ನಟ ಹಾಗೂ ಸಾಮಾಜಿಕ ಚಿಂತಕ ಚೇತನ್ ಒಂದಲ್ಲ ಒಂದು ವಿವಾದಗಳನ್ನು ತಮ್ಮ ಮೈ ಮೇಲೆ ಎಳೆದುಕೊಳ್ಳುತ್ತದೆ ಇರುತ್ತಾರೆ. ಅವರ ಈ ವಿವಾದಗಳು ಕೆಲವೊಮ್ಮೆ ಪ್ರಬಲ ವರ್ಗಗಳ ಆಕ್ರೋಶಕ್ಕೆ ಹಾಗೂ ಕೆಲ ಸಂಘಟನೆಗಳ ಕೆಂಗಣ್ಣಿಗೆ ಕೂಡ ಗುರಿಯಾಗುತ್ತವೆ.
ಹೆಚ್ಚು ಓದಿದ ಸ್ಟೋರಿಗಳು
ಅದರಲ್ಲೂ ಪ್ರತಿ ಬಾರಿ ಚೇತನ್ ಯಾವುದೇ ವಿಚಾರವನ್ನು ಮಾತನಾಡಬೇಕಾದರೂ ಅವುಗಳ ಬಗ್ಗೆ ಲಯ ಮತ್ತು ಹಿಡಿತವಿಲ್ಲದೆ ಮಾತನಾಡುವುದರಿಂದ ಸಾಕಷ್ಟು ಎಡವಟ್ಟುಗಳನ್ನ ಮಾಡಿಕೊಳ್ಳುತ್ತಲೇ ಇರುತ್ತಾರೆ ಈ ಎಡವಟ್ಟುಗಳಿಂದಾಗಿ ನಟ ಚೇತನ್ ಕೆಲವೊಮ್ಮೆ ನಗೆ ಪಾಟಲಿಗೆ ಈಡಾಗಿದ್ದು ಕೂಡ ಉಂಟು. ಸಾಕಷ್ಟು ಬಾರಿ ಸಾಮಾಜಿಕ ಜಾಲತಾಣದಲ್ಲಿ ಕೂಡ ಹಲವಾರು ವಿವಾದಗಳನ್ನ ಚೇತನ್ ತಮ್ಮ ಮೈಮೇಲೆ ಎಳೆದುಕೊಂಡಿದ್ದಾರೆ ಈ ವಿವಾದಗಳಿಂದ ಕೆಲ ಸಮಯ ಜೈಲು ಸೇರಿರುವ ಉದಾಹರಣೆಗಳು ಕೂಡ ಇವೆ. ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಚೇತನ್ ಹಂಚಿಕೊಂಡ ಸಾಕಷ್ಟು ವಿವಾದಾತ್ಮಕ ವಿಚಾರಗಳು ಹಲವು ಚರ್ಚೆಗಳನ್ನು ಹುಟ್ಟುಹಾಕಿವೆ.


ಇದೀಗ ಇಂತಹದ್ದೇ ಒಂದು ವಿವಾದವನ್ನು ಮತ್ತೆ ನಟ ಚೇತನ್ ತಮ್ಮ ಮೇಲೆ ತಿಳಿದುಕೊಂಡಿದ್ದಾರೆ ಅದು ಕೂಡ ಈ ಬಾರಿ ಸಿದ್ದರಾಮಯ್ಯರವರನ್ನ ಟೀಕೆ ಮಾಡಿ ಹಲವು ಚರ್ಚೆಗಳಿಗೆ ಗ್ರಾಸವಾಗಿದ್ದಾರೆ. ಇಂದು ಸಿದ್ದರಾಮಯ್ಯನವರ ಪ್ರತಿಜ್ಞಾವಿಧಿ ಸ್ವೀಕಾರ ಸಮಾರಂಭದ ಬಗ್ಗೆ ಟೀಕೆ ಮಾಡಿರುವ ನಟ ಚೇತನ್

‘ವಿಚಾರವಾದಿ’ ಎಂದು ಕರೆಸಿಕೊಳ್ಳುವ ಸಿದ್ದರಾಮಯ್ಯ ಅವರು ಕರ್ನಾಟಕದ ಸಿಎಂ ಆಗಿ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರಾ? ಯಾವ/ಯಾರು ದೇವರು? ದೇವರು ಎಲ್ಲಿದ್ದಾನೆ/ಳೆ/ರೆ? ಇದು ನಿರ್ದಿಷ್ಟವಾದ ಸೈದ್ಧಾಂತಿಕ ಆರಂಭವಲ್ಲ” ಎಂದು ಹೇಳಿದ್ದಾರೆ. ಇದರ ಜೊತೆಗೆ ಇಂದು ಸಚಿವರಾಗಿ ಪ್ರತಿಜ್ಞಾವಿಧಿ ಸ್ವೀಕರಿಸಿದ ಸತೀಶ್ ಜಾರಕಿಹೊಳಿಯವರನ್ನು ಉದ್ದೇಶಿಸಿ ಕೂಡ ನಟ ಚೇತನ್ ಉದ್ದೇಶಿಸಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ

” ಶಾಸಕ ಸತೀಶ ಜಾರಕಿಹೊಳಿ ಅವರು ‘ಬುದ್ಧ-ಬಸವ-ಅಂಬೇಡ್ಕರ್’ ಅಡಿಯಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಕಾಂಗ್ರೆಸ್ ಪಕ್ಷವು ತನ್ನ ಸ್ವ-ಲಾಭದಾಯಕ ರಾಜಕೀಯ ಅಧಿಕಾರಕ್ಕಾಗಿ ನಮ್ಮ ಸಮಾನತೆಯ ಐಕಾನ್ಗಳನ್ನು ಯಾವಾಗಲೂ ಹೈಜಾಕ್ ಮಾಡಿದೆ. ಎಸ್ಟಿ ನಾಯಕ ಸಮುದಾಯದ ಸತೀಶ್ ಜಾರಕಿಹೊಳಿ ಶೋಷಿತ ಎಸ್ಟಿಗಳಿಗೆ ಒಳಮೀಸಲಾತಿಯನ್ನು ಬೆಂಬಲಿಸುತ್ತಾರೆಯೇ? ಅಥವಾ ಬುದ್ಧ-ಬಸವ-ಅಂಬೇಡ್ಕರ್ ಕೇವಲ ಗಿಮಿಕ್ ಮಾತ್ರವೇ?” ಎಂದು ನೂತನ ಸಚಿವ ಸತೀಶ್ ಜಾರಕಿಹೊಳಿಯವರ ವಿರುದ್ಧವೂ ಕೂಡ ಕಿಡಿಕಾರಿದ್ದಾರೆ.
ಒಟ್ಟಾರೆಯಾಗಿ ನಟ ಚೇತನ್ ಸಾಮಾಜಿಕ ಜಾಲತಾಣದಲ್ಲಿ ಈ ರೀತಿಯಾಗಿ ಬರೆದುಕೊಂಡಿರುವುದು ಕಾಂಗ್ರೆಸಿಗರ ಹಾಗೂ ಸಿಎಂ ಸಿದ್ದರಾಮಯ್ಯ, ಸತೀಶ್ ಜಾರಕಿಹೊಳಿ ಅವರ ಅಭಿಮಾನಿಗಳ ಆಕ್ರೋಶಕ್ಕೆ ಕೂಡ ಕಾರಣವಾಗಿದೆ