ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಗೆ (CCL) ದಿನಗಣನೆ ಪ್ರಾರಂಭವಾಗಿದೆ. ಸ್ಯಾಂಡಲ್ ವುಡ್ ಟು ಬಾಲಿವುಡ್ ತನಕ ಎಲ್ಲಾ ಇಂಡಸ್ಟ್ರಿಯ ಸ್ಟಾರ್ ಗಳು ಸೆಲೆಬ್ರಿಟಿ ಕ್ರಿಕೆಟ್ ಲೀಗ್ 10 ಸೀಸನ್ ನಲ್ಲಿ ಪಾಲ್ಗೊಳ್ಳಲಿದ್ದಾರೆ.
ಇದೇ ತಿಂಗಳ 23ರಿಂದ ಸಿಸಿಎಲ್ ಲೀಗ್ ಪ್ರಾರಂಭವಾಗಲಿದ್ದು, ತಾರೆಯರು ಬ್ಯಾಟ್ ಹಿಡಿದು ಕ್ರಿಕೆಟ್ ಅಖಾಡಕ್ಕಿಳಿಯುತ್ತಿದ್ದಾರೆ.
ಇದೀಗ ತಂಡಗಳು ಕ್ರಿಕೆಟ್ ಅಭ್ಯಾಸಕ್ಕಿಳಿದಿದ್ದಾರೆ.
![](https://pratidhvani.com/wp-content/uploads/2024/02/IMG-20240220-WA0001-1024x682.webp)
ಸಿಸಿಎಲ್ 10ನೇ ಸೀಸನ್ ಫೆಬ್ರವರಿ 23 ರಿಂದ ಶುರುವಾಗಿ ಮಾರ್ಚ್ 17 ರವರೆಗೆ ನಡೆಯಲ್ಲಿದೆ. ಭಾರತದ ಎಂಟು ಚಲನಚಿತ್ರೋದ್ಯಮಗಳ ಸೂಪರ್ ಸ್ಟಾರ್ ಗಳನ್ನು ಒಳಗೊಂಡಿರುವ ಒಟ್ಟು ಎಂಟು ತಂಡಗಳು ಯುಎಇ ಸೇರಿದಂತೆ ಭಾರತದ ಐದು ಸ್ಥಳಗಳಲ್ಲಿ 24 ದಿನಗಳ ಕಾಲ ಕ್ರಿಕೆಟ್ ಅಂಗಳದಲ್ಲಿ ಪ್ರಶಸ್ತಿಗಾಗಿ ಕಾದಾಡಲಿವೆ.
![](https://pratidhvani.com/wp-content/uploads/2024/02/IMG-20240220-WA0003-1024x682.webp)
ಯುಎಇಯ ಶಾರ್ಜಾದಲ್ಲಿ ಲೀಗ್ ನಲ್ಲಿ ಮೂರು ಪಂದ್ಯಗಳು ನಡೆಯಲ್ಲಿದ್ದು, ಆ ನಂತರ ಲೀಗ್ ಭಾರತಕ್ಕೆ ಕಾಲಿಡಲಿದೆ. ಭಾರತದ ಐದು ನಗರಗಳಾದ ಹೈದರಾಬಾದ್, ಬೆಂಗಳೂರು, ಚಂಡೀಗಢ, ತಿರುವನಂತಪುರ ಮತ್ತು ವೈಜಾಗ್ನಲ್ಲಿ ಉಳಿದ ಪಂದ್ಯಗಳು ನಡೆಯಲ್ಲಿವೆ. ವಾರಾಂತ್ಯದಲ್ಲಿ ಅಂದರೆ ಶನಿವಾರ ಹಾಗೂ ಭಾನುವಾರ ಡಬಲ್ ಹೆಡರ್ ಪಂದ್ಯಗಳಿರಲಿವೆ. ಅಂದರೆ ದಿನಕ್ಕೆ ಎರಡು ಪಂದ್ಯಗಳು ನಡೆಯಲ್ಲಿವೆ. ಉದ್ಘಾಟನಾ ಪಂದ್ಯದಲ್ಲಿ ಮುಂಬೈ ಹೀರೋಸ್ ಮತ್ತು ಕೇರಳ ಸ್ಟ್ರೈಕರ್ಸ್ ತಂಡಗಳು ಮುಖಾಮುಖಿಯಾಗಲಿವೆ. ಕರ್ನಾಟಕ ಬುಲ್ಡೋಜರ್ಸ್ ಮೊದಲ ಪಂದ್ಯಾವಳಿ ಇದೇ 25ರಂದು ನಡೆಯುತ್ತಿದ್ದು, ಮುಂಬೈ ಹೀರೋಸ್ ಎದುರು ಸೆಣಸಾಡಲಿದೆ.
ಇತ್ತೀಚೆಗೆಷ್ಟೇ ದುಬೈನಲ್ಲಿ ಅದ್ಧೂರಿಯಾಗಿ ಸಿಸಿಎಲ್ ಗೆ ಚಾಲನೆ ಕೊಡಲಾಗಿತ್ತು. ಇದೇ ಸಂದರ್ಭದಲ್ಲಿ ಸಿಸಿಎಲ್ ಜರ್ನಿ ವಿಡಿಯೋ ಬಿಡುಗಡೆ ಮಾಡಲಾಯಿತು. ಇದೀಗ ತಂಡಗಳು ಕ್ರಿಕೆಟ್ ಅಭ್ಯಾಸಕ್ಕಿಳಿದಿದ್ದಾರೆ. ಕರ್ನಾಟಕ ಬುಲ್ಡೋಜರ್ಸ್ ತಂಡ ಅಭ್ಯಾಸಕ್ಕೂ ಮುನ್ನ ಮಾಧ್ಯಮದರೊಟ್ಟಿಗೆ ಒಂದಿಷ್ಟು ಮಾಹಿತಿ ಹಂಚಿಕೊಂಡಿದೆ.
ಕರ್ನಾಟಕ ಬುಲ್ಡೋಜರ್ಸ್ ಕ್ಯಾಪ್ಟನ್ ಪ್ರದೀಪ್, 12 ವರ್ಷದ ಸಿಸಿಎಲ್ ಜರ್ನಿ ನೋಡಿದ್ಮೇಲೆ. ತುಂಬಾ ಎಮೋಷನಲ್ ಮೂವೆಂಟ್ ತರ ಇದೆ. ವರ್ಷಕ್ಕೆ 2 ತಿಂಗಳು ಇಟ್ಟುಕೊಂಡರೇ 24 ತಿಂಗಳಾಯ್ತು. ಅಂದ್ರೆ 2 ವರ್ಷದ ಜೀವನವನ್ನು ಸಿಸಿಎಲ್ ಗೆ ಕೊಟ್ಟಿದ್ದೇವೆ. ಅಷ್ಟು ವರ್ಷದ ಎಫರ್ಟ್ ಇವತ್ತು ಬುರ್ಜ್ ಖಾಲೀಫಾ ಮೇಲೆ ಬರ್ತಿದೆ. ಸಿಸಿಎಲ್ ಬಿಗ್ಗರ್ ಅಂಡ್ ಬೆಟ್ಟರ್ ಆಗ್ತಿದೆ. ಇವಿಷ್ಟಕ್ಕೂ ನಾನು ವಿಷ್ಣು ಸರ್ ಗೆ ಧನ್ಯವಾದ ಹೇಳುತ್ತೇನೆ. ಕರ್ನಾಟಕ ಬುಲ್ಡೋಸರ್ಸ್ ಸ್ಟಾಟ್ ಆಗುವುದೇ ಕೆ ಅಕ್ಷರದಿಂದ ಅಂದ್ರೆ ಸುದೀಪಣ್ಣ ಅವರನ್ನು ಬಿಟ್ಟು ಮಾತನಾಡಲು ಸಾಧ್ಯವಿಲ್ಲ. ಅವರಿಗೆ ಹುಷಾರಿಲ್ಲ. ಹೀಗಾಗಿ ಅವರು ಬರಲು ಆಗಲಿಲ್ಲ ಎಂದರು.
ತಂಡಗಳು ಯಾವುವು?
• ಮುಂಬೈ ಹೀರೋಸ್
• ಕೇರಳ ಸ್ಟ್ರೈಕರ್ಸ್
• ತೆಲುಗು ವಾರಿಯರ್ಸ್
• ಭೋಜ್ಪುರಿ ದಬಾಂಗ್ಸ್
• ಕರ್ನಾಟಕ ಬುಲ್ಡೋಜರ್ಸ್
• ಬೆಂಗಾಲ್ ಟೈಗರ್ಸ್
• ಚೆನ್ನೈ ರೈನೋಸ್
• ಪಂಜಾಬ್ ದಿ ಶೇರ್
‘ಮುಂಬೈ ಹೀರೋಸ್’ ತಂಡಕ್ಕೆ ನಟ ಸಲ್ಮಾನ್ ಖಾನ್ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದು, ರಿತೇಶ್ ದೇಶಮುಖ್ ಕ್ಯಾಪ್ಟನ್ ಆಗಿದ್ದಾರೆ. ಸೋಹೈಲ್ ಖಾನ್ ಅವರು ಈ ತಂಡದ ಮಾಲೀಕ. ‘ತೆಲುಗು ವಾರಿಯರ್ಸ್’ ಟೀಮ್ಗೆ ವೆಂಕಟೇಶ್ ಅವರು ಬ್ರ್ಯಾಂಡ್ ಅಂಬಾಸಿಡರ್. ಆ ತಂಡಕ್ಕೆ ಅಖಿಲ್ ಅಕ್ಕಿನೇನಿ ನಾಯಕನಾಗಿದ್ದಾರೆ. ‘ಕರ್ನಾಟಕ ಬುಲ್ಡೋಜರ್ಸ್’ ಟೀಮ್ ಗೆ ಪ್ರದೀಪ್ ಕ್ಯಾಪ್ಟನ್ ಆಗಿದ್ದಾರೆ. ಮೋಹನ್ ಲಾಲ್ ಸಹ-ಮಾಲೀಕರಾಗಿರುವ ‘ಕೇರಳ ಸ್ಟ್ರೈಕರ್ಸ್’ ತಂಡವನ್ನು ಕ್ಯಾಪ್ಟನ್ ಇಂದ್ರಜಿತ್ ಮುನ್ನಡೆಸಲಿದ್ದಾರೆ. ‘ಭೋಜಪುರಿ ದಬಾಂಗ್ಸ್’ ತಂಡಕ್ಕೆ ಮನೋಜ್ ತಿವಾರಿ ನಾಯಕ. ಸೋನು ಸೂದ್ ಅವರು ‘ಪಂಜಾಬ್ ದೆ ಶೇರ್’ ತಂಡಕ್ಕೆ ನಾಯಕರಾಗಿದ್ದಾರೆ. ಬೋನಿ ಕಪೂರ್ ಒಡೆತನದ ‘ಬೆಂಗಾಲ್ ಟೈಗರ್ಸ್’ ಟೀಮ್ ಗೆ ಜಿಸ್ಸು ಸೇನ್ಗುಪ್ತ ಕ್ಯಾಪ್ಟನ್ ಆಗಿದ್ದಾರೆ.
#CCL #CCLCricket #KarnatakaBulldozers #cricket #karnataka