ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಸಿಎಂ ಸಿದ್ದರಾಮಯ್ಯ ಅವರ ಪ್ರಮಾಣವಚನ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅಬ್ಬರದ ಭಾಷಣವನ್ನು ಮಾಡಿದ್ರು ಇಂದು ನಡೆದ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಅವರು ಪ್ರಮಾಣವಚನ ಸ್ವೀಕರಿಸಿದ್ದರು ಇದೇ ವೇಳೆ ಎಂಟು ಮಂದಿ ಸಚಿವರು ಕೂಡ ಪ್ರಮಾಣವಚನ ಸ್ವೀಕರಿಸಿದ್ರು. ಬಳಿಕ ರಾಜ್ಯದ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಅಧಿನಾಯಕ ರಾಹುಲ್ ಗಾಂಧಿ
ಕಾಂಗ್ರೆಸ್ ಕರ್ನಾಟಕದ ಜನತೆಗೆ ಯಾವೆಲ್ಲ ಭರವಸೆಗಳನ್ನು ಕೊಟ್ಟಿತ್ತು ಆ ಎಲ್ಲಾ ಭರವಸೆಗಳನ್ನು ಈಡೇರಿಸುತ್ತದೆ ಎಲ್ಲಾ ಗ್ಯಾರೆಂಟಿಗಳನ್ನ ನಾವು ಈಡೇರಿಸುತ್ತೇವೆ ಎಂದು ಹೇಳಿದರು ಜೊತೆಗೆ ಕಾಂಗ್ರೆಸ್ ಪಕ್ಷವನ್ನ ಕನ್ನಡಿಗರು ಗೆಲ್ಲಿಸಿದ್ದಕ್ಕಾಗಿ ಧನ್ಯವಾದಗಳು ಕೂಡ ಹೇಳಿದ್ರು
ಇನ್ನು ಈ ಹಿಂದೆ ಭಾರತ ಜೋಡೋ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಹೇಳಿದ್ದ ಮಾತಿನ ವಿಡಿಯೋವೊಂದು ಈ ಬಾರಿ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿದ ಬಳಿಕ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಆ ವಿಡಿಯೋದಲ್ಲಿ ರಾಹುಲ್ ಗಾಂಧಿ “ದ್ವೇಷದ ಬಜಾರ್ ನಲ್ಲಿ, ಪ್ರೇಮದ ಅಂಗಡಿಯನ್ನ ತೆರೆಯುತ್ತೇವೆ” ಎಂದು ಹೇಳಿದರು ಈ ವಿಡಿಯೋ ದೇಶಾದ್ಯಂತ ಸಂಚಲನವನ್ನ ಹುಟ್ಟು ಹಾಕಿತ್ತು
ಇದೀಗ ಇಂತಹದೇ ಒಂದು ಹೇಳಿಕೆಯನ್ನು ರಾಹುಲ್ ಗಾಂಧಿ ಕಂಠೀರವ ಕ್ರೀಡಾಂಗಣದಲ್ಲಿ ಹೇಳಿದ್ದಾರೆ ಅದು ನೆಟ್ಟಿಗರ ಮನ ಗೆಲ್ಲುತ್ತಿದೆ. ಭಾರತ ಜೋಡೋ ಯಾತ್ರೆಯಿಂದ ದ್ವೇಷ ಸೋತಿದೆ ಪ್ರೀತಿ ಗೆದ್ದಿದೆ. ಚುನಾವಣೆಯಲ್ಲಿ ಕಾಂಗ್ರೆಸ್ ವಿಜಯ ಸಾಧಿಸಿದ ಬಳಿಕ ಗೆಲುವಿಗೆ ನಾನ ಕಾರಣಗಳನ್ನ ಹೇಳಲಾಯಿತು. ಹಲವು ವಿಶ್ಲೇಷಣೆಗಳನ್ನು ಮಾಡಲಾಯಿತು ಈ ಗೆಲುವಿಗೆ ಕಾರಣ ಬಡವರು ದಲಿತರು ಆದಿವಾಸಿಗಳು ಮತ್ತು ಹಿಂದುಳಿದವರು ನಮ್ಮ ಜೊತೆಗೆ ನಿಂತಿದ್ದು ನಮ್ಮ ದಿಗ್ವಿಜಯಕ್ಕೆ ಕಾರಣವಾಗಿದೆ ಎಂದು ಹೇಳಿದ್ದಾರೆ.
ಇಲ್ಲಿ ಪ್ರಮುಖವಾಗಿ ಭಾರತ ಜೋಡು ಯಾತ್ರೆಯಿಂದ ದ್ವೇಷ ಸೂತಿದೆ ಪ್ರೀತಿ ಗೆದ್ದಿದೆ ಎಂಬ ಹೇಳಿಕೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗ್ತಾ ಇದೆ. ಇನ್ನು ಎದೆ ವೇಳೆ ಕಾಂಗ್ರೆಸ್ನ ಗ್ಯಾರಂಟಿಗಳ ಬಗ್ಗೆ ಮಾತನಾಡಿದ ರಾಹುಲ್ ಗಾಂಧಿ ಚುನಾವಣೆ ವೇಳೆ ನಾವು ನಿಮಗೆ ಐದು ಭರವಸೆಗಳನ್ನ ನೀಡಿದ್ದೆವು ಗ್ರಹಲಕ್ಷ್ಮಿ, ಗ್ರಹ ಜ್ಯೋತಿ ಅನ್ನಭಾಗ್ಯ ಮಹಿಳೆಯರಿಗೆ ಉಚಿತ ಬಸ್ ಪಾಸ್ ಇವನಿಗೆ ಗ್ಯಾರೆಂಟಿಗಳನ್ನ ನಾವು ನೀಡಿದ್ದೆವು ಅವುಗಳನ್ನ ಈಡೇರಿಸುತ್ತೇವೆ ಸುಳ್ಳು ಭರವಸೆಗಳನ್ನ ಕಾಂಗ್ರೆಸ್ ಎಂದಿಗೂ ನೀಡುವುದಿಲ್ಲ ಎಂಬ ಹೇಳಿಕೆಯನ್ನು ನೀಡಿದ್ದಾರೆ ಕೇವಲ ಇಷ್ಟು ಮಾತ್ರವಲ್ಲದೆ ರಾಜ್ಯದ ಮೊದಲ ಸಂಪುಟ ಸಭೆಯಲ್ಲಿಯೇ ಐದು ಗ್ಯಾರಂಟಿಗಳನ್ನು ಜಾರಿಗೆ ತರಲಾಗುತ್ತದೆ ರಾಜ್ಯದ ಜನತೆಗೆ ಸ್ವಚ್ಛ ಭ್ರಷ್ಟಾಚಾರ ರಹಿತ ಸರ್ಕಾರವನ್ನು ನೀಡುತ್ತೇವೆ ಅಂತ ಆಶ್ವಾಸನೆಯನ್ನು ನೀಡಿದ್ದಾರೆ