ಕರೋನಾ ಬಗ್ಗೆ ತಪ್ಪು, ಸುಳ್ಳು ಮಾಹಿತಿಯನ್ನು ಹರಿಬಿಡಲಾಗುತ್ತಿದೆ ಎಂಬ ನಿಟ್ಟಿನಲ್ಲಿ ಸಾರ್ವಜನಿಕವಾಗಿ ವೈದ್ಯರು ಕರೋನಾ ಬಗ್ಗೆ ಹೇಳಿಕೆ ದಾಖಲಿಸುವುದಕ್ಕೆ ಸರ್ಕಾರ ನಿರ್ಬಂಧ ಹೇರಿತ್ತು. ಬಳಿಕ ಕರೋನಾ ಬಗ್ಗೆ ಮಾತನಾಡಲು ಸರ್ಕಾರವೇ ಅಧಿಕೃತವಾದ ವೈದ್ಯರ ತಂಡವನ್ನು ರಚಿಸುತ್ತೆ ಎಂದು ಹೇಳಿತ್ತು. ಇದೀಗಾ ಆ ಪಟ್ಟಿ ಬಿಡುಗಡೆಯಾಗಿದೆ.
ಕರೊನಾ ಕುರಿತು ಮಾಧ್ಯಮಗಳಿಗೆ ಮಾತನಾಡುವ ವೈದ್ಯರ ಪಟ್ಟಿ ಬಿಡುಗಡೆಯಾಗಿದ್ದು, 14 ತಜ್ಞ ವೈದ್ಯರ ಹೆಸರು ಪಟ್ಟಿಯಲ್ಲಿದೆ. ಈ ಮೂಲಕ ಈ ವೈದ್ಯರು ಮಾತ್ರ ಕೊರೊನಾ ಕುರಿತು ಅಧಿಕೃತ ಹೇಳಿಕೆ ನೀಡಬಹುದು ಎಂದು ಸರ್ಕಾರ ಹೇಳಿದೆ. ಇದೇ ವೇಳೆ ತಾಂತ್ರಿಕಾ ಸಲಹಾ ಸಮಿತಿ ಸದಸ್ಯರು ಸೇರಿದಂತೆ ಮತ್ತಿತರೆ ವೈದ್ಯರು ಕೂಡ ಮಾತನಾಡಬಹುದು ಎಂದು ಸ್ಪಷ್ಟ ಪಡಿಸಲಾಹಿದೆ.
ಕರೋನಾ ಬಗ್ಗೆ ಅಧಿಕೃತವಾಗಿ ಮಾತನಾಡಲು ಸರ್ಕಾರದ ಬಿಡುಗಡೆ ಮಾಡಿದ ಪಟ್ಟಿ ಇಂತಿದೆ…
ಡಾ. ಎಂ ಕೆ ಸುದರ್ಶನ್
ಡಾ. ಸಿ ಎನ್ ಮಂಜುನಾಥ್
ಡಾ. ಕೆ ರವಿ
ಡಾ. ವಿ ರವಿ
ಡಾ. ಸಿ ನಾಗರಾಜ್
ಡಾ. ಬಿ ಎಲ್ ಶಶಿಭೂಷಣ್
ಡಾ. ಶಿವಾನಂದ
ಡಾ. ಬಸವರಾಜ್
ಡಾ. ಸವಿತಾ
ಡಾ. ಪ್ರದೀಪ್ ರಂಗಪ್ಪ
ಡಾ. ಸತ್ಯನಾರಾಯಣ
ಡಾ. ವಿಶ್ವನಾಥ ಕಾಮೋಜಿ
ಡಾ. ರವೀಂದ್ರ ಮೆಹತಾ