಸಿ.ಫಾರಂನಲ್ಲಿ ಪ್ರತಿಕ್ರಿಯಿಸಿದ, ಹೆಚ್.ಡಿ.ಕೆ, ಈ ಚುನಾವಣೆ ಆದಮೇಲೆ ಯಾವುದು ಪುಟ್ಕೋಸಿ ಪಕ್ಷ ಅಂತಾ ಜನ ಹೇಳ್ತಾರೆ. ಇವರೆಲ್ಲರನ್ನು ಜನರು ಎಲ್ಲಿಗೆ ಕಳುಹಿಸ್ತಾರೆ ಅನ್ನೋದು ಗೊತ್ತಾಗುತ್ತೆ. ಅವರ ಪಕ್ಷದ ನಾಯಕನಿಗೆ ಸ್ಪರ್ಧೆ ಮಾಡೋದಕ್ಕೆ ಕ್ಷೇತ್ರವೇ ಸಿಗ್ತಿಲ್ಲ. ಒಬ್ಬ ಶಾಸಕಾಂಗ ಪಕ್ಷದ ನಾಯಕನನ್ನ ಎಲ್ಲಿ ನಿಲ್ಲಿಸಬೇಕು ಎಂದು ಕ್ಲಿಯರ್ ಆಗಿಲ್ಲ. ಅಂತಹವರು ನಮ್ಮ ಪಕ್ಷದ ಬಗ್ಗೆ ಮಾತನಾಡ್ತಾರಾ.? ಮೊದಲು ಅವರ ಪುಟ್ಕೋಸಿ ಹೇಗಿದೆ ಅಂತ ನೋಡಿಕೊಳ್ಳಲಿ ಎಂದು ಹೆಚ್.ಡಿ.ಕೆ ನರೇಂದ್ರಸ್ವಾಮಿ ಅವರನ್ನ ತರಾಟೆಗೆ ತೆಗೆದುಕೊಂಡರು..
ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪಟ್ಟಿ ಘೋಷಣೆ ವಿಳಂಬ

ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪಟ್ಟಿ ಘೋಷಣೆ ವಿಳಂಬ ವಿಚಾರದ ಬಗ್ಗೆ ಮಾತನಾಡಿದ ಕುಮಾರಸ್ವಾಮಿ, ಯಾವ ಪಕ್ಷ ಯಾವಾಗ ಪಟ್ಟಿ ಬಿಡುಗಡೆ ಮಾಡ್ತಾರೋ, ಹೇಗ್ ಮಾಡ್ತಾರೋ ಗೊತ್ತಿಲ್ಲ. ಅದಕ್ಕು ನನಗೆ ಸಂಬಂಧ ಇಲ್ಲ. ಚುನಾವಣೆಯಲ್ಲಿ ಆಯಾಯ ಪಕ್ಷಗಳು ಹೋರಾಟ ಮಾಡಬೇಕು. ಯಾವಾಗ ಪಟ್ಟಿ ಬಿಡುಗಡೆ ಮಾಡಬೇಕು, ಘೋಷಣೆ ಮಾಡಬೇಕು ಅನ್ನೋ ಲೆಕ್ಕಚಾರ ಅವರು ಮಾಡ್ಕೋತ್ತಾರೆ. ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳನ್ನ ಸೆಳೆಯಲು ಜೆಡಿಎಸ್, ಬಿಜೆಪಿ ಪ್ರಯತ್ನ ಎಂಬ ಆರೋಪಮಾಡ್ತಾರೆ. ಅವರ ನಾಯಕರನ್ನ ಸೆಳೆಯೋಕೆ ಜೆಡಿಎಸ್ ಏನು ಆಯಸ್ಕಾಂತನ. ನಾನು ಮ್ಯಾಗ್ನೇಟ್ ಅಲ್ಲ ಎಂದು ಕಾಂಗ್ರೆಸ್ ಗೆ ಹೆಚ್.ಡಿ.ಕೆ ಟಾಂಗ್ ನೀಡಿದ್ದಾರೆ. ರಾಜೇಗೌಡರಿಗೆ ಹಾಸನ ಜೆಡಿಎಸ್ ಟಿಕೆಟ್ ವಿಚಾರದ ಬಗ್ಗೆ ಕುಮಾರಸ್ವಾಮಿ ಪ್ರತಿಕ್ರಿಯಿಸಲು ನಿರಾಕರಿಸಿದರು..