ಅಲಹಾಬಾದ್ ಹೈಕೋರ್ಟ್ ತೀರ್ಪಿನ ವಿಚಾರವಾಗಿ ಗುಜರಾತ್ ಬಿಜೆಪಿ ಸರ್ಕಾರವು ಗೋ ಹತ್ಯೆಯಲ್ಲಿ ತೊಡಗಿರುವವರ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ಹೇಳಿದೆ. ಆದರೆ ವಿರೋಧ ಪಕ್ಷ ಕಾಂಗ್ರೆಸ್ ಚುನಾವಣೆಯಲ್ಲಿ ಮತ ಪಡೆಯಲು ಹಿಂದೂಗಳು ಪೂಜಿಸುವ ಪ್ರಾಣಿಯನ್ನು ಬಿಜೆಪಿ ಬಳಸುತ್ತಿದೆ ಎಂದು ಆರೋಪಿಸಿದೆ. ಹಸುವನ್ನು ಭಾರತದ ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಬೇಕು ಎಂದು ಅಲಹಾಬಾದ್ ಹೈಕೋರ್ಟ್ ಇತ್ತೀಚೆಗೆ ನೀಡಿದ ತೀರ್ಪಿನ ಹಿನ್ನೆಲೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ವಾಕ್ಸಮರ ನಡೆದಿದೆ.

ಗೋವಿನ ರಕ್ಷಣೆಯನ್ನು ಹಿಂದೂಗಳ ಮೂಲಭೂತ ಹಕ್ಕಾಗಿ ಸೇರಿಸಬೇಕು ಎಂದು ಹೈಕೋರ್ಟ್ ಹೇಳಿತ್ತು. ಗುಜರಾತ್ ಸರ್ಕಾರದ ಉಪಮುಖ್ಯಮಂತ್ರಿ ನಿತಿನ್ ಪಟೇಲ್ ಮತ್ತು ವಿರೋಧ ಪಕ್ಷದ ನಾಯಕ ಪರೇಶ್ ಧನಾನಿ ಗೋವಿನ ರಕ್ಷಣೆಯ ವಿಚಾರದಲ್ಲಿ ಈ ಇಬ್ಬರು ನಾಯಕರು ಆರೋಪ ಮತ್ತು ಪ್ರತ್ಯಾರೋಪಗಳನ್ನು ಮಾಡಿದ್ದಾರೆ.
ಹಸುವನ್ನು ಸಾವಿರಾರು ವರ್ಷಗಳಿಂದ ದೇಶದಲ್ಲಿ ಪೂಜಿಸಲಾಗುತ್ತಿದೆ ನಾವು ಹಸುಗಳನ್ನು ನಮ್ಮ ತಾಯಿ ಎಂದು ಪರಿಗಣಿಸುತ್ತೇವೆ. ನಮ್ಮ ಹಿಂದೂ ಸಂಸ್ಕೃತಿಯಲ್ಲಿ ಮತ್ತು ನಮ್ಮ ದೇಶದಲ್ಲಿ ಗೋವುಗಳನ್ನು "ಗೋ ಮಾತಾ" ಎಂದು ಪೂಜಿಸಲಾಗುತ್ತದೆ ನಾವು ವರ್ಷದಲ್ಲಿ ಅನೇಕ ಸಂದರ್ಭಗಳಲ್ಲಿ ಹಸುಗಳನ್ನು ಪೂಜಿಸುತ್ತೇವೆ,ಎಂದು ಹೃಕೋರ್ಟ್ ತೀರ್ಪಿನ ಕುರಿತು ನಿತಿನ್ ಪಟೇಲ್ ಹೇಳಿದ್ದಾರೆ.
ನಮ್ಮ ನಂಬಿಕೆಗೆ ಅನುಗುಣವಾಗಿ, ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಗೋವುಗಳ ರಕ್ಷಣೆಗಾಗಿ ಕೆಲಸ ಮಾಡುತ್ತಿವೆ. ಗುಜರಾತ್‌ನಲ್ಲಿ, ಗೋಹತ್ಯೆಯ ವಿರುದ್ಧ ಕಾನೂನು ಇದೆ, ಯಾರಾದರೂ ಇಲ್ಲಿ ಹಸುಗಳನ್ನು ಕೊಂದರೆ ಅವರ ವಿರುದ್ಧ ಕಾನೂನಿನ ಪ್ರಕಾರ ಕಠಿಣ ಕ್ರಮ ಕೈಗೊಳ್ಳುತ್ತೇವೆ,ಎಂದು ಅವರು ಹೇಳಿದ್ದಾರೆ.
ಬಿಜೆಪಿ ಮತವನ್ನು ಪಡೆಯಲು ಹಸುಗಳನ್ನು ಮತ್ತು ಗಂಗೆಗೆ ತನ್ನ ಗೌರವವನ್ನು ತೋರಿಸುತ್ತಿದೆ. ಬಿಜೆಪಿ ಸರ್ಕಾರದ ಅಡಿಯಲ್ಲಿ (ಕೇಂದ್ರದಲ್ಲಿ), ಭಾರತದಿಂದ ಇದುವರೆಗೆ ಅತಿ ಹೆಚ್ಚು ಗೋಮಾಂಸ ರಫ್ತು ಆಗುತ್ತಿದ್ದೆ ಜನರು ಇದನ್ನು ಅರಿತಿದ್ದಾರೆ ಎಂದು ಪಟೇಲ್ ಹೇಳಿಕೆ ಕುರಿತು ಕಾಂಗ್ರೆಸ್ ಟೀಕಿಸಿದೆ.
ಹಸುಗಳು ಹಿಂದೂ ಸಂಸ್ಕೃತಿಯಲ್ಲಿ ಪೂಜಿಸಲ್ಪಡುತ್ತವೆ ಮತ್ತು ಸಾವಿರಾರು ವರ್ಷಗಳಿಂದ ಪೂಜಿಸಲ್ಪಡುತ್ತಿರುವುದರಿಂದ ಬಿಜೆಪಿ ರಚನೆಯಾದಾಗಿನಿಂದಲೂ ಜನಸಂಘದ (ಬಿಜೆಪಿಯ ಮುಂಚೂಣಿ) ಕಾಲದಿಂದಲೂ, ನಾವು ಗೋಹತ್ಯೆಯನ್ನು ನಿಷೇಧಿಸಲು ಕಾನೂನಿಗೆ ಒತ್ತಾಯಿಸುತ್ತಿದ್ದೇವೆ. ನಾವು ಗುಜರಾತಿನಲ್ಲಿ ಒಂದೇ ಒಂದು ಪುರಸಭೆಯಲ್ಲಿಯೂ ಅಧಿಕಾರದಲ್ಲಿ ಇಲ್ಲದಿದ್ದಾಗ ಅದಕ್ಕಾಗಿ ಅನೇಕ ಆಂದೋಲನಗಳನ್ನು ಮಾಡಿದ್ದೇವೆ.
ಈಗ ನಾವು ಹಸುಗಳ ರಕ್ಷಣೆಗಾಗಿ ಏನು ಮಾಡಬೇಕೋ ಅದನ್ನು ಮಾಡುತ್ತೇವೆ. ಕೋವಿಡ್ ಸಮಯದಲ್ಲಿ ನಮ್ಮ ಸರ್ಕಾರವು ಮೂರು ಬಾರಿ ಗೋಶಾಲೆಗಳಿಗೆ ಆರ್ಥಿಕ ಸಹಾಯ ಮಾಡಿದೆ ಎಂದು ಪಟೇಲ್ ಹೇಳಿದ್ದಾರೆ.