![](https://pratidhvani.com/wp-content/uploads/2024/05/Screenshot_20240509-224112-1-906x1024.jpg)
ಹೂಡಿಕೆದಾರಿಗೆ ಷೇರು ಮಾರ್ಕೆಟ್ ಗುರುವಾರ ಕಹಿ ಅನುಭವ ನೀಡಿದೆ. ಷೇರು ಪೇಟೆಯಲ್ಲಿ ಕರಡಿ ಓಟ ಮುಂದುವರಿದಿದೆ
ಭಾರತೀಯ ಷೇರು ಮಾರುಕಟ್ಟೆಗಳು ಗುರುವಾರ ತೀವ್ರ ಕುಸಿತ (Sensex Crash) ಕಂಡಿವೆ. ಬಿಎಸ್ಇ (BSE) ಸೆನ್ಸೆಕ್ಸ್ 1062 ಪಾಯಿಂಟ್ಸ್ ಕುಸಿದು 72,334 ಕ್ಕೆ ತಲುಪಿದ್ದರೆ, ನಿಫ್ಟಿ 50 370 ಪಾಯಿಂಟ್ಸ್ ಕುಸಿದು 21,932 ಕ್ಕೆ ತಲುಪಿದೆ. ಬಿಎಸ್ಇ ಸೂಚ್ಯಂಕವು ಅಂತಿಮವಾಗಿ 1,062 ಪಾಯಿಂಟ್ ಅಂದರೆ ಶೇಕಡಾ 1.45 ರಷ್ಟು ಕುಸಿದು 72,404 ಕ್ಕೆ ಕೊನೆಗೊಂಡಿತು. ನಿಫ್ಟಿ 50 ಕೂಡ 345 ಪಾಯಿಂಟ್ ಅಂದರೆ ಶೇಕಡಾ 1.55 ರಷ್ಟು ಕುಸಿದು 21,958 ಕ್ಕೆ ತಲುಪಿದೆ.
ಮಾರುಕಟ್ಟೆಗಳಲ್ಲಿ, ಬಿಎಸ್ಇ ಮಿಡ್ಕ್ಯಾಪ್ ಸೂಚ್ಯಂಕವು ಶೇಕಡಾ 2 ರಷ್ಟು ಕುಸಿದರೆ, ಬಿಎಸ್ಇ ಸ್ಮಾಲ್ ಕ್ಯಾಪ್ ಸೂಚ್ಯಂಕವು ಶೇಕಡಾ 2.4 ರಷ್ಟು ಕುಸಿದಿದೆ. “ಮಾರುಕಟ್ಟೆಯ ಕುಸಿತಕ್ಕೆ ಮುಖ್ಯವಾಗಿ ಸಾರ್ವತ್ರಿಕ ಚುನಾವಣೆಗಳ ಸುತ್ತಲಿನ ಅನಿಶ್ಚಿತತೆ ಕಾರಣವಾಗಿದೆ. ಇದು 52 ವಾರಗಳ ಗರಿಷ್ಠ 19 ಕ್ಕೆ ತಲುಪಿದೆ, ಇದು ಮಾರುಕಟ್ಟೆ ಆತಂಕವನ್ನು ಸೂಚಿಸಿದೆ. ಲಾರ್ಜ್ ಕ್ಯಾಪ್ ಕಂಪನಿಗಳ ನಾಲ್ಕನೇ ತ್ರೈಮಾಸಿಕ ಗಳಿಕೆಯ ಇಳಿಕೆಯು ಹೂಡಿಕೆದಾರರ ನಿರಾಸಕ್ತಿಗೆ ಕಾರಣವಾಗಿದೆ ಎಂದು ಷೇರು ಮಾರುಕಟ್ಟೆ ಎಕ್ಸ್ಪರ್ಟ್ಸ್ ವಿಶ್ಲೇಷಣೆ ಮಾಡಿದ್ದಾರೆ.