ಉಕ್ರೇನ್ ಹಾಗೂ ರಷ್ಯಾ ನಡುವಿನ ಬಿಕ್ಕಟ್ಟು ಮತ್ತಷ್ಟು ಉಲ್ಭಣಿಸುತ್ತಿದ್ದು, ಈ ಮಧ್ಯೆ ಭಾರತೀಯ ಪ್ರಜೆಗಳಿಗೆ ಉಕ್ರೇನ್ ರಾಜಧಾನಿ ಕೈವ್ನಲ್ಲಿರುವ (KYIV) ಭಾರತೀಯ ರಾಯಭಾರ ಕಚೇರಿಯೂ ಮಂಗಳವಾರದೊಳಗೆ ನಗರವನ್ನು ತೊರೆಯುವಂತೆ ಸೂಚಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ರಾಯಭಾರ ಕಚೇರಿ ಲಭ್ಯವಿರುವ ಯಾವುದೇ ವಿಧಾನಗಳ ಮೂಲಕ ಆದಷ್ಟು ಬೇಗ ನಗರವನ್ನು ತೊರೆಯುವಂತೆ ಟ್ವೀಟ್ ಮಾಡಿದೆ. ಸದ್ಯ ಬಿಡುಗಡೆಯಾಗಿರುವ ಉಪಗ್ರಹ (Satellite) ಚಿತ್ರದಲ್ಲಿ ಉಕ್ರೇನ್ ರಾಜಧಾನಿ ಕೈವ್(KYIV)ಗೆ ರಷ್ಯಾದ ಸೇನೆಯೂ ಹೆಜ್ಜೆ ಹಾಕುತ್ತಿದ್ದು, ಅಲ್ಲಿನ ನಿವಾಸಿಗಳು ರಷ್ಯಾದ ದಾಳಿಗೆ ತುತ್ತಾಗುತ್ತಾರೆ ಎಂದು ಹೇಳಿದೆ.
ಇತ್ತ ರಷ್ಯಾದ ಸೈನ್ಯವು ನಾಗರೀಕ ಪ್ರದೇಶಗಳ ಮೇಲಿನ ದಾಳಿಯ ಕುರಿತು ಸುಳಿವು ನೀಡಿದೆ ಮತ್ತು ದಕ್ಷಿಣಕ್ಕೆ ಹೋಗುವ ಹೆದ್ದಾರಿ (Highway) ಯಲ್ಲಿ ಮುಕ್ತವಾಗಿ ಹೊರಡಬಹುದು ಎಂದು ಹೇಳಿದೆ.