ಕಾಲಜ್ಞಾನದ ಮೂಲಕ ತಮ್ಮದೇ ಛಾಪು ಮೂಡಿಸಿರುವ ಕೋಡಿ ಶ್ರೀಗಳ ಮತ್ತೊಮ್ಮೆ ಭವಿಷ್ಯ ನುಡಿದಿದ್ದಾರೆ.ಯುಗಾದಿ ಕಳೆದ ನಂತರ ರಾಜ್ಯದಲ್ಲಿ ಒಳ್ಳೆ ಬೆಳೆ ಮತ್ತು ಮಳೆಯಾಗುವ ಲಕ್ಷಣಗಳಿವೆ. ರಾಜ್ಯಕ್ಕೆ ಸುಭಿಕ್ಷ ಕಾಲ ಇದೆ ಎಂದು ಕೋಡಿಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ. ಅಲ್ಲದೇ ದೇಶದಲ್ಲಿ ಕೋಮು ಸಂಘರ್ಷ ಹೆಚ್ಚಾಗುತ್ತದೆ, ಬಾಂಬ್ ಸ್ಫೋಟ, ಭೂಕಂಪ ಆಗುತ್ತೆ. ಧಾರ್ಮಿಕ ಮುಖಂಡನ ಸಾವು ಸಹ ಆಗಲಿದೆ ಎಂದು ಆಘಾತಕಾರಿ ಭವಿಷ್ಯವನ್ನೂ ನುಡಿದಿದ್ದಾರೆ.
ಕೋಲಾರದ ಜಿಲ್ಲೆ ಮಾಲೂರು ಪಟ್ಟಣದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಕೋಡಿ ಮಠದ ಡಾ.ಶಿವನಂದ ಶಿವಯೋಗಿ ಸ್ವಾಮೀಜಿ. ಇನ್ನು ಇದೇ ವೇಳೆ ರಾಜ್ಯ ರಾಜಕೀಯ ಬಗ್ಗೆ ಯುಗಾದಿ ಕಳೆದ ನಂತರ ಹೇಳುವೆ, ಇನ್ನ ಸಾಕಷ್ಟು ಸಮಯವಿದೆ ಎಂದರು.
ಜಾಗತಿಕ ಮಟ್ಟದಲ್ಲಿ ತೊಂದರೆ ಇದೆ. ಬೆಂಕಿ ಹಾವಳಿ,ನೀರಿನ ಹಾವಳಿ, ಯುದ್ದ ಆಗುತ್ತೆ. ಅನೇಕ ಸಾವು ನೋವುಗಳು ಆಗುತ್ತೆ. ಯುಗಾದಿ ಹೊಸ ಪಂಚಾಂಗ ಬಂದ ನಂತರ ಮತ್ತೊಂದು ಭವಿಷ್ಯ ಹೇಳೋದಾಗಿ ಶ್ರೀಗಳು ಹೇಳಿದ್ದಾರೆ.
#Karnataka #Yugadi #Kodimutt #ShivanandaShivayogiRajendraShree
ಅನನ್ಯ ಪ್ರತಿಭೆಯ ವಿಶಿಷ್ಟ ಕಲಾವಿದ-ಮೈಮ್
ಕನ್ನಡ ರಂಗಭೂಮಿಗೆ ವಿಶೇಷ ಮೆರುಗು ತರುವ ಕಲೋಪಾಸಕರಲ್ಲಿ ಎದ್ದು ಕಾಣುವ ಕಲಾವಿದ ನಾ ದಿವಾಕರ “ ಕಲೆ ಎನ್ನುವುದು ವೈಯುಕ್ತಿಕವಾದುದು ಎನ್ನುವುದರ ಜೊತೆಗೆ ಅದು ತನ್ನ ಕಲಾತ್ಮಕ...
Read moreDetails











