ಹಿಂದೂ ಸಮಾಜದಲ್ಲಿ ಸಂತಾನ, ಸಂತತಿ ಕುಂಠಿತವಾಗುತ್ತಿದ್ದು, ಹಿಂದೂ ಸಮಾಜದ ಪ್ರತಿಯೊಬ್ಬರು ಕನಿಷ್ಠ ಮೂರು ಮಕ್ಕಳನ್ನು ಮಾಡಿಕೊಳ್ಳಬೇಕು ಎಂದು ಆರ್ಎಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ನೀಡಿದ ಹೇಳಿಕೆಗೆ ಸಚಿವ ಮಹದೇವಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹಿಂದೂ ಸಮುದಾಯದ ಪ್ರತಿ ದಂಪತಿಯು ಕನಿಷ್ಠ 3 ಮಕ್ಕಳನ್ನು ಹೆರಬೇಕು ಎಂದು ಮೋಹನ್ ಭಾಗವತ್ ಹೇಳಿರುವುದು ನಮ್ಮ ರಾಷ್ಟ್ರೀಯ ನೀತಿಗೆ ಸಂಪೂರ್ಣ ವಿರುದ್ಧವಾದುದು ಎಂದು ಸಚಿವ ಡಾ. ಎಚ್.ಸಿ. ಮಹದೇವಪ್ಪ ಹೇಳಿದ್ದಾರೆ.
ಈ ಬಗ್ಗೆ ತಮ್ಮ ಪತ್ರಿಕಾ ಹೇಳಿಕೆ ನೀಡಿರುವ ಹೆಚ್.ಸಿ.ಮಹದೇವಪ್ಪ ,ದೇಶದ ಜನರು ಸಮಾನವಾದ ಘನತೆಯ ಬದುಕು ನಡೆಸಲು ಜನಸಂಖ್ಯಾ ಸ್ಫೋಟವೇ ಅಡ್ಡಿ. ಹೀಗಿರುವಾಗ, ಮೋಹನ್ ಭಾಗವತ್ ಅವರು ಜವಾಬ್ದಾರಿ ಅರಿತು ಮಾತನಾಡಬೇಕು ಎಂದಿದ್ದಾರೆ.