ಸದಾ ಒಂದಿಲ್ಲೊಂದು ವಿಚಾರಗಳಿಗೆ ಸದ್ದು ಮಾಡುವ ಗೋಲ್ಡನ್ ಸ್ಟಾರ್ ಗಣೇಶ್ ಈಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.
ಬಾನ ದಾರಿಯಲ್ಲಿ ಚಿತ್ರದ ಶೂಟಿಂಗ್ ಸಲುವಾಗಿ ಕೀನ್ಯಾಗೆ ತೆರಳಿರುವ ಗಣೇಶ್ ಈ ಭಾರೀ ಗುಹೆಯೊಳಗೆ ಹೋಗುವ ಮೂಲಕ ಸುದ್ದಿಯಲ್ಲಿದಾರೆ.
ಈ ಕುರಿತು ತಮ್ಮ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದನ್ನು ಪೋಸ್ಟ್ ಮಾಡಿರುವ ನಟ ಶಿಲಾಯುಗ ಎಂಬ ಅಡಿಬರಹವನ್ನ ನೀಡಿದ್ದಾರೆ.
ಅದರ ಜೊತೆ ಕೀನ್ಯಾದ ಬೀದಿ ಬದಿಯಲ್ಲಿರುವ ಪುಟ್ಟ ಮಕ್ಕಳೊಂದಿಗೆ ನಟ ಹೆಜ್ಜೆ ಹಾಕುತ್ತಿರುವ ವಿಡಿಯೋವನ್ನು ಸಹ ನಟ ಹಂಚಿಕೊಂಡಿದ್ದಾರೆ.
ಸದ್ಯ ಈ ಎರಡು ವಿಡಿಯೋಗಳು ಸಾಮಾಜಿಕ ಜಾಲತಾನಗಳಲ್ಲಿ ವೈರಲ್ ಆಗಿದ್ದು ಅಭಿಮಾನಿಗಳು ಕಮೆಂಟ್ ಮಾಡುವ ಮೂಲಕ ತಮ್ಮ ಅಭಿಪ್ರಾಯವನ್ನ ಹಂಚಿಕೊಳ್ಳುತ್ತಿದ್ದಾರೆ.