• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, April 28, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಅಂಕಣ

ಕಳೆದ ಮೂರು ವರ್ಷಗಳಲ್ಲಿ ಅಲ್ಪಸಂಖ್ಯಾತರ ಆಯೋಗಕ್ಕೆ ದಾಖಲಾದ ದೂರುಗಳಲ್ಲಿ ಹೆಚ್ಚಳವನ್ನು ತೋರಿಸುತ್ತಿದೆ ಸರ್ಕಾರಿ ಅಂಕಿ ಅಂಶಗಳು: ಅಗ್ರಸ್ಥಾನದಲ್ಲಿ ಯುಪಿ, ದೆಹಲಿ

ಫಾತಿಮಾ by ಫಾತಿಮಾ
February 14, 2023
in ಅಂಕಣ
0
ಕಳೆದ ಮೂರು ವರ್ಷಗಳಲ್ಲಿ ಅಲ್ಪಸಂಖ್ಯಾತರ ಆಯೋಗಕ್ಕೆ ದಾಖಲಾದ ದೂರುಗಳಲ್ಲಿ ಹೆಚ್ಚಳವನ್ನು ತೋರಿಸುತ್ತಿದೆ ಸರ್ಕಾರಿ ಅಂಕಿ ಅಂಶಗಳು: ಅಗ್ರಸ್ಥಾನದಲ್ಲಿ ಯುಪಿ, ದೆಹಲಿ
Share on WhatsAppShare on FacebookShare on Telegram

ಉತ್ತರ ಪ್ರದೇಶ ಮತ್ತು ದೆಹಲಿಯಲ್ಲಿ ಸತತ ಆರನೇ ಬಾರಿಗೆ ಮುಸ್ಲಿಂ ಸಮುದಾಯದಿಂದ ಅಲ್ಪಸಂಖ್ಯಾತರ ರಾಷ್ಟ್ರೀಯ ಆಯೋಗಕ್ಕೆ ಅತಿ ಹೆಚ್ಚು ದೂರುಗಳು ದಾಖಲಾಗಿವೆ ಎಂದು ಸರ್ಕಾರದ ಅಂಕಿಅಂಶಗಳು ತೋರಿಸಿವೆ. ಮಾತ್ರವಲ್ಲದೆ ಈ ಎರಡೂ ರಾಜ್ಯಗಳಲ್ಲೇ ಎಲ್ಲಾ ಅಲ್ಪಸಂಖ್ಯಾತ ಸಮುದಾಯಗಳಿಂದ ಅತಿ ಹೆಚ್ಚು ದೂರುಗಳು ಸಲ್ಲಿಕೆಯಾಗಿವೆ ಎಂದು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದೆ.

ADVERTISEMENT

ಸಂಸದ ಡಿ.ರವಿಕುಮಾರ್ ಅವರ ಪ್ರಶ್ನೆಗೆ ಉತ್ತರವಾಗಿ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವೆ ಸ್ಮೃತಿ ಇರಾನಿ ಅವರು ಈ ಡೇಟಾವನ್ನು ಒದಗಿಸಿದ್ದಾರೆ. ರಾಜ್ಯ ಮತ್ತು ಧರ್ಮದ ಆಧಾರದ ಮೇಲೆ ಕಳೆದ ಐದು ವರ್ಷಗಳಲ್ಲಿ ಆಯೋಗಕ್ಕೆ ಬಂದ ಒಟ್ಟು ದೂರುಗಳ ಸಂಖ್ಯೆಯನ್ನು ಸಂಸದರು ಕೇಳಿದ್ದರು. ಅಲ್ಲದೆ ಆಯೋಗವು ಕೇವಲ 2011 ರವರೆಗೆ ಕ್ರಮ ತೆಗೆದುಕೊಂಡ ವರದಿಗಳನ್ನು ಮಾತ್ರ ಸಲ್ಲಿಸಿದೆಯೇ ಮತ್ತು ಕಳೆದ ಹತ್ತು ವರ್ಷಗಳಿಂದ ಅವುಗಳನ್ನು ಸಲ್ಲಿಸದೇ ಇರಲು ಕಾರಣವೇನು ಎಂದು ಅವರು ಕೇಳಿದ್ದರು.

ಈ ಪ್ರಶ್ನೆಗೆ ಪ್ರತಿಕ್ರಿಯೆಯಾಗಿ ಇರಾನಿ “ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗವು 2021-22 ರವರೆಗಿನ ವಾರ್ಷಿಕ ವರದಿಗಳನ್ನು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯಕ್ಕೆ ಸಲ್ಲಿಸಿದೆ.”  “1992 ರ‌ NCM ಕಾಯಿದೆಯ ಸೆಕ್ಷನ್ 12 ಮತ್ತು 13 ರ ಪ್ರಕಾರ, ಆಯೋಗವು ಪ್ರತಿ ಹಣಕಾಸು ವರ್ಷಕ್ಕೆ, ಅದರ ವಾರ್ಷಿಕ ವರದಿಯನ್ನು ಸಿದ್ಧಪಡಿಸುತ್ತದೆ ಮತ್ತು ಸಂಪೂರ್ಣ ಮಾಹಿತಿಯನ್ನು ನೀಡುತ್ತದೆ.  ಹಿಂದಿನ ಹಣಕಾಸು ವರ್ಷದಲ್ಲಿನ ಚಟುವಟಿಕೆಗಳ ವಿವರಗಳನ್ನು ಒಕ್ಕೂಟ ಸರ್ಕಾರಕ್ಕೆ ರವಾನಿಸುತ್ತದೆ” ಎಂದು ಹೇಳಿದ್ದಾರೆ. ಇನ್ನೊಂದು ಪ್ರಶ್ನೆಗೆ ಉತ್ತರಿಸಿದ ಅವರು, ಕಾಯ್ದೆಯ ಪ್ರಕಾರ ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಜಿಲ್ಲಾ ಮಟ್ಟದ ಸಮಿತಿಗಳ ರಚನೆಗೆ ಯಾವುದೇ ಅವಕಾಶವಿಲ್ಲ ಎಂದೂ ಹೇಳಿದ್ದಾರೆ.

ಅಂಕಿಅಂಶಗಳ ಪ್ರಕಾರ ಅಲ್ಪಸಂಖ್ಯಾತರ ಆಯೋಗವು 2017-18 ರಲ್ಲಿ ಒಟ್ಟು 1,498 ದೂರುಗಳನ್ನು ಸ್ವೀಕರಿಸಿದೆ, 2018-19 ರಲ್ಲಿ 1,871, 2019-20 ರಲ್ಲಿ 1,670, 2020-21 ರಲ್ಲಿ 1,463, 2021-22 ರಲ್ಲಿ 2,076 ಮತ್ತು ಪ್ರಸಕ್ತ ಹಣಕಾಸು ವರ್ಷವಾದ 2022-23ರ ಮೊದಲ ಹತ್ತು ತಿಂಗಳಲ್ಲಿ 1984 ದೂರುಗಳು ದಾಖಲಾಗಿವೆ  . ಈ ಡಾಟಾಗಳ‌ ಪ್ರಕಾರವೇ ಹೇಳುವುದಾದರೆ ಕಳೆದ ಎರಡು ಹಣಕಾಸು ವರ್ಷಗಳಲ್ಲಿ ಅಲ್ಪಸಂಖ್ಯಾತ ಸಮುದಾಯಗಳಿಂದ ದಾಖಲಾದ ದೂರುಗಳ ಸಂಖ್ಯೆಯಲ್ಲಿ ವಿಪರೀತ ಹೆಚ್ಚಳವಾಗಿದೆ.

ಒಟ್ಟಾರೆಯಾಗಿ, ಕಳೆದ ಮೂರು ವರ್ಷಗಳಲ್ಲಿ ಉತ್ತರ ಪ್ರದೇಶ ಮತ್ತು ದೆಹಲಿಯಿಂದ ಹೆಚ್ಚಿನ ದೂರುಗಳು ಬಂದಿವೆ ಎಂದು ಅಂಕಿಅಂಶಗಳು ತೋರಿಸಿವೆ.  ಮತ್ತು ಕಳೆದ ಎರಡು ವರ್ಷಗಳಲ್ಲಿ, ಮಹಾರಾಷ್ಟ್ರದಿಂದಲೂ ದೂರುಗಳ ಸಂಖ್ಯೆ ಹೆಚ್ಚಾಗಿದೆ. 2020-21ರಲ್ಲಿ ಉತ್ತರ ಪ್ರದೇಶದಲ್ಲಿ 732 ದೂರುಗಳು  ದಾಖಲಾಗಿವೆ. ಇದು ರಾಷ್ಟ್ರವ್ಯಾಪಿ ದಾಖಲಾದ ಒಟ್ಟು ದೂರುಗಳ ಅರ್ಧಕ್ಕಿಂತ ಹೆಚ್ಚು. ದೆಹಲಿಯಲ್ಲಿ 106 ಮತ್ತು ಮಹಾರಾಷ್ಟ್ರದಲ್ಲಿ 60 ದೂರುಗಳು ಸಲ್ಲಿಕೆಯಾಗಿವೆ. ಈ ಮೂರು ರಾಜ್ಯಗಳಲ್ಲಿ ಹೆಚ್ಚಿನ ದೂರುದಾರರು ಮುಸ್ಲಿಮರು.

2020-21ರಲ್ಲಿ ಮುಸ್ಲಿಂ ಸಮುದಾಯದಿಂದ  ಒಟ್ಟು 1,105 ದೂರುಗಳನ್ನು ಸಲ್ಲಿಕೆಯಾಗಿದ್ದು, ಈ ಪ್ರಮಾಣ 2021-22ರಲ್ಲಿ 1,420ಕ್ಕೆ ಏರಿಕೆಯಾಗಿದೆ.  ಜನವರಿ 31 ರವರೆಗೆ ಕನಿಷ್ಠ 1,279 ದೂರುಗಳನ್ನು ದಾಖಲಾಗಿದ್ದು, ಇದು ಕಿರುಕುಳ ಮತ್ತು ತಾರತಮ್ಯದ ಘಟನೆಗಳ ಸಂಖ್ಯೆಯಲ್ಲಿ ಹೆಚ್ಚಳವನ್ನು ಸೂಚಿಸುತ್ತದೆ. ಇವುಗಳಲ್ಲೂ ಹೆಚ್ಚಿನ ದೂರುಗಳು ಉತ್ತರ ಪ್ರದೇಶ, ದೆಹಲಿ ಮತ್ತು ಮಹಾರಾಷ್ಟ್ರದಿಂದ ದಾಖಲಾಗಿವೆ ಎಂದು ಅಂಕಿಅಂಶಗಳು ತೋರಿಸಿವೆ.

ಅಲ್ಲದೆ ಕ್ರಿಶ್ಚಿಯನ್ನರು 2020-21ರಲ್ಲಿ 103 ಮತ್ತು 2021-22ರಲ್ಲಿ 137 ದೂರುಗಳನ್ನು ದಾಖಲಿಸಿದ್ದಾರೆ.  ಜನವರಿ 31 ರ ಹೊತ್ತಿಗೆ, ಅವರು 107 ದೂರುಗಳನ್ನು ದಾಖಲಿಸಿದ್ದಾರೆ ಎಂದು ಡೇಟಾ ತೋರಿಸುತ್ತದೆ. 2020-21ರಲ್ಲಿ ಹೆಚ್ಚಿನ ದೂರುಗಳು ತಮಿಳುನಾಡು, ಉತ್ತರ ಪ್ರದೇಶ ಮತ್ತು ಕೇರಳದಿಂದ ಬಂದಿದ್ದವು. ಆದರೆ ನಂತರದ ವರ್ಷದಲ್ಲಿ, ದೆಹಲಿ ಮತ್ತು ಮಹಾರಾಷ್ಟ್ರ ಈ ಪಟ್ಟಿಯಲ್ಲಿ ಸೇರಿಕೊಂಡವು.

ಪ್ರಸಕ್ತ ಹಣಕಾಸು ವರ್ಷದಲ್ಲಿ ಕ್ರೈಸ್ತರು ಸಲ್ಲಿಸಿರುವ 107 ದೂರುಗಳಲ್ಲಿ 21 ಉತ್ತರ ಪ್ರದೇಶದಿಂದ ಬಂದಿದ್ದು, 10 ತಮಿಳುನಾಡಿನಿಂದ ಬಂದಿವೆ. 2020-21ರಲ್ಲಿ ಸಿಖ್ಖರು 99 ದೂರುಗಳನ್ನು ದಾಖಲಿಸಿದ್ದಾರೆ, ಇದು 2021-22ರಲ್ಲಿದ್ದುದಕ್ಕಿಂತ 120% ಕ್ಕಿಂತ ಹೆಚ್ಚಾಗಿ 222 ದೂರುಗಳಿಗೆ ಏರಿದೆ.  ಅವರು ಈ ವರ್ಷ ಈಗಾಗಲೇ 270 ದೂರುಗಳನ್ನು ಆಯೋಗಕ್ಕೆ ಸಲ್ಲಿಸಿದ್ದಾರೆ.

ಎರಡು ವರ್ಷಗಳ ಹಿಂದೆ, ಸಿಖ್ ಸಮುದಾಯದಿಂದ ಹೆಚ್ಚಿನ ದೂರುಗಳು ದೆಹಲಿ ಮತ್ತು ಯುಪಿ (ತಲಾ 21), ನಂತರ ಪಂಜಾಬ್ (13), ಮತ್ತು ಉತ್ತರಾಖಂಡ (12) ನಿಂದ ಬಂದಿದ್ದವು.  ಆದರೆ, ಕಳೆದ ಹಣಕಾಸು ವರ್ಷದಲ್ಲಿ ದೆಹಲಿ ಮತ್ತು ಪಂಜಾಬ್‌ಗಳು ಅತಿ ಹೆಚ್ಚು ದೂರುಗಳನ್ನು ದಾಖಲಿಸಿವೆ (ತಲಾ 46), ನಂತರದ ಸ್ಥಾನದಲ್ಲಿ ಯುಪಿ (26) ಮತ್ತು ಹರಿಯಾಣ (19) ಇವೆ. ಈ ವರ್ಷ, ಸಮುದಾಯದಿಂದ ಹೆಚ್ಚಿನ ದೂರುಗಳು ಪಂಜಾಬ್ (73), ಯುಪಿ (45), ದೆಹಲಿ (37), ಮತ್ತು ಜಮ್ಮು ಮತ್ತು ಕಾಶ್ಮೀರ (17) ನಿಂದ ಬಂದಿವೆ.

2020-21 ರಲ್ಲಿ 78 ರಷ್ಟಿದ್ದ ಜೈನರು, ಬೌದ್ಧರು ಮತ್ತು ಪಾರ್ಸಿಗಳ ದೂರುಗಳು 100% ರಷ್ಟು ಏರಿಕೆಯಾಗಿ 2021-22 ರಲ್ಲಿ ಒಟ್ಟು 156 ಕ್ಕೆ ತಲುಪಿದೆ ಎಂದು ಡೇಟಾ ತೋರಿಸಿದೆ.  ಪ್ರಸಕ್ತ ಹಣಕಾಸು ವರ್ಷದ ಮೊದಲ 10 ತಿಂಗಳುಗಳಲ್ಲಿ, ಈ ದೂರುಗಳು ಈಗಾಗಲೇ 173ಕ್ಕೆ ತಲುಪಿವೆ.

Tags: ಅಲ್ಪಸಂಖ್ಯಾತರ ರಾಷ್ಟ್ರೀಯ ಆಯೋಗದೆಹಲಿ
Previous Post

ಮಂಡ್ಯ ಉಸ್ತುವಾರಿ ನನಗೆ ನೀಡುವ ಬಗ್ಗೆ ಮಾಹಿತಿ ಇಲ್ಲ: ಸಚಿವ ಅಶ್ವಥ್ ನಾರಾಯಣ್

Next Post

ಆಶಾ ಕಾರ್ಯಕರ್ತೆಯರ ಎಲ್ಲಾ ನ್ಯಾಯಸಮ್ಮತ ಬೇಡಿಕೆಗಳನ್ನು ಈಡೇರಿಸಲು ಕ್ರಮ: ಡಾ.ಕೆ.ಸುಧಾಕರ್

Related Posts

ಪಕ್ಷ ರಾಜಕಾರಣ ಮತ್ತು ಮಹಿಳಾ ಮೀಸಲಾತಿ
ಅಂಕಣ

ಪಕ್ಷ ರಾಜಕಾರಣ ಮತ್ತು ಮಹಿಳಾ ಮೀಸಲಾತಿ

by ಪ್ರತಿಧ್ವನಿ
April 28, 2026
0

ನಾ ದಿವಾಕರ (ರಾಜಕೀಯ ಮೀಸಲಾತಿ ಮತ್ತು ಪ್ರಾತಿನಿಧಿಕ ಅವಕಾಶಗಳು ಲೇಖನದ ಮುಂದುವರಿಕೆ) ಶಾಸನ ಸಭೆಗಳಲ್ಲಿ ಮಹಿಳಾ ಮೀಸಲಾತಿ (ಶೇಕಡಾ 33) ಏಕೆ ಬೇಕು ? ಯಾರಿಗಾಗಿ ಬೇಕು...

Read moreDetails
ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ

ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ

April 27, 2026
ಮಾಲಿಯಲ್ಲಿ ಭೀಕರ ಉಗ್ರ ದಾಳಿ: ಭಾರತೀಯರಿಗೆ ಕಟ್ಟೆಚ್ಚರ”

ರಾಜಕೀಯ ಮೀಸಲಾತಿ ಮತ್ತು ಪ್ರಾತಿನಿಧಿಕ ಅವಕಾಶಗಳು

April 27, 2026
ಸಂವಿಧಾನ ಸಮಾನತೆ ಮತ್ತು ಮಹಿಳಾ ಮೀಸಲಾತಿ

ಸಂವಿಧಾನ ಸಮಾನತೆ ಮತ್ತು ಮಹಿಳಾ ಮೀಸಲಾತಿ

April 25, 2026
ಸಂವಿಧಾನ ಸಮಾನತೆ ಮತ್ತು ಮಹಿಳಾ ಮೀಸಲಾತಿ

ಸಂವಿಧಾನ ಸಮಾನತೆ ಮತ್ತು ಮಹಿಳಾ ಮೀಸಲಾತಿ

April 24, 2026
Next Post
ಆಶಾ ಕಾರ್ಯಕರ್ತೆಯರ ಎಲ್ಲಾ ನ್ಯಾಯಸಮ್ಮತ ಬೇಡಿಕೆಗಳನ್ನು ಈಡೇರಿಸಲು ಕ್ರಮ: ಡಾ.ಕೆ.ಸುಧಾಕರ್

ಆಶಾ ಕಾರ್ಯಕರ್ತೆಯರ ಎಲ್ಲಾ ನ್ಯಾಯಸಮ್ಮತ ಬೇಡಿಕೆಗಳನ್ನು ಈಡೇರಿಸಲು ಕ್ರಮ: ಡಾ.ಕೆ.ಸುಧಾಕರ್

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada