![This image has an empty alt attribute; its file name is WhatsApp-Image-2025-02-08-at-10.31.09-AM-1024x565.jpeg](https://pratidhvani.com/wp-content/uploads/2025/02/image.jpeg)
OPS ಪಿಂಚಣಿ ಜಾರಿಗಾಗಿ ಹಕ್ಕೊತ್ತಾಯ ಮಾಡಿ ಧರಣಿ ಶುರು ಮಾಡಿದ್ದಾರೆ ಸರ್ಕಾರಿ ನೌಕರರು(Government employees) . ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ(At Freedom Park, Bangalore)ಸರ್ಕಾರಿ ನೌಕರರ ಹೋರಾಟ ಆರಂಭವಾಗಿದೆ. ರಾಜ್ಯ ಸರ್ಕಾರಿ NPS ನೌಕರ ಸಂಘದಿಂದ ಧರಣಿ ನಡೆಸಲಾಗ್ತಿದೆ. 50 ಸಾವಿರಕ್ಕೂ ಹೆಚ್ಚು ಸರ್ಕಾರಿ ಸಿಬ್ಬಂದಿ ಹೋರಾಟದಲ್ಲಿ ಭಾಗಿಯಾಗಲಿದ್ದಾರೆ ಎನ್ನಲಾಗಿದೆ.
![](https://pratidhvani.com/wp-content/uploads/2025/02/image-23.png)
ವೈಯಕ್ತಿಕ ರಜೆ ಹಾಕಿ ಧರಣಿಯಲ್ಲಿ ಪಾಲ್ಗೊಳ್ತಿದ್ದಾರೆ ಸರ್ಕಾರಿ ನೌಕರರು(government employees). ಧರಣಿಗೆ ವಿವಿಧ ಸರ್ಕಾರಿ ಇಲಾಖೆ, ಜಿಲ್ಲೆಗಳಿಂದ ( districts)ಆಗಮಿಸಿರುವ ಸಿಬ್ಬಂದಿ, ಅಧಿಕಾರಿಗಳು ಸಾಥ್ ಕೊಟ್ಟಿದ್ದಾರೆ. ಇಂದು ಒಂದು ದಿನ ಉಪವಾಸ ಸತ್ಯಾಗ್ರಹದಲ್ಲಿ ಭಾಗಿಯಾಗಿರುವ ನೌಕರರು, ರಾಜ್ಯದಲ್ಲಿ ಎರಡೂವರೆ ಲಕ್ಷ NPS ಸರ್ಕಾರಿ ನೌಕರರಿದ್ದು, ಈ ಹೋರಾಟಕ್ಕೆ ಅನುದಾನಿತ ಸರ್ಕಾರಿ, ನಿಗಮ ಮಂಡಳಿ ನೌಕರರ ಸಂಘ ಬೆಂಬಲ ನೀಡಿದೆ.
NPS ಇರದ 50 ಸಾವಿರ ಸರ್ಕಾರಿ ನೌಕರರಿಗೆ(employees) OPS ಕೊಡಿ ಎಂದು ಒತ್ತಾಯ ಮಾಡಲಾಗಿದೆ. ಕಾಂಗ್ರೆಸ್ ಸರ್ಕಾರ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ OPS ಜಾರಿ ಮಾಡಲಿ ಎಂದಿರುವ ನೌಕರರು 6ನೇ ಗ್ಯಾರಂಟಿಯಾಗಿ OPS ಜಾರಿ ಮಾಡುವಂತೆ ಒತ್ತಾಯ ಮಾಡಿದ್ದಾರೆ. ಈ ಬಾರಿಯ ಬಜೆಟ್ ನಲ್ಲಿ OPS ಘೋಷಣೆ ಮಾಡಿ ಎಂದಿದ್ದು, ಸಿಎಂ, ಡಿಸಿಎಂ OPS ಜಾರಿ ಮಾಡುವ ಭರವಸೆ ಇದೆ ಎಂದಿದ್ದಾರೆ.
![](https://pratidhvani.com/wp-content/uploads/2025/02/image-24.png)
ಈಗಾಗಲೇ ಕಾಂಗ್ರೆಸ್ ಆಡಳಿತ ಸರ್ಕಾರದಲ್ಲಿ OPS ಜಾರಿ ಮಾಡಿದ್ದಾರೆ. ಅದೇ ರೀತಿ ನಮ್ಮ ರಾಜ್ಯದಲ್ಲಿ OPS ಜಾರಿ ಮಾಡಲಿ. ಇಲ್ಲವಾದಲ್ಲಿ ಮುಂದೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಸರ್ಕಾರ ಎಚ್ಚರಿಕೆ ನೀಡಿದ್ದಾರೆ. ರಾಜ್ಯ ಸರ್ಕಾರಿ ನೌಕರರ (State Government Employees)ಸಂಘದ ಅಧ್ಯಕ್ಷ ಶಾಂತಾರಾಮ್ ಆಗ್ರಹ ಮಾಡಿದ್ದು, ರಾಜ್ಯ ಸರ್ಕಾರ ಮಣಿಯುತ್ತಾ ಅನ್ನೋದನ್ನು ಕಾದು ನೋಡಬೇಕು.