• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, November 13, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಬಾಲಕಿಗೆ ಮಿಡಿದ ಹೆಚ್.ಡಿಕುಮಾರಸ್ವಾಮಿ!

Shivakumar by Shivakumar
November 12, 2026
in Top Story, ಕರ್ನಾಟಕ
0
H.D. Kumaraswamy comes to the aid of a young girl suffering from respiratory problems!
Share on WhatsAppShare on FacebookShare on Telegram

ಬೆಂಗಳೂರು : ಉಸಿರಾಟದ ಸಮಸ್ಯೆಯಿಂದ (Breathing Problem) ಬಳಲುತ್ತಿದ್ದ ಬಾಲಕಿಯೊಬ್ಬರಿಗೆ ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ (Union Minister H.D. Kumaraswamy) ಅವರು ತಮ್ಮ ಸ್ವಂತ ಖರ್ಚಿನಲ್ಲಿ ₹2.50 ಲಕ್ಷ ಮೌಲ್ಯದ ಆಕ್ಸಿಜನ್ ಕಾನ್ಸೆಂಟ್ರೇಟರ್ (Oxygen Concentrator) ಅನ್ನು ಖರೀದಿಸಿ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ADVERTISEMENT

ನಿವಾಸಕ್ಕೆ ಕರೆಸಿ ಉಪಕರಣ ಹಸ್ತಾಂತರ

ರಾಮನಗರ ಜಿಲ್ಲೆಯ ಹಾರೋಹಳ್ಳಿ ತಾಲೂಕಿನ ಮರಳವಾಡಿ ಹೋಬಳಿಯ ಸುಂಡಘಟ್ಟ ಗ್ರಾಮದ ರಾಜಲಕ್ಷ್ಮಿ ಚಂದ್ರು ಅವರ ಪುತ್ರಿಯಾದ 14 ವರ್ಷದ ಕುಮಾರಿ ನವ್ಯಶ್ರೀ ಅವರಿಗೆ ಈ ಉಪಕರಣವನ್ನು ನೀಡಲಾಗಿದೆ. ಗುರುವಾರ ಬೆಳಗ್ಗೆ ಬೆಂಗಳೂರಿನ ಜೆಪಿ ನಗರದ ತಮ್ಮ ನಿವಾಸಕ್ಕೆ ಬಾಲಕಿ ಹಾಗೂ ಪೋಷಕರನ್ನು ಕರೆಸಿಕೊಂಡ ಸಚಿವರು, ಅತ್ಯಗತ್ಯವಾಗಿ ಬೇಕಿದ್ದ ‘ಇಗೋಜೆನ್ ರೋವ್ 6 ಪೋರ್ಟಬಲ್ ಆಕ್ಸಿಜನ್ ಕಾನ್ಸೆಂಟ್ರೇಟರ್’ ಅನ್ನು ಖುದ್ದು ಹಸ್ತಾಂತರಿಸಿದರು.

ಪೋಷಕರ ಅಳಲಿಗೆ ಸ್ಪಂದಿಸಿದ ಕುಮಾರಣ್ಣ

ಒಂಬತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಈ ಪ್ರತಿಭಾವಂತ ವಿದ್ಯಾರ್ಥಿನಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ, ಅತ್ಯುತ್ತಮ ಗುಣಮಟ್ಟದ ಆಕ್ಸಿಜನ್ ಕಾನ್ಸಂಟ್ರೇಟರ್ ಬಳಸುವಂತೆ ವೈದ್ಯರು ಸಲಹೆ ನೀಡಿದ್ದರು. ಬಡತನದ ಕಾರಣ ದುಬಾರಿ ಉಪಕರಣ ಖರೀದಿಸಲು ಅಸಹಾಯಕರಾಗಿದ್ದ ಪೋಷಕರು, ಕಳೆದ ಆಗಸ್ಟ್ 30ರಂದು ಜೆಪಿ ನಗರದ ನಿವಾಸದಲ್ಲಿ ಸಚಿವರನ್ನು ಭೇಟಿಯಾಗಿ ತಮ್ಮ ಅಳಲು ತೋಡಿಕೊಂಡಿದ್ದರು. ಮಗುವಿನ ಜೀವ ರಕ್ಷಿಸುವಂತೆ ಕಣ್ಣೀರು ಹಾಕಿದ್ದರು.

ಸಚಿವರ ಕಾಳಜಿ ಮತ್ತು ಭಾವುಕ ಕ್ಷಣ

ಬಾಲಕಿಯ ಪೋಷಕರ ಮನವಿಗೆ ತಕ್ಷಣವೇ ಸ್ಪಂದಿಸಿದ ಸಚಿವರು, ವೈದ್ಯರಿಂದ ಮಗುವಿನ ಆರೋಗ್ಯದ ಬಗ್ಗೆ ಮಾಹಿತಿ ಪಡೆದು ಸ್ವಂತ ಹಣದಿಂದಲೇ ಉಪಕರಣ ಖರೀದಿಸಿ ಕೊಟ್ಟಿದ್ದಾರೆ. ಇದೇ ವೇಳೆ ಬಾಲಕಿಯೊಂದಿಗೆ ಮಾತನಾಡಿದ ಅವರು, ವೈದ್ಯರ ಚಿಕಿತ್ಸೆಯನ್ನು ಚಾಚೂ ತಪ್ಪದೆ ಪಾಲಿಸುವಂತೆ ಸೂಚಿಸಿದರು. ಮಗುವಿನ ಆರೋಗ್ಯ ನಿರ್ಲಕ್ಷ್ಯ ಮಾಡದೆ ಕಾಲಕಾಲಕ್ಕೆ ಸರಿಯಾದ ಚಿಕಿತ್ಸೆ ಕೊಡಿಸಿ ತಮಗೆ ಮಾಹಿತಿ ನೀಡುವಂತೆ ಪೋಷಕರಿಗೆ ಕಿವಿಮಾತು ಹೇಳಿದರು.

ತಮ್ಮ ನೆರವಿಗೆ ಧಾವಿಸಿದ ಸಚಿವರಿಗೆ ಕೃತಜ್ಞತೆ ಸಲ್ಲಿಸಿದ ಬಾಲಕಿ ನವ್ಯಶ್ರೀ, “ನಿಮ್ಮ ಆಶೀರ್ವಾದದಿಂದ ನನ್ನ ಆರೋಗ್ಯ ಚೆನ್ನಾಗಿ ಆಗುತ್ತದೆ” ಎಂದು ಭಾವುಕಳಾಗಿ ನುಡಿದಾಗ ಸಚಿವರು ಕೂಡ ಭಾವೋದ್ವೇಗಕ್ಕೆ ಒಳಗಾದರು. ಇದೇ ಸಂದರ್ಭದಲ್ಲಿ ಆಕ್ಸಿಜನ್ ಕಾನ್ಸಂಟ್ರೇಟರ್ ತಯಾರಿಸಿದ ಇಗೋಜಿನ್ ಕಂಪನಿಯ ತಂತ್ರಜ್ಞರು, ಉಪಕರಣದ ಬಳಕೆಯ ಬಗ್ಗೆ ಬಾಲಕಿಯ ಪೋಷಕರಿಗೆ ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಿದರು.

  ರೈತರಿಗೆ ಕೇಂದ್ರದ ಗುಡ್‌ನ್ಯೂಸ್‌: ಡಿಎಪಿ, ಎನ್‌ಪಿಕೆಎಸ್‌ ಗೊಬ್ಬರಗಳಿಗೆ ಸಬ್ಸಿಡಿ ಅನುಮೋದನೆ

Tags: breathing problemh.d. kumaraswamyOxygen Concentrator
Previous Post

ರೈತರಿಗೆ ಕೇಂದ್ರದ ಗುಡ್‌ನ್ಯೂಸ್‌: ಡಿಎಪಿ, ಎನ್‌ಪಿಕೆಎಸ್‌ ಗೊಬ್ಬರಗಳಿಗೆ ಸಬ್ಸಿಡಿ ಅನುಮೋದನೆ

Next Post

ಕೊ*ಲೆ ನಡೆದಾಗ ಅಪ್ರಾಪ್ತೆ, ತನಿಖೆ ಆರಂಭವಾದಾಗ ವಯಸ್ಕೆ

Related Posts

ಬೆಂಗಳೂರಿನಲ್ಲಿ ಬಾಡಿಗೆ ಮನೆ ಹುಡುಕಿದ ವಿದ್ಯಾರ್ಥಿಗಳಿಗೆ ಶಾಕ್! ಮನೆ ಮಾಲಕರು ವಿಧಿಸಿದ ಷರತ್ತುಗಳೇನು?
ಕರ್ನಾಟಕ

ಬೆಂಗಳೂರಿನಲ್ಲಿ ಬಾಡಿಗೆ ಮನೆ ಹುಡುಕಿದ ವಿದ್ಯಾರ್ಥಿಗಳಿಗೆ ಶಾಕ್! ಮನೆ ಮಾಲಕರು ವಿಧಿಸಿದ ಷರತ್ತುಗಳೇನು?

by Shivakumar
November 12, 2026
0

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬಾಡಿಗೆ ಮನೆ ಹುಡುಕುವುದು ದಿನದಿಂದ ದಿನಕ್ಕೆ ಸವಾಲಿನ ಕೆಲಸವಾಗುತ್ತಿದೆ. ಅದರಲ್ಲೂ ವಿದ್ಯಾರ್ಥಿಗಳು ಮತ್ತು ಉದ್ಯೋಗಕ್ಕಾಗಿ ನಗರಕ್ಕೆ ಬರುವವರಿಗೆ ಮನೆ ಬಾಡಿಗೆ, ಮುಂಗಡ ಹಣ...

Read moreDetails
ನಾರಾಯಣ ಮೂರ್ತಿಯ ಉದ್ಯೋಗ ಅರ್ಜಿ ತಿರಸ್ಕರಿಸಿದ್ದರೇ ಅಜೀಂ ಪ್ರೇಮ್‌ಜಿ? ವರ್ಷಗಳ ಬಳಿಕ ಹೊರಬಿತ್ತು ಅಚ್ಚರಿಯ ಸತ್ಯ!

ನಾರಾಯಣ ಮೂರ್ತಿಯ ಉದ್ಯೋಗ ಅರ್ಜಿ ತಿರಸ್ಕರಿಸಿದ್ದರೇ ಅಜೀಂ ಪ್ರೇಮ್‌ಜಿ? ವರ್ಷಗಳ ಬಳಿಕ ಹೊರಬಿತ್ತು ಅಚ್ಚರಿಯ ಸತ್ಯ!

November 12, 2026
MDR charges for UPI payments above Rs 2,000: Final decision likely by November 15

2,000 ರೂ. ಮೇಲ್ಪಟ್ಟ ಯುಪಿಐ ಪಾವತಿಗಳಿಗೆ ಎಂಡಿಆರ್ ಶುಲ್ಕ: ನ.15ರೊಳಗೆ ಅಂತಿಮ ನಿರ್ಧಾರ ಸಾಧ್ಯತೆ

November 12, 2026
Priority given to technology-based security measures to enhance the credibility of public examinations: Minister Priyank Kharge

ಸಾರ್ವಜನಿಕ ಪರೀಕ್ಷೆಗಳ ವಿಶ್ವಾಸಾರ್ಹತೆ ಹೆಚ್ಚಿಸಲು ತಂತ್ರಜ್ಞಾನ ಆಧಾರಿತ ಸುರಕ್ಷತಾ ಕ್ರಮಗಳಿಗೆ ಆದ್ಯತೆ: ಸಚಿವ ಪ್ರಿಯಾಂಕ್ ಖರ್ಗೆ

November 12, 2026
Dereliction of duty in land forgery case: Athani PSI Girimallappa Uppara suspended

ಜಮೀನು ಫೋರ್ಜರಿ ಪ್ರಕರಣದಲ್ಲಿ ಕರ್ತವ್ಯ ಲೋಪ: ಅಥಣಿ ಪಿಎಸ್ಐ ಗಿರಿಮಲ್ಲಪ್ಪ ಉಪ್ಪಾರ ಅಮಾನತು

November 12, 2026
Next Post
A minor when the murder took place, an adult when the investigation began.

ಕೊ*ಲೆ ನಡೆದಾಗ ಅಪ್ರಾಪ್ತೆ, ತನಿಖೆ ಆರಂಭವಾದಾಗ ವಯಸ್ಕೆ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada