ಬೆಂಗಳೂರು: ರಾಜ್ಯದಲ್ಲಿ ಚುನಾವಣೆ ಕಾವು ರಂಗೇರಿದೆ. ಇದರ ಬೆನ್ನಲ್ಲಿಯೇ ಐಟಿ ಅಧಿಕಾರಿಗಳು ಭರ್ಜರಿ ಬೇಟೆ ಮುಂದುವರೆಸಿದ್ದಾರೆ. ಇಂದು ಕೂಡ ದೊಡ್ಡ ಕುಳ ಪತ್ತೆ ಮಾಡಿದ್ದಾರೆ.

ನಡೆಸಿದ್ದಾರೆ. ನೆಲಮಂಗಲದಲ್ಲಿರುವ ಬಿಜೆಪಿ ಹಿರಿಯ ಮುಖಂಡ (BJP Leader) ಗೋವಿಂದಪ್ಪ ಅವರ ಮನೆ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳು ಅಪಾರ ಪ್ರಮಾಣದ ನಗದು ಹಣ ಹಾಗೂ ಚಿನ್ನಾಭರಣಗಳನ್ನು ಜಪ್ತಿ ಮಾಡಿದ್ದಾರೆ.

ಮಾದಾವಾರದ ಗೋವಿಂದಪ್ಪ (Govindappa) ಮನೆ ಮೇಲೆ 15ಕ್ಕೂ ಅಧಿಕ ಅಧಿಕಾರಿಗಳು ದಾಳಿ ನಡೆಸಿ ಬರೋಬ್ಬರಿ 7 ಕೆಜಿ ಚಿನ್ನ, 5 ಕೋಟಿ ನಗದು ಹಣ ವಶಕ್ಕೆ ಪಡೆದಿದ್ದಾರೆ.
ಅಧಿಕಾರಿಗಳು ಬರೋಬ್ಬರಿ 6 ಗಂಟೆಗಳ ಕಾಲ ತೀವ್ರ ಶೋಧ ನಡೆಸಿದ್ದಾರೆ. ಅಲ್ಲದೇ, ಹಲವು ದಾಖಲೆಗಳನ್ನು ಕೂಡ ವಶಕ್ಕೆ ಪಡೆದಿದ್ದಾರೆ. ಗೋವಿಂದಪ್ಪ ಇತ್ತೀಚೆಗಷ್ಟೇ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಕೆ ಸುಧಾಕರ್ ಹಾಗೂ ಯಲಹಂಕ ಶಾಸಕ ವಿಶ್ವನಾಥ್ ನಡುವೆ ಸಂಧಾನ ಮಾಡಿಸಿದ್ದರು. ಈಗ ಐಟಿ ಅಧಿಕಾರಿಗಳಿಗೆ ಲಾಕ್ ಆಗಿದ್ದಾರೆ.