• Home
  • About Us
  • ಕರ್ನಾಟಕ
Thursday, October 23, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಅಂಕಣ

ದ್ವೇಷ ಭಾಷಣ, ಹಿಂಸಾಚಾರದ ಸಮರ್ಥನೆ: ಮೋಹನ್ ಭಾಗವತ್ ಹೇಳಿಕೆಯ ಮತ್ತೊಂದು ಮುಖ

Shivakumar A by Shivakumar A
January 17, 2023
in ಅಂಕಣ
0
ದ್ವೇಷ ಭಾಷಣ, ಹಿಂಸಾಚಾರದ ಸಮರ್ಥನೆ: ಮೋಹನ್ ಭಾಗವತ್ ಹೇಳಿಕೆಯ ಮತ್ತೊಂದು ಮುಖ
Share on WhatsAppShare on FacebookShare on Telegram

“ಹಿಂದೂ ಸಮಾಜ ಯುದ್ಧದ ಪರಿಸ್ಥಿತಿಯಲ್ಲಿದೆ” ಇದು ಆರ್ಎಸ್ಎಸ್ ಸರಸಂಘಚಾಲಕ ಮೋಹನ್ ಭಾಗವತ್ ನೀಡಿರುವ ಹೇಳಿಕೆ. ಇದು ಬಲಪಂಥೀಯ ಸಂಘಟನೆಯೊಂದರ ಮುಖ್ಯಸ್ಥ ನೀಡುವ ಸಾಮಾನ್ಯ ಹೇಳಿಕೆ ಎಂದು ಸಾರಾಸಗಟಾಗಿ ತಳ್ಳಿ ಹಾಕುವಂತಿಲ್ಲ. ದೇಶದಲ್ಲಿ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ಪ್ರತಿಯೊಂದು ದೌರ್ಜನ್ಯಗಳನ್ನು ಸಮರ್ಥಿಸಿಕೊಳ್ಳುವ, ಮೂಲಭೂತ ಹಿಂದುತ್ವವಾದಿಗಳ ದ್ವೇಷ ಭಾಷಣಗಳನ್ನು  ಸಮರ್ಥಿಸಿಕೊಳ್ಳುವ ಅತ್ಯಂತ ದುರದೃಷ್ಟಕರ ಹೇಳಿಕೆ ಎಂದರೆ ತಪ್ಪಾಗಲಾರದು.

ADVERTISEMENT

ಭಾಗವತ್ ಅವರ ಮಾತುಗಳನ್ನೇ ನೋಡುವುದಿದ್ದರೆ, ಹಿಂದೂ ಸಮಾಜ ಕಳೆದ ಸಾವಿರ ವರ್ಷಗಳಿಂದ ಯುದ್ಧ ಮಾಡುತ್ತಲೇ ಬಂದಿದೆ. ಈ ಯುದ್ಧ ಇಂದಿಗೂ ನಿಂತಿಲ್ಲ. ಮೊದಲು ವಿದೇಶಿಯರ ವಿರುದ್ಧ, ನಂತರ ವಿದೇಶಿ ಪ್ರಭಾವದ ವಿರುದ್ಧ ಅವೆಲ್ಲದ್ದಕ್ಕಿಂತ ಮಿಗಿಲಾಗಿ ದೇಶದಲ್ಲಿರುವ ಶತ್ರುಗಳ ವಿರುದ್ಧ ಹಿಂದೂ ಸಮಾಜ ಯುದ್ದ ಮಾಡುತ್ತಲೇ ಬಂದಿದೆ. ಇಂತಹ ಸುದೀರ್ಘ ಯುದ್ಧಗಳನ್ನು ಮಾಡುತ್ತಲೇ ಬಂದಿರುವವರಿಂದ ನೀವು ವಿನಮ್ರತೆಯನ್ನು ಎದುರು ನೋಡಲು ಸಾಧ್ಯವೇ ಎಂದು ಭಾಗವತ್ ಪ್ರಶ್ನಿಸಿದ್ದಾರೆ.

ದೇಶದ ಮುಸ್ಲೀಮರು ಮತ್ತು ಕ್ರೈಸ್ತರ ವಿರುದ್ಧ ನಡೆಯುತ್ತಿರುವ ದೌರ್ಜನ್ಯಗಳನ್ನು ಹಾಗೂ ದ್ವೇಷಭಾಷಣಗಳನ್ನು ಸಮರ್ಥಿಸಿಕೊಂಡವರು ಭಾಗವತ್ ಒಬ್ಬರೇ ಅಲ್ಲ. ಈ ಹಿಂದೆಯೂ, ಈಗಲೂ ಹಲವರು ತಲೆ ಕಡೆಯಿರಿ, ಕಾಲುಕಡಿಯಿರಿ, ಅಸ್ತ್ರಗಳನ್ನು ಮನೆಯಲ್ಲಿಡಿ ಎಂಬಂತಹ ಪ್ರಚೋದನಕಾರಿ ಹೇಳಿಕೆಗಳನ್ನು ನೀಡುತ್ತಲೇ ಬಂದಿದ್ದಾರೆ. ಇದಕ್ಕೂ ಮಿಗಿಲಾಗಿ, ಹಿಂದೂಗಳು ಶಸ್ತ್ರಾಸ್ತ್ರಗಳನ್ನು ಹೊಂದಬೇಕು ಎಂದು ನೀಡಿರುವ ಹೇಳಿಕೆ ಸಮುದಾಯದ ಸಂಪ್ರದಾಯ ಮತ್ತು ನೈತಿಕತೆಯನ್ನು ಹೆಚ್ಚಿಸುವಂತದ್ದು ಎಂದು ದೆಹಲಿ ಪೊಲೀಸರು ಸ್ಥಳೀಯ ನ್ಯಾಯಾಲಯಕ್ಕೆ ಸಮಜಾಯಿಷಿ ಕೂಡಾ ನೀಡಿದ್ದಾರೆ. 

ಮೋಹನ್ ಭಾಗವತ್ ಒಬ್ಬ ʼದೊಡ್ಡʼ ವ್ಯಕ್ತಿ. ಅವರು ನೇರವಾಗಿ ಹಿಂದೂ ಸಮುದಾಯವನ್ನು ಹಿಂಸೆಗೆ ಪ್ರಚೋದಿಸಿಲ್ಲದಿರಬಹುದು. ಆದರೆ, ಪ್ರಸ್ತುತ ಹಿಂದೂ ಸಮುದಾಯದ ʼಯುದ್ದʼದ ಪರಿಸ್ಥಿತಿಯನ್ನು ಅವರು ಆನಂದಿಸುತ್ತಿರುವುದಂತೂ ಸತ್ಯ. 

ಮೋಹನ್ ಭಾಗವತ್ ದ್ವೇಷವನ್ನು ಮಾತ್ರ ಇಲ್ಲಿ ಸಮರ್ಥಿಸಿಕೊಳ್ಳುತ್ತಿಲ್ಲ. ಈ ಹಿಂದೆ, ಮುಸ್ಲೀಂ ಮಹಿಳೆಯರ ಸಾಮೂಹಿಕ ಅತ್ಯಾಚಾರ, ಸಾಮೂಹಿಕ ಹತ್ಯಾಕಾಂಡ, ವ್ಯಾಪಾರ ನಿಷೇಧದಂತಹ ಹಲವು ಹೇಳಿಕೆಗಳನ್ನೂ ಅವರು ಸಮರ್ಥಿಸಿಕೊಂಡಿದ್ದಾರೆ. ಯುದ್ದದಲ್ಲಿ ಎಲ್ಲವೂ ಸಾಮಾನ್ಯ ಅಲ್ಲವೇ? ಅದು ಅತ್ಯಾಚಾರವಾದರೇನು? ಹತ್ಯಾಕಾಂಡವಾದರೇನು?

ಭಾಗವತ್ ಹೇಳಿಕೆ ಪ್ರಕಾರ, ಮುಸ್ಲೀಮರಲ್ಲಿ ಒಳ್ಳೆಯವರೂ ಇದ್ದಾರೆ. ಆದರೆ, ಯುದ್ಧ ಮಾಡುತ್ತಿರುವ ಓರ್ವ ಹಿಂದೂ ಒಳ್ಳೆಯ ಮುಸ್ಲೀಂ ಮತ್ತು ಕೆಟ್ಟ ಮುಸ್ಲಿಂ ಎಂಬ ವ್ಯತ್ಯಾಸವನ್ನು ಗಮನಿಸಬಲ್ಲನೇ? ನಿಜಕ್ಕೂ ಒಳ್ಳೆಯ ಮುಸ್ಲೀಮರು ಎಂದರೆ ಯಾರು? ಅಥವಾ Everything is fair in love and war ಎಂಬ ಆಂಗ್ಲ ಗಾದೆಯನ್ನು ಮುಂದಿಟ್ಟು, ಎಲ್ಲಾ ಮುಸ್ಲೀಮರ ಮೇಲಿನ ದೌರ್ಜನ್ಯವನ್ನು ಮೋಹನ್ ಭಾಗವತ್ ಸಮರ್ಥಿಸಿಕೊಂಡರೇ?

ಗುಜರಾತ್ನ ಗೋದ್ರಾ ಹತ್ಯಾಕಾಂಡದ ಬಳಿಕ ಹೇಳಿಕೆ ನೀಡಿದ ವಿಹೆಚ್ಪಿ ಮುಖಂಡ ಕೆ ಕೆ ಶಾಸ್ತ್ರಿ, ಯುವಕರು ಹಲವು ಬಾರಿ ತಮ್ಮ ಎಲ್ಲೆಯನ್ನು ಮೀರಿ ಅತಿರೇಕದ ವರ್ತನೆ ತೋರಿದ್ದಾರೆ. ಅದು ಸರಿ ಎಂದು ನಾನು ಹೇಳುವುದಿಲ್ಲ. ಆದರೆ, ಅದನ್ ತಪ್ಪೆಂದು ನಾನು ಹೇಳು ಆಗುವುದಿಲ್ಲ. ಏಕೆಂದರೆ ಅವರು ನಮ್ಮ ಯುವಕರು. ನಮ್ಮ ಮನೆಯ ಹುಡುಗರು ಏನಾದರೂ ಮಾಡಿದರೆ ಅದನ್ನು ತಪ್ಪೆಂದು ಹೇಳಲು ಆಗುತ್ತದೆಯೇ? ಎಂದು ಪ್ರಶ್ನಿಸಿದ್ದಾರೆ. ಮೋಹನ್ ಭಾಗವತ್ ಹೇಳಿಕೆ ಸರಿಸುಮಾರು ಇದೇ ಧಾಟಿಯಲ್ಲಿದೆ. ಯುದ್ಧದಲ್ಲಿ ಅತಿರೇಕ ಎನ್ನುವುದು ಸಾಮಾನ್ಯ ಅಲ್ಲವೇ?

ಹಿಂದಿನಿಂದಲೂ ಮುಸ್ಲೀಂ ಹಾಘೂ ಕ್ರೈಸ್ತ ವಿರೋಧಿ ಧೋರಣೆಯಿಂದಲೇ ಬೆಳೆದು ಬಂದಿರುವ ಆರ್ಎಸ್ಎಸ್, ಈಗ ತನ್ನ ಧೋರಣೆಯನ್ನು ಬಹಿರಂಗವಾಗಿ ಪ್ರಚಾರ ಮಾಡುತ್ತಿದೆ. ಯುದ್ದದಲ್ಲಿರುವ ಹಿಂದೂ ಸಮಾಜ (ಸಂಘಪರಿವಾರ?) ಯಾವ ರೀತಿಯ ಕುಕೃತ್ಯಗಳನ್ನು ಮಾಡಿದರೂ ಅದಕ್ಕೆ ಬೆಂಬಲವಿದೆ ಎಂಬ ಸಂದೇಶವನ್ನು ಭಾಗವತ್ ರವಾನಿಸಿದ್ದಾರೆ.

ಒಟ್ಟಿನಲ್ಲಿ, ಮುಂಬರುವ ದಿನಗಳಲ್ಲಿ ಈ ಯುದ್ಧವು ದೇಶದ ಮುಸ್ಲೀಮರಿಗೆ ಮತ್ತು ಕ್ರೈಸ್ತರಿಗೆ ಮಾರಕವಾಗಿ ಪರಿಣಮಿಸಲಿದೆ. ಯುದ್ದದ ವೇಳೆ ನಡೆಯುವ ʼಅತಿರೇಕʼದ ಕೃತ್ಯಗಳು ಸರ್ವೇ ಸಾಮಾನ್ಯವಾಗಲಿವೆ ಎಂಬ ಪರೋಕ್ಷವಾದ ಎಚ್ಚರಿಕೆಯನ್ನು ಮೋಹನ್ ಭಾಗವತ್ ರವಾನಿಸಿದ್ದಾರೆ.

ReplyForward
Tags: Mohan BhagwatRSSrss mohan bhagwatಬಿಜೆಪಿ
Previous Post

ಮಗನ ಸಾವನ್ನು ನೋಡಲು ಸಾಧ್ಯವಿಲ್ಲ ಎಂದು ತಾಯಿ ಆತ್ಮಹತ್ಯೆ..!

Next Post

ಸರ್ಕಾರಗಳ ಮುಸ್ಲಿಂ ದ್ವೇಷ: ಬುಲ್ಡೋಜರ್ ಕಾರ್ಯಾಚರಣೆಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ HRW ವರದಿ

Related Posts

Top Story

CM Siddaramaiah: ಗಾಂಧಿನಗರ ವಿಧಾನಸಭಾ ಕ್ಷೇತ್ರದ ಚಿಕ್ಕಪೇಟೆಯ ಆಧುನೀಕರಣಕ್ಕೆ ಚಾಲನೆ ನೀಡಿದ ಸಿಎಂ..!!

by ಪ್ರತಿಧ್ವನಿ
October 21, 2025
0

ದಿನೇಶ್ ಗುಂಡೂರಾವ್ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಮಾತ್ರ ಶ್ರಮಿಸುವ ಜನಮುಖಿ ಶಾಸಕ: ಸಿ.ಎಂ ಮೆಚ್ಚುಗೆ ದಿನೇಶ್ ಗುಂಡೂರಾವ್ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಮಾತ್ರ ಶ್ರಮಿಸುವ ಜನಮುಖಿ ಶಾಸಕರು....

Read moreDetails

DK Shivakumar: 4 ಸಾವಿರ ಕೋಟಿ ವೆಚ್ಚದಲ್ಲಿ 500 ಕಿ.ಮೀ ರಸ್ತೆಗೆ ವೈಟ್‌ ಟಾಪಿಂಗ್ ಡಿಪಿಆರ್ ಸಿದ್ಧತೆ..!!

October 21, 2025

Green Kannada Movie: ರಾಜ್ ವಿಜಯ್ ನಿರ್ದೇಶನದ “ಗ್ರೀನ್” ಚಿತ್ರ ಈ ವಾರ ತೆರೆಗೆ..!!

October 21, 2025

ನೀಲಕಂಠ ಫಿಲಂಸ್ ಹಾಗೂ ಧರ್ಮಶ್ರೀ ಎಂಟರ್ ಪ್ರೈಸಸ್ ನಿರ್ಮಾಣದ ವಿಭಿನ್ನ ಶೀರ್ಷಿಕೆಯ “4.30 – 6 ಮುಹೂರ್ತ. ನಾಲ್ವರು ಕಾಣಿಸುತ್ತಿಲ್ಲ” ಚಿತ್ರಕ್ಕೆ ಚಾಲನೆ

October 19, 2025

DK Shivakumar: ಗುತ್ತಿಗೆದಾರಾರ ನೋವು ಅರ್ಥವಾಗುತ್ತದೆ, ಆದರೆ ಯಾರೂ ಸರ್ಕಾರಕ್ಕೆ ಬೆದರಿಕೆ ಹಾಕಲು ಸಾಧ್ಯವಿಲ್ಲ..!!

October 19, 2025
Next Post
ಸರ್ಕಾರಗಳ ಮುಸ್ಲಿಂ ದ್ವೇಷ: ಬುಲ್ಡೋಜರ್ ಕಾರ್ಯಾಚರಣೆಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ HRW ವರದಿ

ಸರ್ಕಾರಗಳ ಮುಸ್ಲಿಂ ದ್ವೇಷ: ಬುಲ್ಡೋಜರ್ ಕಾರ್ಯಾಚರಣೆಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ HRW ವರದಿ

Please login to join discussion

Recent News

ರೇಣುಕಾಸ್ವಾಮಿ ಕೊಲೆ‌ ಆರೋಪಿ ಪ್ರದೋಶ್ ತಂದೆ ನಿಧನ
Top Story

ರೇಣುಕಾಸ್ವಾಮಿ ಕೊಲೆ‌ ಆರೋಪಿ ಪ್ರದೋಶ್ ತಂದೆ ನಿಧನ

by ಪ್ರತಿಧ್ವನಿ
October 23, 2025
BSY ವಿರುದ್ಧ ಪೊಕ್ಸೋ ಕೇಸ್- ಆದೇಶ ಕಾಯ್ದಿರಿಸಿದ ಹೈಕೋರ್ಟ್
Top Story

BSY ವಿರುದ್ಧ ಪೊಕ್ಸೋ ಕೇಸ್- ಆದೇಶ ಕಾಯ್ದಿರಿಸಿದ ಹೈಕೋರ್ಟ್

by ಪ್ರತಿಧ್ವನಿ
October 23, 2025
ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಬೆಂಬಲಿಕ ಶಾಸಕ ಕಿಡಿ
Top Story

ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಬೆಂಬಲಿಕ ಶಾಸಕ ಕಿಡಿ

by ಪ್ರತಿಧ್ವನಿ
October 23, 2025
ಒಕ್ಕೂಟ ಸರ್ಕಾರದ ಅನುದಾನ ತಾರತಮ್ಯ ಚರ್ಚೆ- ಸಿದ್ದರಾಮಯ್ಯ ವಿರುದ್ಧ ಜೋಷಿ ಕಿಡಿ
Top Story

ಒಕ್ಕೂಟ ಸರ್ಕಾರದ ಅನುದಾನ ತಾರತಮ್ಯ ಚರ್ಚೆ- ಸಿದ್ದರಾಮಯ್ಯ ವಿರುದ್ಧ ಜೋಷಿ ಕಿಡಿ

by ಪ್ರತಿಧ್ವನಿ
October 23, 2025
ಡಿಕೆಶಿಯನ್ನ ಗಂಗಾನದಿಯಲ್ಲಿ ಮುಳುಗಿಸಿದಂತಾಗಿದೆ
Top Story

ಡಿಕೆಶಿಯನ್ನ ಗಂಗಾನದಿಯಲ್ಲಿ ಮುಳುಗಿಸಿದಂತಾಗಿದೆ

by ಪ್ರತಿಧ್ವನಿ
October 23, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ರೇಣುಕಾಸ್ವಾಮಿ ಕೊಲೆ‌ ಆರೋಪಿ ಪ್ರದೋಶ್ ತಂದೆ ನಿಧನ

ರೇಣುಕಾಸ್ವಾಮಿ ಕೊಲೆ‌ ಆರೋಪಿ ಪ್ರದೋಶ್ ತಂದೆ ನಿಧನ

October 23, 2025
BSY ವಿರುದ್ಧ ಪೊಕ್ಸೋ ಕೇಸ್- ಆದೇಶ ಕಾಯ್ದಿರಿಸಿದ ಹೈಕೋರ್ಟ್

BSY ವಿರುದ್ಧ ಪೊಕ್ಸೋ ಕೇಸ್- ಆದೇಶ ಕಾಯ್ದಿರಿಸಿದ ಹೈಕೋರ್ಟ್

October 23, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada