ಹಾನಗಲ್ ಹಾಗೂ ಸಿಂದಗಿ ಉಪಚುನಾವಣೆಯಲ್ಲಿ ಜೆಡಿಎಸ್ ಸೋಲನ್ನು ಅನುಭವಿಸಿದ ಹಿನ್ನೆಲೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತೆ ಮಾತನಾಡಿದ್ದು, ಕೊನೆಯ ಹೋರಾಟದಲ್ಲಿ ಹಳ್ಳಿಗಳತ್ತ ಹೋಗ್ತೇನೆ ಎಂದಿದ್ದಾರೆ.
ಹೌದು, ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಚಿತ್ತ ಇದೀಗ ಹಳ್ಳಿಗಳತ್ತ ನೆಟ್ಟಿದ್ದು, ಮತ್ತೆ ಕೊನೆಯ ಹೋರಾಟದ ಮಾತುಗಳನ್ನಾಡಿದ್ದಾರೆ. ನನಗೆ ಅಧಿಕಾರ ಕೊಡಿ ಅಂತ ಕೇಳ್ತೇನೆ. ಇದು ನನ್ನ ಕೊನೆಯ ಹೋರಾಟ ಎಂದಿದ್ದಾರೆ.
ಸಿಂದಗಿ ಫಲಿತಾಂಶದ ಬಳಿಕ ಒಂದು ತೀರ್ಮಾನಕ್ಕೆ ಬಂದಿದ್ದೇನೆ. ಯಾವ ನಾಯಕರ ಬಗ್ಗೆಯೂ ನಾನು ಮಾತನಾಡಲ್ಲ. ರಾಜ್ಯದ ಅಭಿವೃದ್ಧಿ ಬಗ್ಗೆ ಮಾತ್ರ ಚರ್ಚೆ ಮಾತಾಡುತ್ತೇನೆ. ಸೂಟ್ ಕೇಸ್ ಕೊಟ್ಟಿದ್ದಕ್ಕೆ ಕುಮಾರಸ್ವಾಮಿ ಪ್ರಚಾರಕ್ಕೆ ಬಂದಿದ್ದರು ಎಂದಿದ್ದರು. ಯಾರು ಅಪಪ್ರಚಾರಕ್ಕೆ ಕಿವಿಗೊಡಬೇಡಿ ಎಂದು ಹೇಳಿ. ಅಂಥ ನೋವನ್ನೆಲ್ಲಾ ನಾನು ನುಂಗಿಕೊಂಡಿದ್ದೇನೆ.
25 ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡಿದ್ದೆ. ರಾಜ್ಯದಲ್ಲಿ ಇಲ್ಲಿವರೆಗೂ ಯಾರೂ ಸಹ ಸಾಲಮನ್ನಾ ಮಾಡಿರಲಿಲ್ಲ. ಆದ್ರೆ ಅಷ್ಟು ಸಾಲ ಮನ್ನಾ ಮಾಡಿದ್ರು ಯಾವ ಪ್ರಯೋಜನಕ್ಕೂ ಬಾರಲ್ಲ. ನನಗೆ ಐದು ವರ್ಷ ಸಂಪೂರ್ಣ ಅಧಿಕಾರ ಕೊಟ್ಟರೆ ರೈತರು ಒಂದು ರೂಪಾಯಿ ಸಾಲ ಮಾಡದ ಹಾಗೆ ನೋಡಿಕೊಳ್ಳುತ್ತೇನೆ ಎಂಬ ಭರವಸೆ ನೀಡಿದ್ದಾರೆ.
ಜಾಹೀರಾತಿನಿಂದ ಜನರನ್ನ ಮರಳು ಮಾಡಲು ಹೊರಟಿದ್ದಾರೆ. 100 ದಿನಗಳ ಸಾಧನೆಯ ಬಗ್ಗೆ ಜಾಹೀರಾತಿಗಾಗಿ 10 ರಿಂದ 20 ಕೋಟಿ ಹಣ ಖರ್ಚು ಮಾಡಿದ್ದಾರೆ.
ಎತ್ತಿನಹೊಳೆಗೆ ಸಿದ್ದರಾಮಯ್ಯ 16 ಸಾವಿರ ಕೋಟಿ ಕೊಟ್ರು. ಎತ್ತಿನಹೊಳೆ ನೀರು ಇನ್ನೂ ಸಕಲೇಶಪುರ ದಾಟಿ ಬಂದಿಲ್ಲ. 1 ವರ್ಷದಲ್ಲಿ ಎತ್ತಿನಹೊಳೆ ನೀರು ಹರಿಸುತ್ತೇವೆ ಅಂದಿದ್ರು. ಆದ್ರೆ ಯೋಜನೆ ಆರಂಭವಾದ ಬಳಿಕ ಸಿಎಂ ಆಗಿ ಡಿ.ವಿ. ಸದಾನಂದಗೌಡ, ಜಗದೀಶ್ ಶೆಟ್ಟರ್, ನಾನು, ಬಿ.ಎಸ್. ಯಡಿಯೂರಪ್ಪ ಬಂದುಹೋದರು. ಈಗ ಬಸವರಾಜ ಬೊಮ್ಮಾಯಿ ಸಿಎಂ ಆಗಿ ಬಂದು ಕೂತಿದ್ದಾರೆ. 8 ಸಾವಿರ ಕೋಟಿಯಿಂದ ಆರಂಭವಾದ ಎತ್ತಿನಹೊಳೆ ಯೋಜನೆ ಈಗ 24 ಸಾವಿರ ಕೋಟಿಗೆ ಬಂದು ನಿಂತಿದೆ ಎಂದು ಟೀಕಿಸಿದ್ದಾರೆ.