ಮನುಷ್ಯನ ಜೀವನದಲ್ಲಿ ಯಾವಾಗ ಏನಾಗುತ್ತದೆ ಎಂಬುದು ಯಾರಿಗೂ ಗೊತ್ತಿರುವುದಿಲ್ಲ ಅದರಂತೆ ಈಗಿದ್ದ ವ್ಯಕ್ತಿ ಮುಂದೆ ಇರುತ್ತಾರೆಯೇ ಎಂಬ ಗ್ಯಾರಂಟಿ ಇರುವುದಿಲ್ಲ.
ಅದಕ್ಕೆ ಪೂರವೆಂಬಂತೆ ಗಣಪತಿ ಉತ್ಸವ ಒಂದರಲ್ಲಿ ಆಂಜನೇಯನ ವೇಷ ಧರಿಸಿ ವ್ಯಕ್ತಿಯೊಬ್ಬ ಡ್ಯಾನ್ಸ್ ಮಾಡುವ ವೇಳೆ ಹಠಾತ್ ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.
ಇದೀಗ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದು ಮೃತ ವ್ಯಕ್ತಿಯನ್ನು ರವಿಕುಮಾರ್(35) ಎಂದು ಗುರುತಿಸಲಾಗಿದೆ. ಗಣೇಶನ ಮಂಟಪದಲ್ಲಿ ದರ್ಶನ ಪಡೆಯಲು ಬಂದವರಿಗೆ ನೃತ್ಯ ಮಾಡಿ ಮನರಂಜಿಸುತ್ತಿದ್ದರು ಎಂದು ತಿಳಿದು ಬಂದಿದೆ.
ಡ್ಯಾನ್ಸ್ ಮಾಡುವ ವೇಳೆಯೇ ರವಿಕುಮಾರ್ ಕುಸಿದುಬಿದಿದ್ದು ಕೆಲಕಾಲ ಮೇಲೆಳೆ ಇಲ್ಲ ಇದನ್ನು ಗಮನಿಸಿದ ಯುವಕರಿಬ್ಬರು ಹತ್ತಿರ ಬಂದು ಎಬ್ಬಿಸಲು ಪ್ರಯತ್ನಿಸಿದಾಗ ಹೃದಯಘಾತದಿಂದ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.