ದೇಶದಲ್ಲಿ ಏಕರೂಪ ತೆರಿಗೆ ಪದ್ಧತಿ ಜಿಎಸ್ ಟಿ ಜಾರಿಗೆ ಬಂದು 5 ವರ್ಷ ಪೂರೈಸುತ್ತಿರುವ ಬೆನ್ನಲ್ಲೇ ಕೇಂದ್ರ ಸರಕಾರ ಕೆಲವು ವಸ್ತುಗಳ ಮೇಲಿನ ಜಿಎಸ್ ಟಿ ಹೆಚ್ಚಿಸಿ ರಾಜ್ಯದ ಜನತೆಗೆ ಶಾಕ್ ನೀಡಿದೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದಲ್ಲಿ ಮಂಗಳವಾರ ನಡೆದ ಜಿಎಸ್ ಟಿ ಸಭೆಯಲ್ಲಿ ಹಲವು ನಿರ್ಧಾರಗಳನ್ನು ಕೈಗೊಳ್ಳಲಾಗಿದ್ದು, ಹಲವು ವಸ್ತುಗಳ ಮೇಲಿನ ತೆರಿಗೆ ವಿಧಿಸಲು ತೀರ್ಮಾನಿಸಲಾಯಿತು.

ಜಿಎಸ್ ಟಿ ಏರಿಕೆ
ಬ್ಯಾಂಕ್ ಗಳಲ್ಲಿ ಪಡೆಯುವ ಚೆಕ್ ಬುಕ್ ಮೇಲೆ ಶೇ.18ರಷ್ಟು ಹೇರಿಕೆ, ಚೆಕ್ ಹಾಳೆ ಅಥವಾ ಚೆಕ್ ಬುಕ್ ಯಾವುದೇ ಪಡೆದರೂ ತೆರಿಗೆ ವ್ಯಾಪ್ತಿಗೆ ಬರುವುದು.
ಪ್ರೀ ಪ್ಯಾಕ್ ಮಾಡಲಾದ ಮತ್ತು ಲೆಬಲ್ ಹಾಕಿರುವ ಮಾಂಸ (ಶೀತೀಕರಣ ಹೊರತುಪಡಿಸಿ) ಮೀನು, ಮೊಸರು, ಪನೀರ್, ಜೇನುತುಪ್ಪ, ಒಣ ತರಕಾರಿ, ಗೋಧಿ, ಧಾನ್ಯಗಳ ಹಿಟ್ಟು, ಪಫಡ್ ರೈಸ್ ಮುಂತಾದ ವಸ್ತುಗಳ ಮೇಲಿನ ವಿನಾಯಿತಿ ರದ್ದುಗೊಳಿಸಲಾಗಿದ್ದು, ಶೇ.5ರಷ್ಟು ಜಿಎಸ್ ಟಿ ಜಾರಿಯಾಗಲಿದೆ.
ಲೇಬಲ್ ರಹಿತ ಹಾಗೂ ಪ್ಯಾಕೆಟ್ ಮಾಡದ ಹಾಗೂ ಬ್ರಾಂಡೆಡ್ ರಹಿತ ವಸ್ತುಗಳ ಮೇಲಿನ ತೆರಿಗೆ ವಿನಾಯಿತಿ ಮುಂದುವರಿಕೆ
ಎಣ್ಣೆ, ಕಲ್ಲಿದ್ದಲ್ಲು, ಎಲ್ ಇಡಿ ಬಲ್ಪ್, ಪ್ರಿಟಿಂಗ್ ಮತ್ತು ಡ್ರಾಯಿಂಗ್ ಇಂಕ್, ಸಿದ್ಧಪಡಿಸಲಾದ ಚರ್ಮದ ಹಾಗೂ ಸೋಲಾರ್ ಹೀಟರ್ ಮೇಲಿನ ತೆರಿಗೆ ಪದ್ಧತಿ ಕುರಿತು ಪರಿಷ್ಕರಣೆಗೆ ನಿರ್ಧಾರ
ಅಟ್ಲಾಸ್ ಸೇರಿದಂತೆ ನಕ್ಷೆ, ಚಾರ್ಟ್ ಮೇಲೆ ಶೇ.೧೨ರಷ್ಟು ಜಿಎಸ್ ಟಿ ಹೇರಿಕೆ
1000 ರೂ.ಗಿಂತ ಕಡಿಮೆ ವೆಚ್ಚದ ಹೋಟೆಲ್ ಕೊಠಡಿ ಮೇಲೆ ಶೇ.12ರಷ್ಟು ಜಿಎಸ್ ಟಿ ಜಾರಿ
ಚಿನ್ನ, ಚಿನ್ನಾಭರಣ, ವಜ್ರ, ಹರಳುಗಳ ಖರೀದಿ ವೇಳೆ ಇ-ಬಿಲ್ ಮಾಡುವುದು ಕಡ್ಡಾಯ