ಹೆಚ್ಡಿಕೆ ಕುಮಾರಸ್ವಾಮಿಗೆ ಅಭದ್ರತೆ ಕಾಡ್ತಿದೆ.ಅದಕ್ಕೆ ಡಿ.ಕೆ.ಶಿವಕುಮಾರ್ ಟಾರ್ಗೆಟ್ ಆಗ್ತಿದ್ದಾರೆ ಅಂತ
ಮಂಡ್ಯದಲ್ಲಿ ಕೃಷಿ ಸಚಿವ ಚಲುವರಾಯಸ್ವಾಮಿ ಹೇಳಿಕೆ ನೀಡಿದ್ದಾರೆ. ಮಾಧ್ಯಮಗಳ ಜೊತೆ ಮಾತಾಡಿದ ಅವ್ರು,
ಹೆಚ್ಡಿಕೆ ಇವಾಗ ಚಲುವರಾಯಸ್ವಾಮಿ ಯಾವನ್ರೀ ಅಂತಾರೆ.ಇದಕ್ಕೆ ಏನ್ ಮಾಡೋಕೆ ಆಗುತ್ತೆ.ಡಿ.ಕೆ.ಶಿವಕುಮಾರ್ ಒಕ್ಕಲಿಗ ಸಮುದಾಯದವರು.ಕೆ.ಪಿ.ಸಿಸಿ ಅಧ್ಯಕ್ಷರಾಗಿ ಸಮರ್ಥವಾಗಿ ನಿಭಾಯಿಸಿದ್ದಾರೆ.
136 ಸೀಟು ಗೆಲ್ಲಿಸಿ ಸರ್ಕಾರ ತಂದಿದ್ದಾರೆ.ಇಲ್ಲಿವರೆಗೆ ದೇವೇಗೌಡ್ರು ಜೆಡಿಎಸ್ ಪಕ್ಷವನ್ನ ಉಳಿಸಿ, ಬೆಳೆಸಿಕೊಂಡು ಬಂದ್ರು.ಅದನ್ನ ಮುಂದುರೆಸಲು ಆಗದೆ ಬಿಜೆಪಿ ಜೊತೆ ಮೈತ್ರಿಯಾಗಿದ್ದಾರೆ.ಮೈತ್ರಿಯಲ್ಲಿ ಈ ವಿಚಾರದಿಂದ ಗೊಂದಲ ಸೃಷ್ಟಿಯಾಗಿದೆ.ಈ ವೇಳೆ ಶಿವಕುಮಾರ್ ಮೇಲೆ ಮಾತಾಡೋದ್ರಿಂದ ಡಿಕೆ ವ್ಯಕ್ತಿತ್ವವನ್ನ ಅಲ್ಲಾಡಿಸಬಹುದು, ಈ ವಿಷಯವನ್ನ ಡೈವರ್ಟ್ ಮಾಡಬಹುದು ಎಂಬ ಪ್ಲಾನ್ ಇರಬೇಕು ಅಂತ ಕಿಡಿಕಾರಿದರು.
ರೇವಣ್ಣ ಕುಟುಂಬ, ನನ್ನ ಕುಟುಂಬ ಬೇರೆ ಬೇರೆ ಎಂಬ ಹೆಚ್ಡಿಕೆ ಹೇಳಿಕೆ ವಿಚಾರಕ್ಕೆ ಕುಮಾರಸ್ವಾಮಿಗೆ ಟಕ್ಕರ್ ಕೊಟ್ಟ CRS,ಹೌದಾ, ಇವಾಗ ಯಾರ ಪರ ಪ್ರತಿಭಟನೆ ಮಾಡ್ತಿದ್ದಾರೆ?ಸಂತ್ರಸ್ಥ ಹೆಣ್ಣುಮಕ್ಕಳ ಬಗ್ಗೆ ಅನುಕಂಪ ತೋರಲಿಲ್ಲ.ಅವರಲ್ಲಿ ಕ್ಷಮೆ ಕೂಡ ಕೇಳಲಿಲ್ಲ.ಅನ್ಯಾಯ ಆದವರಿಗೆ ನಿಮ್ಮ ಪರ ಇದ್ದೀವಿ ಎನ್ನಲಿಲ್ಲ.ಪ್ರಜ್ವಲ್ ನ ಕರೆಸುವ ಜವಾಬ್ದಾರಿ ಯಾರದ್ದು?ಸಾಮಾನ್ಯ ವ್ಯಕ್ತಿ ಆರೋಪಿ ಹೊರಗೆ ಹೋದ್ರೆ ಅವರಪ್ಪ, ಅಣ್ಣನನ್ನ ಕರೆಸಿ ಕೂರಿಸ್ತೀರಾ?.ಕುಮಾರಸ್ವಾಮಿಯೇ ಜವಾಬ್ದಾರಿ ತೆಗೆದುಕೊಂಡು ಪ್ರಜ್ವಲ್ ನ ಕರೆಸಬೇಕಲ್ವ?.
ಪ್ರಜ್ವಲ್ ಕುಮಾರಸ್ವಾಮಿಯ ಅಣ್ಣನ ಮಗ.ಪೆನ್ ಡ್ರೈವ್ ಎಲ್ಲಿಂದ ಬಂತು.ವಿಡಿಯೋ ರೆಕಾರ್ಡ್ ಮಾಡಿದವರು ಯಾರು.ಸಂತ್ರಸ್ಥರನ್ನ ಬೀದಿಗೆ ತಂದವರು ಯಾರು? ಇದೆಲ್ಲದಕ್ಕೂ ಉತ್ತರ ಕೊಡಬೇಕಾಗಿದೆ ಅಂತ ಹೇಳಿದ್ರು.