ಮೊಬೈಲ್ ಅಂಗಡಿಯಲ್ಲಿ (mobile shop) ಆಜಾನ್ ಸಂದರ್ಭದಲ್ಲಿ ಹನುಮಾನ್ ಚಾಲೀಸಾ (Hanuman chalisa) ಹಾಕಿದ್ದಕ್ಕೆ ದುಷ್ಕರ್ಮಿಗಳು ತಗಾದೆ ತೆಗೆದು ಹನುಮಾನ್ ಚಾಲೀಸಾ ಬಂದ್ ಮಾಡುವಂತೆ ಒತ್ತಾಯಿಸಿ ಅಂಗಡಿ ಮಾಲೀಕನ ಮೇಲೆ ಹಲ್ಲೆ ನಡೆಸಿದ್ದ ಘಟನೆ ಬೆಂಗಳೂರಿನ (Bangalore) ನಗರ್ತಪೇಟೆಯಲ್ಲಿ (Nagarthpete) ನಡೆದಿತ್ತು. ಈ ಕೃತ್ಯದ ಸಿಸಿ ಟಿವಿ (cctv) ಫೂಟೇಜ್ ಕೂಡ ಈಗಾಗಲೇ ಲಭ್ಯವಾಗಿದ್ದು , ದೂರು ದಾಖಲಿಸಿಕೊಂಡ ಪೊಲೀಸರು (Bangalore police) 3 ಆರೋಪಿಗಳನ್ನು ಬಂಧಿಸಿದ್ರು. ಆದ್ರೆ ಇದೀಗ ಈ ಘಟನೆ ರಾಜಕೀಯ ಸ್ವರೂಪ ಪಡೆದುಕೊಳ್ಳಿದೆ.
ಈ ಘಟನೆಯನ್ನ ತೀವ್ರವಾಗಿ ಖಂಡಿಸಿರುವ ಬಿಜೆಪಿ (bjp) ನಾಯಕರು ಇಂದು ಅದೇ ಅಂಗಡಿಯಿಂದ ಪ್ರತಿಭಟನಾ ರ್ಯಾಲಿ (Rally) ಹೊರಡಲು ಮುಂದಾಗಿದ್ದರು. ಎಲ್ಲಿ ಹಲ್ಲೆ ಮಾಡಲಾಯ್ತೋ ಅದೇ ಅಂಗಡಿಯಲ್ಲಿ ಹನುಮಾನ್ ಚಾಲೀಸಾ ಪಠಿಸಿ ರ್ಯಾಲಿ ಮಾಡೋ ಮೂಲಕ ಸಂದೇಶ ರವಾನಿಸೋ ಪ್ಲಾನ್ ಬಿಜೆಪಿಯದ್ದಾಗಿತ್ತು. ಸಾಕಷ್ಟು ಬಿಜೆಪಿ ನಾಯಕರು (bjp leaders) ಕೂಡ ಇಂದು ಸ್ಥಳದಲ್ಲಿ ಹಾಜರಿದ್ರು. ಸುರೇಶ್ ಕುಮಾರ್ (Suresh kumar ) , ಸಂಸದ ತೇಜಸ್ವಿ ಸೂರ್ಯ (Tejaswi Soorya)ಸೇರಿದಂತೆ ಹಲವಾರು ನಾಯಕರು ಜಮಾಯಿಸಿದ್ರು. ಆದ್ರೆ ಪರಿಸ್ಥಿತಿ ಕೈ ಮೀರದಂತೆ ಪೊಲೀಸರು ಇದಕ್ಕೆ ಅನುವು ಮಾಡಿಕೊಟ್ಟಿಲ್ಲ..
ಬಿಜೆಪಿ ನಡೆಯ ಬಗ್ಗೆ ಕಿಡಿಕಾರಿರುವ ಸಚಿವ ದಿನೇಶ್ (Dinesh gunurao) ಗುಂಡೂರಾವ್ ಬಿಜೆಪಿಯವರು ಇದರಲ್ಲೂ ರಾಜಕಾರಣ ಮಾಡಿ ವಯಕ್ತಿಕ ಬೇಳೆ ಬೇಯಿಸಿಕೊಳ್ಳೋಕ್ಕೆ ಮುಂದಾಗಿದ್ದು ತಪ್ಪು. ತೇಜಸ್ವಿ ಸೂರ್ಯ ಓರ್ವ ಸಂಸದನಾಗಿ (mp)ಬರೀ ಇಂಥ ಕೆಲಸಗಳನ್ನ ಮಾಡೋದು ತಪ್ಪು ಎಂದು ಕಿಡಿಕಾರಿದ್ದು , ಪೊಲೀಸರ(police complaint) ಕಂಪ್ಲೇಂಟ್ ನಲ್ಲಿ ಹನುಮಾನ್ ಚಾಲೀಸ , ಆಜಾನ್ ಯಾವುದರ ಉಲ್ಲೇಖ ಕೂಡ ಆಗಿಲ್ಲ. ಈಗಾಗಲೇ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು ಕ್ರಮ ಕೈಗೊಂಡಿದ್ದಾರೆ. ಈ ಘಟನೆಗೆ ಧರ್ಮದ ಬಣ್ಣ ಕೊಡುವುದು ತಪ್ಪು ಎಂದು ಸಮರ್ಥಿಸಿಕೊಂಡಿದ್ದಾರೆ.