ಉದ್ದವಾದ ದಟ್ಟವಾದ ಕೂದಲು ಬೇಕೆಂದರೆ, ಆರೈಕೆ ಕೂಡ ಅಷ್ಟೇ ಮುಖ್ಯ. ಹಾಗಾಗಿ ಪ್ರತಿದಿನ ತಪ್ಪದೆ ನಾವು ಈ ರೂಟೀನ್ ಅನ್ನ ಫಾಲೋ ಮಾಡೋದ್ರಿಂದ ಲಾಂಗ್ ಮತ್ತು ಸ್ಟ್ರಾಂಗ್ ಕೂದಲು ನಿಮ್ಮದಾಗುತ್ತದೆ.
ಮೊಟ್ಟೆಯ ಬಿಳಿಯ ಭಾಗ
ವಾರಕೆ ಒಮ್ಮೆಯಾದರೂ ಕೂದಲಿಗೆ ಮೊಟ್ಟೆಯ ಬಿಳಿಯ ಭಾಗವನ್ನು ಹಚ್ಚಿ ಒಂದು ಗಂಟೆಗಳ ಕಾಲ ಬಿಟ್ಟು ನಂತರ ತಲೆಗೆ ಸ್ನಾನ ಮಾಡುವುದರಿಂದ ಕೂದಲ ಬೆಳವಣಿಗೆ ಚೆನ್ನಾಗಿರುತ್ತದೆ ಹಾಗೂ ಸಿಲ್ಕಿ ಹೇರ್ ನಿಮ್ಮದಾಗುತ್ತದೆ.
ದಾಸವಾಳದ ಎಲೆಗಳು
ದಾಸವಾಳದ ಎಲೆಗಳನ್ನ ಬಿಡಿಸಿ, ತೊಳೆದು ನಂತರ ರುಬ್ಬಿ ಕೂದಲಿಗೆ ಹಚ್ಚಿ ಅರ್ಧ ಗಂಟೆಗಳ ಕಾಲ ಬಿಟ್ಟು ತಲೆಗೆ ಸ್ನಾನ ಮಾಡುವುದರಿಂದ ತಲೆಯಲ್ಲಿ ಇರುವಂತಹ ಹೊಟ್ಟು ಕಡಿಮೆಯಾಗುತ್ತದೆ. ಹಾಗೂ ಕೂದಲ ಬೆಳವಣಿಗೆ ಕೂಡ ಉತ್ತಮವಾಗಿರುತ್ತದೆ.ಇಲ್ಲವಾದಲ್ಲಿ ದಾಸವಾಳದ ಗಿಡದ ಬೇರನ್ನು ತಲೆಗೆ ಎಣ್ಣೆಯ ಜೊತೆ ಚೆನ್ನಾಗಿ ಕುದಿಸಿ ನಂತರ ಕೂದಲಿಗೆ ಹಚ್ಚುವುದು ಉತ್ತಮ.
ಕರಿಬೇವಿನ ಎಲೆಗಳು
ಕೊಬ್ಬರಿ ಎಣ್ಣೆಯ ಜೊತೆಗೆ ಕರಿಬೇವಿನ ಎಲೆಗಳನ್ನು ಚೆನ್ನಾಗಿ ಕುದಿಸಿ..ನಂತರ ಅದನ್ನು ಕೂದಲಿಗೆ ಹಚ್ಚುವುದರಿಂದ ಡ್ಯಾಂಡ್ರಫ್ ಕಡಿಮೆಯಾಗುತ್ತಾದೇ. ದಟ್ಟವಾದ ಹಾಗೂ ಉದ್ದವಾದ ಕೂದಲು ನಿಮ್ಮದಾಗುತ್ತದೆ.
ಮೆಂತ್ಯೆ
ರಾತ್ರಿ ಮಲಗುವ ಮುನ್ನ ಒಂದೆರಡು ಟೇಬಲ್ ಸ್ಪೂನಷ್ಟು ಮೆಂತ್ಯಯನ್ನು ನೀರಿನಲ್ಲಿ ನೆನೆಹಾಕಿ. ನಂತರ ಬೆಳಿಗ್ಗೆ ಎದ್ದಾಗ ಆ ಮೆಂತ್ಯಯನ್ನು ಚೆನ್ನಾಗಿ ರುಬ್ಬಿ ಕೂದಲಿಗೆ ಹಚ್ಚಬೇಕು.ಇದರಿಂದಾಗಿ ಕೂದಲ ಸ್ಕಾಲ್ಪ್ ಗೆ ಒಳ್ಳೆಯದು.ಹೇರ್ ಫಾಲ್ ಕಡಿಮೆಯಾಗುತ್ತದೆ.