ನವದೆಹಲಿ : ಏಷ್ಯನ್ ಗೇಮ್ಸ್ (Asian Games) ಕ್ರೀಡಾಕೂಟದಲ್ಲಿ ಭಾರತದ ಶೂಟರ್‌ಗಳು ಅಪ್ರತಿಮ ಪ್ರದರ್ಶನ ಮುಂದುವರಿಸಿದ್ದು, ಭಾರತದ ಪಾಲಿಗೆ ಮತ್ತೊಂದು ಐತಿಹಾಸಿಕ ದಿನ ದಾಖಲಾಗಿದೆ. ಮಿಶ್ರ ಟ್ರ್ಯಾಪ್ (Mixed Trap) ಶೂಟಿಂಗ್ ಸ್ಪರ್ಧೆಯಲ್ಲಿ ಭಾರತದ ಕೈನಾನ್ ಚೆನೈ ಮತ್ತು ನೀರು ಧಾಂಡ ಜೋಡಿ ಅದ್ಭುತ ಪ್ರದರ್ಶನ ನೀಡಿ ಚಿನ್ನದ ಪದಕಕ್ಕೆ ಕೊರಳೊಡ್ಡಿದೆ.

ಫೈನಲ್ ಪಂದ್ಯದಲ್ಲಿ ಅತ್ಯಂತ ಸಂಯಮ ಹಾಗೂ ನಿಖರ ಗುರಿಯೊಂದಿಗೆ ಗುಂಡು ಹಾರಿಸಿದ ಈ ಜೋಡಿ, ಎದುರಾಳಿಗಳಿಗೆ ಪ್ರಬಲ ಪೈಪೋಟಿ ನೀಡಿ ಭಾರತಕ್ಕೆ ಹೆಮ್ಮೆಯ ಚಿನ್ನ ತಂದುಕೊಟ್ಟಿತು. ಕ್ರೀಡಾಭಿಮಾನಿಗಳು ಹಾಗೂ ಗಣ್ಯರು ಈ ಐತಿಹಾಸಿಕ ಸಾಧನೆ ಮಾಡಿದ ನೀರು ಮತ್ತು ಕೈನಾನ್ ಜೋಡಿಗೆ ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.
INDIAN MIXED TRAP TEAM WINS SHOOTING GOLD MEDAL AT ASIAN GAMES 2026! 🥇 pic.twitter.com/p0moSrDu6B
— The Khel India (@TheKhelIndia) September 30, 2026
News Alert ! Indian pair of Neeru Dhanda and Kynan Chenai clinches gold medal in trap mixed team shooting event of Asian Games
— Press Trust of India (@PTI_News) September 30, 2026





