
ವಿಜಯಪುರ(Vijayapura): ರಾಜ್ಯಪಾಲರು ಮೈಕ್ರೋ ಫೈನಾನ್ಸ್ ಸುಗ್ರಿವಾಜ್ಞೆ ಮಸೂದೆ ವಾಪಸ್ ಮಾಡಿರುವ ಬಗ್ಗೆ ವಿಜಯಪುರದಲ್ಲಿ ಕಾನೂನು ಸಚಿವ ಹೆಚ್.ಕೆ ಪಾಟೀಲ್ (HK Patil)ಪತ್ರಿಕಾಗೋಷ್ಠಿ ಮಾಡಿದ್ದಾರೆ. ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ವಸೂಲಿ ಬಗ್ಗೆ ಸಮಸ್ಯೆಯಾಗಿತ್ತು. ಸಾಲ ಪಡೆದವರು ಆತ್ಮಹತ್ಯೆ ಮಾಡಿಕೊಳ್ಳುವ ಹಂತಕ್ಕೆ ಬಂದಿದ್ದರು. ಇದನ್ನ ತಡೆಗಟ್ಟಲು ನಾವು ಕ್ರಮಕ್ಕೆ ಮುಂದಾಗಿದ್ದೆವು. ರಾಜ್ಯ ಸರ್ಕಾರ ಸುಗ್ರಿವಾಜ್ಞೆ ಮೂಲಕ ಕಾನೂನು ಜಾರಿ ಮಾಡಲು ಮುಂದಾಗಿತ್ತು. ಆದರೆ ರಾಜ್ಯಪಾಲರು ಅದನ್ನು ವಾಪಸ್ ಕಳಿಸಿದ್ದಾರೆ ಎಂದಿದ್ದಾರೆ.

ರಾಜ್ಯಪಾಲರು(Governor)ತಪ್ಪುಗ್ರಹಿಕೆ ಮಾಡಿಕೊಂಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಕಾನೂನು ಸಚಿವರು, ರಾಜ್ಯಪಾಲರು ವಾಪಸ್ ಕಳಿಸಿರುವ ಸುಗ್ರಿವಾಜ್ಞೆ ಬಗ್ಗೆ ಮತ್ತೊಮ್ಮೆ ತಿಳಿಸುತ್ತೇವೆ. ನಮ್ಮ ಸರ್ಕಾರ ಲೈಸನ್ಸ್ ಇಲ್ಲದವರ ವಿರುದ್ಧ ಕ್ರಮಕ್ಕೆ ಮುಂದಾಗಿದೆ. ಮನಿಲಾಂಡರ್ಸ್‌ಗಳು ಕಾನೂನಾತ್ಮಕವಾಗಿ ಹಣ ವಸೂಲಿ ಮಾಡಲು ಅವಕಾಶವಿದೆ. ಯಾವುದು ಕಾನೂನಾತ್ಮಕವಾಗಿ ಇರುವುದಿಲ್ಲವೋ ಅವರಿಗೆ ವಸೂಲಿ ಮಾಡಲು ಅಧಿಕಾರ ಇರುವುದಿಲ್ಲ. ಅದು ಸಂವಿಧಾನ ವಿರೋಧಿ ಕ್ರಮ ಆಗುತ್ತದೆ ಎಂದಿದ್ದಾರೆ ಸಚಿವರು.
ಸರ್ಕಾರ ರಾಜ್ಯಪಾಲರಿಗೆ ಕಳಿಸಿರುವ ಸುಗ್ರಿವಾಜ್ಞೆಯಲ್ಲಿ ಯಾವುದೇ ಲೀಗಲ್ ಹಣಕಾಸು ಸಂಸ್ಥೆಗಳ ಬಗ್ಗೆ ಉಲ್ಲೇಖ ಮಾಡಿಲ್ಲ. ಆರ್‌ಬಿಐ(RBI) ಪ್ರಕಾರ ಇರುವ ಸಂಸ್ಥೆಗಳಿಗೆ ಯಾವುದೇ ಸಮಸ್ಯೆಯಾಗುವುದಿಲ್ಲ. ರಕ್ತ ಹಿರೋದನ್ನ ತಡೆಯೋದು ಈ ಸುಗ್ರಿವಾಜ್ಞೆಯ ಮುಖ್ಯ ಉದ್ದೇಶವಾಗಿತ್ತು. ಮಾನವೀಯತೆ ವಿರುದ್ಧ ವಸೂಲಿ ಮಾಡುವವರಿಗೆ ಲಗಾಮು ಹಾಕಲು ಈ ಸುಗ್ರಿವಾಜ್ಞೆ ಜಾರಿಗೆ ಮುಂದಾಗಿತ್ತು. ಈಗಿರುವ ಕಾನೂನಿನಲ್ಲಿ ಕಠಿಣ ಕ್ರಮ ಇಲ್ಲದ ಕಾರಣ ಸುಗ್ರಿವಾಜ್ಞೆ ಸಿದ್ದಪಡಿಸಲಾಗಿತ್ತು. ಸುಗ್ರಿವಾಜ್ಞೆಗೆ ಅನುಮತಿ ನೀಡುವಂತೆ ಮತ್ತೊಮ್ಮೆ ಮನವಿ ಮಾಡಿದ್ದಾರೆ ಸಚಿವರು.

ಜೊತೆಗೆ ಸುಗ್ರೀವಾಜ್ಞೆ ತಿರಸ್ಕರಿಸಿದ ರಾಜ್ಯಪಾಲರಿಗೆ(Governor) ರಾಜ್ಯ ಸರ್ಕಾರ ಸ್ಪಷ್ಟನೆ ಕೊಟ್ಟಿದೆ. ಪತ್ರದ ಮೂಲಕ ಸ್ಪಷ್ಟನೆ ನೀಡಿರುವ ಕಾನೂನು ಸಚಿವ ಹೆಚ್ ಕೆ ಪಾಟೀಲ್, ಪ್ರಮುಖ ಆರು ಅಂಶಗಳ ಮೂಲಕ ರಾಜ್ಯಪಾಲರಿಗೆ ಕಾನೂನು ಸಚಿವರು ಪ್ರತಿಕ್ರಿಯೆ ನೀಡಿದ್ದಾರೆ. ರಾಜ್ಯಪಾಲರು ಪ್ರಸ್ತಾಪಿಸಿರುವ ಆರು ಅಂಶಗಳಿಗೆ ಕಾನೂನು ಸಚಿವರು ಉತ್ತರ ನೀಡಿದ್ದಾರೆ. ಸಲಹೆ ಮತ್ತು ಸ್ಪಷ್ಟೀಕರಣದೊಂದಿಗೆ ಸುಗ್ರೀವಾಜ್ಞೆ ಮರು ಸಲ್ಲಿಸಲು ರಾಜ್ಯಪಾಲರು ಸೂಚಿಸಿದ್ದರು. ಆದ್ರೆ ಸುಗ್ರೀವಾಜ್ಞೆ ಜಾರಿ ಸಂವಿಧಾನದ ಅನುಚ್ಛೇದ 213 ರ ಪ್ರಕಾರ ಸರ್ಕಾರದ ಪರಮಾಧಿಕಾರ. ಅದರ ಪ್ರಕಾರ ರಾಜ್ಯ ಸರ್ಕಾರ ತನ್ನ ಪರಮಾಧಿಕಾರದ ವ್ಯಾಪ್ತಿಯನ್ನ ನಿರ್ವಹಿಸಿದೆ ಎಂಬ ಅಂಶವನ್ನ ಒತ್ತಿ ಹೇಳಿದ್ದಾರೆ ಕಾನೂನು ಸಚಿವ ಹೆಚ್ ಕೆ ಪಾಟೀಲ್ (HK Patil).