• Home
  • About Us
  • ಕರ್ನಾಟಕ
Wednesday, January 14, 2026
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ಸ್ಟ್ಯಾಂಡ್ ಅಪ್ ಕಾಮಿಡಿ ಷೊ ಮಾಡುವ ಜಾಗವನ್ನು ಸುಟ್ಟು ಹಾಕುತ್ತೇವೆ : ಮುನಾವರ್ ಫಾರುಖ್‌ಗೆ ಬಲಪಂಥೀಯ ಗುಂಪಿನಿಂದ ಬೆದರಿಕೆ‌ – ಷೊ ಸ್ಥಗಿತ!

Any Mind by Any Mind
October 31, 2021
in ದೇಶ
0
ಸ್ಟ್ಯಾಂಡ್ ಅಪ್ ಕಾಮಿಡಿ ಷೊ ಮಾಡುವ ಜಾಗವನ್ನು ಸುಟ್ಟು ಹಾಕುತ್ತೇವೆ : ಮುನಾವರ್ ಫಾರುಖ್‌ಗೆ ಬಲಪಂಥೀಯ ಗುಂಪಿನಿಂದ ಬೆದರಿಕೆ‌ – ಷೊ ಸ್ಥಗಿತ!
Share on WhatsAppShare on FacebookShare on Telegram

ಹಾಸ್ಯ ಕಾರ್ಯಕ್ರಮವೊಂದರಲ್ಲಿ (Standup comedy show) ಹಿಂದೂ ಧಾರ್ಮಿಕ ನಂಬಿಕೆ ಹಾಗೂ ಭಾವನೆಗಳನ್ನು ಅವಮಾನಿಸಿದ್ದಾರೆ ಎಂಬ ಆರೋಪದಲ್ಲಿ ಒಂದು ತಿಂಗಳು ಜೈಲಿನಲಿದ್ದು ಜಾಮೀನಿನ ಮೇಲೆ ಹೊರಬಂದಿರುವ ಮುನ್ನಾವರ್ ಫಾರುಖ್, ಈಗಲೂ ದಿನನಿತ್ಯ ಬೆದರಿಕೆ ಕರೆಗಳು ಬರುತ್ತಿವೆ ಮತ್ತು ಕಾರ್ಯಕ್ರಮ ಮಾಡಿದರೆ ಆ ಸ್ಥಳವನ್ನು ಸುಟ್ಟು ಹಾಕುತ್ತೇವೆ ಎಂಬ ಕರೆಗಳು ಬರುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ADVERTISEMENT

ಮೂರು ಪ್ರದರ್ಶನ ರದ್ದುಗೊಳಿಸಿದ ನಂತರ NDTVಯೊಂದಿಗೆ ಮಾತಾಡಿರು ಸ್ಟ್ಯಾಂಡ್ ಅಪ್ ಕಾಮಿಡಿಯನ್ ಮುನಾವರ್ ಫಾರುಖ್ ಅವರು, ಈ ದೇಶದ ಯುವಕರು ನಾವು ಯಾರಿಗೆ ಓಟ್ ಹಾಕಬೇಕು ಎಂದು ನಿರ್ಧರಿಸುತ್ತಾರೊ ಅದೇರೀತಿ ನಾವು ಯಾವುದನ್ನು ನೋಡಬೇಕು ಎಂಬುದನ್ನು ನಿರ್ಧರಿಸಬಹುದು ಎಂದು ಹೇಳಿದ್ದಾರೆ.

“ಹಿಂದೂ ದೇವರು ಮತ್ತು ದೇವತೆಗಳನ್ನು ಅವಮಾನಿಸಿದ” ಆರೋಪದ ಪ್ರಕರಣದಲ್ಲಿ ಈ ವರ್ಷದ ಆರಂಭದಲ್ಲಿ ಒಂದು ತಿಂಗಳ ಕಾಲ ಜೈಲಿನಲ್ಲಿದ್ದ ಫಾರುಖ್, ಸುಪ್ರೀಂ ಕೋರ್ಟ್ ಜಾಮೀನು ನೀಡಿದ ನಂತರವೂ ನನಗೆ ಕೆಲಸ ಮಾಡಲು ಬಿಡುತ್ತಿಲ್ಲ ನನಗೆ ಅನೇಕ ಅಡೆತಡೆಗಳನ್ನು ಬಲಪಂಥಿಯರು ಹಾಕುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

“ನನಗೆ ದಿನಕ್ಕೆ 50 ಬೆದರಿಕೆ ಕರೆಗಳು ಬರುತ್ತವೆ, ನಾನು ನನ್ನ ಸಿಮ್ ಕಾರ್ಡ್ ಅನ್ನು ಮೂರು ಬಾರಿ ಬದಲಾಯಿಸಿದ್ದೇನೆ ಆದರೂ ನನ್ನ ಸಂಖ್ಯೆ ಸೋರಿಕೆಯಾಗಿದೆ, ಜನರು ಕರೆ ಮಾಡಿ ನನ್ನನ್ನು ನಿಂದಿಸುತ್ತಿದ್ದಾರೆ” ಎಂದು ಹೇಳಿದ್ದಾರೆ.

ಫಾರುಖ್ ನಡೆಸುವ ಕಾರ್ಯಕ್ರಮದ ಸ್ಥಳಗಳನ್ನು ಸುಟ್ಟುಹಾಕುವುದಾಗಿ ಬಲಪಂಥೀಯ ಗುಂಪು ಬೆದರಿಕೆ ಹಾಕಿದ ನಂತರ ಮುಂಬೈ ಪ್ರದರ್ಶನಗಳನ್ನು ಫಾರುಖ್ ರದ್ದುಗೊಳಿಸಿದ್ದಾರೆ. ರದ್ದತಿಯ ಕುರಿತು ಟ್ವೀಟ್‌ ಮಾಡಿರುವ ಅವರು, ಪ್ರೇಕ್ಷಕರ ಸುರಕ್ಷತೆಯು ತನಗೆ ಹೆಚ್ಚು ಮುಖ್ಯವಾಗಿದೆ ಹಾಗಾಗಿ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ ಎಂದು ಹೇಳಿದ್ದಾರೆ.

ದೇಶದಲ್ಲಿ ಏನು ನಡೆಯುತ್ತಿದೆ ಎಂದು ಅರ್ಥವಾಗುತ್ತಿಲ್ಲ . ದೊಡ್ಡ ವಿಷಯವೆಂದರೆ ಈ ಮೂರು ಶೋಗಳಿಗೆ, ಒಟ್ಟು 1,500 ಜನರು ಒಂದು ತಿಂಗಳ ಹಿಂದೆಯೇ ಟಿಕೆಟ್ ಖರೀದಿಸಿದ್ದಾರೆ. ಅವರ ಬಗ್ಗೆ ನನಗೆ ಬೇಸರವಾಗಿದೆ”ಎಂದು ಅವರು ಹೇಳಿದ್ದಾರೆ.

“ನಾನು ಬಹುಶಃ ತಪ್ಪು ಮಾಡಿದ್ದೇನೆ ಎಂದು ನಾನು ಕೆಲವೊಮ್ಮೆ ಭಾವಿಸುತ್ತೇನೆ, ಆದರೆ , ಕೆಲವರು ಇದರಿಂದ ರಾಜಕೀಯ ಲಾಭ ಪಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ನನಗೆ ಅರ್ಥವಾಯಿತು” ಎಂದು ಅವರು ಹೇಳಿದ್ದಾರೆ.

ಕಾಮಿಕ್ ಗೆ”ಎಲ್ಲರೂ ಗುರಿಯಾಗಿರುತ್ತಾರೆ” ಆದರೆ “ನನ್ನ ವಿಷಯದಲ್ಲಿ, ಅವರು ಧರ್ಮವನ್ನು ಎಳೆದು ತರುತ್ತಿದ್ದಾರೆ, ಅದು ನನಗೆ ಹೆದರಿಕೆ ತರುತ್ತದೆ” ಎಂದು ಹೇಳಿದ್ದಾರೆ.

ನಾನು ಬಂಧನ ಮತ್ತು ಜಾಮೀನಿನ ನಂತರ, ಸುಮಾರು 50 ಪ್ರದರ್ಶನಗಳಲ್ಲಿ ಪ್ರದರ್ಶನ ನೀಡಿದ್ದೇನೆ ಮತ್ತು ಅವುಗಳಲ್ಲಿ 90 ಪ್ರತಿಶತದಷ್ಟು ಕಾರ್ಯಕ್ರಮದಲ್ಲಿ ಪ್ರೇಕ್ಷಕರು ನಿಂತು ಚಪ್ಪಾಳೆ ತಟ್ಟಿದ್ದಾರೆ ಎಂದು ಫರುಕಿ ಹೇಳಿದರು. “ಯಾರು ಯಾವ ಧರ್ಮ ಅಥವಾ ಜಾತಿಗೆ ಸೇರಿದವರು ಎಂದು ಪ್ರೇಕ್ಷಕರು ಯೋಚಿಸುವುದಿಲ್ಲ ಮತ್ತು ನನ್ನ ಶೋಗಳಲ್ಲಿ ಯಾವುದೇ ಧರ್ಮದ ಬಗ್ಗೆ ಯಾವುದೇ ಕಾಮೆಂಟ್‌ಗಳು ಬಂದಿಲ್ಲ” ಎಂದು ಹೇಳಿದ್ದಾರೆ.

ಎರಡು ಗಂಟೆಗಳ ಪ್ರದರ್ಶನದಿಂದ 10 ಸೆಕೆಂಡುಗಳ ಕ್ಲಿಪ್ ಅನ್ನು ಮಾತ್ರ ಪ್ರಸಾರ ಮಾಡುವ ಮೂಲಕ ಬಜರಂಗದಳದ ಸದಸ್ಯರು ತನ್ನನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ಸ್ಟ್ಯಾಂಡ್-ಅಪ್ ಕಲಾವಿದ ಮುನಾವರ್‌ ಫಾರುಖ್ ಹೇಳಿದ್ದಾರೆ.

“ನೀವು ಕ್ಲಿಪ್ ಅನ್ನು out of context ನಲ್ಲಿ ತೋರಿಸಿ ನಾನು (ಹಿಂದೂ ದೇವರುಗಳನ್ನು) ಅವಮಾನಿಸಿದ್ದೇನೆ ಎಂದು ಹೇಳುತ್ತೀರಿ” ಎಂದು ಹೇಳಿದ್ದಾರೆ.

drivers, volunteers and guards ಸೇರಿದಂತೆ 80 ಜನರು ಒಂದೇ ಪ್ರದರ್ಶನದಿಂದ ಜೀವನೋಪಾಯವನ್ನು ರೂಪಿಸಿಕೊಂಡಿದ್ದಾರೆ ಆದರೆ ” ಕಳೆದ ಒಂದೂವರೆ ವರ್ಷಗಳಿಂದ ಇವರು ನಿರುದ್ಯೋಗಿಗಳಾಗಿದ್ದಾರೆ. ಅವರ ಬಗ್ಗೆ ನನಗೆ ಬೇಸರವಾಗಿದೆ” ಎಂದುಬೇಸರ ವ್ಯಕ್ತಪಡಿಸಿದ್ದಾರೆ.

ಕಾರ್ಯಕ್ರಮದ ಮಾಲಿಕ ಅವರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ ಪ್ರೊಗ್ರಾಮ್ ಮಾಡಿ ಎಂದು ಹೇಳುತ್ತಿದ್ದಾರೆ ಆದರೆ ಕಾರ್ಯಕ್ರಮದ ಜಾಗವನ್ನೇ ಸುಟ್ಟು ಹಾಕುತ್ತೇವೆ ಎಂದು ಹೇಳಿದರೆ ಯೋಚನೆ ಮಾಡಲೇಬೇಕಾಗುತ್ತದೆ. ಹಾಗಾಗಿ ಕಾರ್ಯಕ್ರಮವನ್ನು ರದ್ದುಗೊಳಿಸಿದ್ದೇವೆ. ಈ ಸ್ವತಂತ್ರ ದೇಶದಲ್ಲಿ ಈತರದ ಬೆದರಿಗಳು ತಪ್ಪು ಎಂದು ಹೇಳಿದ್ದಾರೆ.

“ದ್ವೇಷ ಗೆದ್ದಿದೆ, ಆದ್ದರಿಂದ ಪ್ರದರ್ಶನಗಳು ರದ್ದುಗೊಂಡಿವೆ. ಆದರೆ ಎಲ್ಲಿಯವರೆಗೆ ಅವರು ಗೆಲ್ಲಲು ಸಾಧ್ಯ? ನಾವು ಗೆದ್ದೇ ಗೆಲ್ಲುತ್ತೇವೆ, ಹಾಗ ಎಲ್ಲೆಡೆ ನಗುವನ್ನು ಹರಡುತ್ತೇವೆ” ಎಂದು ಮುನಾವರ್ ಫಾರುಖ್ ಹೇಳಿದ್ದಾರೆ.

Tags: BJPCongress PartyStandup comedy showSupreme Court of Indiaನರೇಂದ್ರ ಮೋದಿಬಲಪಂಥೀಯಬಿಜೆಪಿಬೆದರಿಕೆ‌ಮುನಾವರ್ ಫಾರುಖ್‌ಸ್ಟ್ಯಾಂಡ್ ಅಪ್ ಕಾಮಿಡಿ
Previous Post

“ನಾವು ಎಡ ಮತ್ತು ಬಲ ಎರಡನ್ನೂ ಮುಗಿಸುತ್ತೇವೆ ” : ತೃಣಮೂಲ ಕಾಂಗ್ರೆಸ್

Next Post

ಸಿಎಂ ಯೋಗಿ ಸ್ವ ಕ್ಷೇತ್ರಕ್ಕೆ ಲಗ್ಗೆ ಇಟ್ಟ ಪ್ರಿಯಾಂಕಾ ಗಾಂಧಿ : ಅಧಿಕಾರಕ್ಕೆ ಬಂದರೆ ಕೃಷಿ ಸಾಲ ಮನ್ನಾ ಮಾಡುವುದಾಗಿ ಭರವಸೆ

Related Posts

Top Story

ಸಿದ್ದು, ಬಿಎಸ್ವೈ ಅವರಂತೆ ಕೆಲಸಮಾಡಿ ಜನಪ್ರಿಯ ನಾಯಕಿಯಾಗೋ ಹುಚ್ಚಿದೆ : ಲಕ್ಷ್ಮಿ ಹೆಬ್ಬಾಳ್ಕರ್ ಭಾವನಾತ್ಮಕ ಮಾತು..

by ಪ್ರತಿಧ್ವನಿ
January 13, 2026
0

ಬೆಂಗಳೂರು: ನಾನು ಎಂಎಲ್ಎ ಆದ ಮೇಲೆ ಬೆಳಗಾವಿ ಗ್ರಾಮಾಂತರ ಕ್ಷೇತ್ರದಲ್ಲಿ ಯಾವ ಜಾತಿ ಗಲಭೆ, ಜಾತಿ ರಾಜಕಾರಣ, ಪೊಲೀಸರ ಮೇಲೆ ಒತ್ತಡ, ಒತ್ತಾಯ ಮಾಡಿಲ್ಲ.ಕುವೆಂಪುರವರು ಹೇಳಿದಂತೆ ನಮ್ಮ...

Read moreDetails

ಇತಿಹಾಸ ಸೃಷ್ಟಿಸಿದ ಕುಣಿಗಲ್ ಉತ್ಸವ ! 35 ಸಾವಿರ ಜನ ಜನರ ಉಪಸ್ಥಿತಿಯಲ್ಲಿ ನಡೆದ ಬೃಹತ್ ತಾರಾಮೇಳ !

January 13, 2026
ಅಕ್ರಮ ತೆರವಿನ ಹೆಸರಿನಲ್ಲಿ ಬಡವರ ಬದುಕು ಧ್ವಂಸ!: ರಾ ಚಿಂತನ್..!!

ಅಕ್ರಮ ತೆರವಿನ ಹೆಸರಿನಲ್ಲಿ ಬಡವರ ಬದುಕು ಧ್ವಂಸ!: ರಾ ಚಿಂತನ್..!!

January 13, 2026
ಮಹಾತ್ಮ ಗಾಂಧಿ ಹೆಸರು ಎಂದರೆ ಬಿಜೆಪಿಗೆ ಅಲರ್ಜಿ: ಸಿ.ಎಂ ಸಿದ್ದರಾಮಯ್ಯ

ಮಹಾತ್ಮ ಗಾಂಧಿ ಹೆಸರು ಎಂದರೆ ಬಿಜೆಪಿಗೆ ಅಲರ್ಜಿ: ಸಿ.ಎಂ ಸಿದ್ದರಾಮಯ್ಯ

January 13, 2026
ರಾಹುಲ್ ಗಾಂಧಿ ಜೊತೆಗೆ ರಾಜಕಾರಣ ಚರ್ಚೆ ಮಾಡಿಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ

ರಾಹುಲ್ ಗಾಂಧಿ ಜೊತೆಗೆ ರಾಜಕಾರಣ ಚರ್ಚೆ ಮಾಡಿಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ

January 13, 2026
Next Post
ಸಿಎಂ ಯೋಗಿ ಸ್ವ ಕ್ಷೇತ್ರಕ್ಕೆ ಲಗ್ಗೆ ಇಟ್ಟ ಪ್ರಿಯಾಂಕಾ ಗಾಂಧಿ : ಅಧಿಕಾರಕ್ಕೆ ಬಂದರೆ ಕೃಷಿ ಸಾಲ ಮನ್ನಾ ಮಾಡುವುದಾಗಿ ಭರವಸೆ

ಸಿಎಂ ಯೋಗಿ ಸ್ವ ಕ್ಷೇತ್ರಕ್ಕೆ ಲಗ್ಗೆ ಇಟ್ಟ ಪ್ರಿಯಾಂಕಾ ಗಾಂಧಿ : ಅಧಿಕಾರಕ್ಕೆ ಬಂದರೆ ಕೃಷಿ ಸಾಲ ಮನ್ನಾ ಮಾಡುವುದಾಗಿ ಭರವಸೆ

Please login to join discussion

Recent News

Sankranti 2026: ಎಳ್ಳು ಬೆಲ್ಲದ ನಡುವೆ ಲೌಕಿಕ ಬದುಕಿನ ಸಿಕ್ಕುಗಳು..!
Top Story

Sankranti 2026: ಎಳ್ಳು ಬೆಲ್ಲದ ನಡುವೆ ಲೌಕಿಕ ಬದುಕಿನ ಸಿಕ್ಕುಗಳು..!

by ನಾ ದಿವಾಕರ
January 14, 2026
Daily Horoscope: ಸಂಕ್ರಾಂತಿಗೆ ಅದೃಷ್ಟ ಹೊತ್ತು ತರುವ ರಾಶಿಗಳಿವು..!
Top Story

Daily Horoscope: ಸಂಕ್ರಾಂತಿಗೆ ಅದೃಷ್ಟ ಹೊತ್ತು ತರುವ ರಾಶಿಗಳಿವು..!

by ಪ್ರತಿಧ್ವನಿ
January 14, 2026
Top Story

ಸಿದ್ದು, ಬಿಎಸ್ವೈ ಅವರಂತೆ ಕೆಲಸಮಾಡಿ ಜನಪ್ರಿಯ ನಾಯಕಿಯಾಗೋ ಹುಚ್ಚಿದೆ : ಲಕ್ಷ್ಮಿ ಹೆಬ್ಬಾಳ್ಕರ್ ಭಾವನಾತ್ಮಕ ಮಾತು..

by ಪ್ರತಿಧ್ವನಿ
January 13, 2026
Top Story

ಇತಿಹಾಸ ಸೃಷ್ಟಿಸಿದ ಕುಣಿಗಲ್ ಉತ್ಸವ ! 35 ಸಾವಿರ ಜನ ಜನರ ಉಪಸ್ಥಿತಿಯಲ್ಲಿ ನಡೆದ ಬೃಹತ್ ತಾರಾಮೇಳ !

by ಪ್ರತಿಧ್ವನಿ
January 13, 2026
ಅಕ್ರಮ ತೆರವಿನ ಹೆಸರಿನಲ್ಲಿ ಬಡವರ ಬದುಕು ಧ್ವಂಸ!: ರಾ ಚಿಂತನ್..!!
Top Story

ಅಕ್ರಮ ತೆರವಿನ ಹೆಸರಿನಲ್ಲಿ ಬಡವರ ಬದುಕು ಧ್ವಂಸ!: ರಾ ಚಿಂತನ್..!!

by ಪ್ರತಿಧ್ವನಿ
January 13, 2026
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Sankranti 2026: ಎಳ್ಳು ಬೆಲ್ಲದ ನಡುವೆ ಲೌಕಿಕ ಬದುಕಿನ ಸಿಕ್ಕುಗಳು..!

Sankranti 2026: ಎಳ್ಳು ಬೆಲ್ಲದ ನಡುವೆ ಲೌಕಿಕ ಬದುಕಿನ ಸಿಕ್ಕುಗಳು..!

January 14, 2026
Daily Horoscope: ಸಂಕ್ರಾಂತಿಗೆ ಅದೃಷ್ಟ ಹೊತ್ತು ತರುವ ರಾಶಿಗಳಿವು..!

Daily Horoscope: ಸಂಕ್ರಾಂತಿಗೆ ಅದೃಷ್ಟ ಹೊತ್ತು ತರುವ ರಾಶಿಗಳಿವು..!

January 14, 2026
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!