ಬೆಂಗಳೂರು : ಜೂನ್.2; ಇಷ್ಟು ದಿನಗಳ ಕಾಲ ಕಾಂಗ್ರೆಸ್ (congress) ಯಾವಾಗ ಗ್ಯಾರಂಟಿ ಯೋಜನೆಗಳನ್ನ ಜಾರಿಗೆ ತರಲಿದೆ ಅಂತ ಸರ್ಕಾರವನ್ನು ಹೀನಮಾನವಾಗಿ ಬೈಯುತ್ತಿದ್ದ ಬಿಜೆಪಿ (bjp) ನಾಯಕರುಗಳಿಗೆ ಇದೀಗ ಕಾಂಗ್ರೆಸ್ ತನ್ನದೇ ಆದ ಶೈಲಿಯಲ್ಲಿ ಕಾಲೆಳೆಯುವ ಪ್ರಯತ್ನವನ್ನು ಮಾಡಿದೆ. ಸದ್ಯಕ್ಕೆ ಕಾಂಗ್ರೆಸ್ ಮಾಡಿರುವ ಟ್ವೀಟ್ (tweet) ಇದೀಗ ಎಲ್ಲೆಡೆ ವೈರಲ್ ಆಗಿದ್ದು, ಕಾಂಗ್ರೆಸ್ ನ ಯೋಜನೆಗಳು ಬಿಜೆಪಿ ನಾಯಕರಿಗೂ ಸಿಗಲಿದೆ ಎಂಬ ಪೋಸ್ಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಪೋಸ್ಟ್ ಗಳಿಗೆ ಹೇಗೆ ಉತ್ತರ ನೀಡಬೇಕು ಅಂತ ಗೊತ್ತಾಗದೆ ಬಿಜೆಪಿ ತಿಣುಕಾಡುವ ಪರಿಸ್ಥಿತಿಗೆ ಬಂದಿದೆ ಎಂದು ಕಾಂಗ್ರೆಸ್ ನ ಕಾರ್ಯಕರ್ತರು ವ್ಯಂಗ್ಯವಾಡಿದ್ದಾರೆ.

ಮೊದಲು ಗ್ಯಾರಂಟಿ ಹಾಗೂ ಬದ್ಧತೆ ಟ್ವೀಟ್ ಮಾಡಿದ್ದ ಕಾಂಗ್ರೆಸ್ ” ನಾವು ನುಡಿದಂತೆ ನಡೆಯುವವರು, ನಾವು ಮಾತು ಉಳಿಸಿಕೊಳ್ಳುವವರು. ಐದೂ ಗ್ಯಾರಂಟಿಗಳನ್ನು ಜಾರಿಗೊಳಿಸಿ ಇತಿಹಾಸ ಸೃಷ್ಟಿಸಿದ್ದೇವೆ. ಇದು ನಮ್ಮ ಬದ್ಧತೆ, ಅಂತ ಟ್ವಿಟ್ ಮಾಡಿತ್ತು. ಹಿಟ್ ಇಟ್ಟಿಗೆ ಕಾಂಗ್ರೆಸ್‌ನ ಅಭಿಮಾನಿಗಳು ಹಾಗೂ ಬೆಂಬಲಿಗರು ವ್ಯಾಪಕ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದರು

ಇದಾದ ಬಳಿಕ ಮತ್ತೊಂದು ಟ್ವೀಟ್ ಮಾಡಿದ ಕಾಂಗ್ರೆಸ್ ಬಿಜೆಪಿಯ ಕಾಲು ಎಳೆಯುವ ಕೆಲಸವನ್ನು ಮಾಡಿದೆ. ಇದು ಬಿಜೆಪಿಗೆ ಹಾಗೂ ಬಿಜೆಪಿ ಪಕ್ಷದ ನಾಯಕರಿಗೆ ಮುಜುಗರವನ್ನ ಉಂಟುಮಾಡಿದೆ. ಈ ಟ್ವಿಟ್‌ನಲ್ಲಿ ನಳೀನ್ ಕುಮಾರ್ ಕಟೀಲ್ ಅವರನ್ನ ಉದ್ದೇಶಿಸಿ @nalinkateel ಅವರೇ,
ನಿಮ್ಮ ಮನೆಗೂ 200 ಯೂನಿಟ್ ವಿದ್ಯುತ್ ಫ್ರೀ!, ಬಳಿಕ ಮಾಜಿ ಸಿಎಂ ಬೊಮ್ಮಾಯಿ ಅವರನ್ನ ಉದ್ದೇಶಿಸಿ @BSBommai ಅವರೇ, ನಿಮ್ಮ ಮನೆಗೂ ಫ್ರೀ! @ShobhaBJP ಅವರೇ, ನಿಮಗೂ ಪ್ರಯಾಣ ಫ್ರೀ, @CTRavi_BJP ಅವರೇ, ನಿಮ್ಮ ಮನೆಯವರಿಗೂ ₹2000 ಫ್ರೀ!” ಅಂತ ಪಿಕ್ ಮಾಡಿದೆ.

ಇನ್ನು ಮುಂದುವರೆದು ಬಜರಂಗದಳದ ನಿರುದ್ಯೋಗಿಗಳಿಗೂ ಯುವನಿಧಿ ಫ್ರೀ, (ಪದವಿ ಪಡೆದಿದ್ದವರಿದ್ರೆ ಮಾತ್ರ)! ಇದು ನಮ್ಮ ಗ್ಯಾರಂಟಿ ಎಂದು ಕಾಂಗ್ರೆಸ್ ಘಟಕ ಸರಣಿ ಟ್ವೀಟ್ ಮಾಡುವ ಮೂಲಕ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದೆ.