ಪ್ರತಿಯೊಬ್ಬರು ಕೂಡಾ ತಮ್ಮ ತ್ವಜೆ ಚನ್ನಾಗಿರಬೇಕು,ಯಾವುದೆ ಒಂದು ಕಪ್ಪುಕಲೆ,ಮೊಡವೆ,ಸುಕ್ಕು ಇಲ್ಲದೆ ಕ್ಲಿಯರ್ ಆಗಿ ಇರಬೇಕು ಅಂತ ಆಸೆ ಪಡ್ತಾರೆ..ಸದ್ಯ ಎಲ್ಲೆಡೆ ಅದ್ಬುತವಾದ ಚರ್ಮವನ್ನ ಹೊಂದಿ ತುಂಬಾನೆ ಫೇಮಸ್ ಆಗಿರುವಂತವರು ಕೋರಿಯನ್ಸ್. ಯಾರನ್ನೆ ಕೇಳಿದ್ರು ಕೂಡಾ ಕೋರಿಯದವರ ಹಾಗೆ ಗ್ಲಾಸಿ ಅಂಡ್ ಗ್ಲೋಗಿಂಗ್ ತ್ವಜೆ ನಮ್ಮದಾಗಬೇಕು ಅಂತಾರೆ.ಕಲೆರಹಿತ,ಗಾಜಿನಂತೆ ಹೊಳೆಯುವ ತ್ವಜೆ ನಿಮ್ಮದಾಗಬೇಕೆಂದರೆ ಯಾವುದೊ ಕ್ರೀಮ್ ಬಳಸುವ ಬದಲು ಮನೆಯಲ್ಲಿಯೆ ಸಿಗುವಂತಹ ಪದಾರ್ತವನ್ನ ಬಳಸಿ ಫೇಸ್ಪ್ಯಾಕ್ ತಯಾರಿಸಿ ಅದ್ಬುತವಾದ ತ್ವಜೆ ಪಡಿಯಿರಿ.
![](https://pratidhvani.com/wp-content/uploads/2024/05/IMG_7171.jpeg)
ಅಕ್ಕಿ ನೀರು
2 ಟೇಬಲ್ ಸ್ಪೂನ್ ಅಕ್ಕಿಯನ್ನ ಎರಡು ಬಾರಿ ಚನ್ನಾಗಿ ತೊಳೆಯಿರಿ,ನಂತರ ಮೂರನೆ ಬಾರಿ ತೊಳೆದಂತ ಅಕ್ಕಿ ನೀರಿಗೆ ಒಂದು ಸ್ಪೂನ್ ನಿಂಬೆ ರಸ ಹಾಗೂ ಒಂದು ಸ್ಪೂನ್ ಜೇನುತುಪ್ಪ ಹಾಕಿ ಮಿಶ್ರಣ ಮಾಡಿ. ಈ ನೀರನ್ನು ನಿಮ್ಮ ತ್ವಜೆಗೆ ಅಪ್ಲೈ ಮಾಡಿ,15 ನಿಮಿಷಗಳ ಕಾಲ ಹಾಗೆ ಬಿಡಿ,ಪ್ರತಿದಿನ ನೀವು ಈ ಟಿಪ್ಸ್ನ ಫಾಲೋ ಮಾಡೊದ್ರಿಂದ ಕೆಲ ದಿನಗಳಲ್ಲೆ ನಿಮಗೆ ರೆಸಲ್ಟ್ ಗೊತ್ತಾಗುತ್ತದೆ..ಗಾಜಿನಂತೆ ಹೊಳೆಯುವ ತ್ವಜೆ ನಿಮ್ಮದಾಗುತ್ತದೆ.
![](https://pratidhvani.com/wp-content/uploads/2024/05/IMG_7172.jpeg)
ಬಿಸಿ ನೀರನ ಹಬೆ
ವಾರಕ್ಕೆ ಮೂರು ಬಾರಿ ಬಿಸಿ ನೀರಿನ ಹಬೆಯನ್ನ ತಗೊಬೇಕು..5 ರಿಂದ 6 ನಿಮಿಷಗಳ ಕಾಲ ಹಬೆ ತೆಗೆದಕೊಳ್ಳುವುದರಿಂದ ಮುಖದಲ್ಲಿರುವಂತ ಪೋರ್ಸ್ ಓಪನ್ ಆಗುತ್ತದೆ.ಜಿಡ್ಡಿನ ಅಂಶ ಕಡಿಮೆ ಯಾಗುತ್ತದೆ.ಪಿಂಪಲ್ಸ್ ನಿವಾರಣೆಯಾಗುತ್ತದೆ. ಹಾಗೂ ಅದ್ಭುತವಾದ ಸ್ಕಿನ್ ನಿಮ್ಮದಾಗುತ್ತದೆ..
![](https://pratidhvani.com/wp-content/uploads/2024/05/IMG_7173.jpeg)
ಕಾಫಿಪುಡಿ ಮತ್ತು ಟೊಮ್ಯಟೊ ರಸ
ಒಂದು ಟೇಬಲ್ ಸ್ಪೂನ್ ಕಾಫಿ ಪುಡಿಗೆ ಅದಕ್ಕೆ ಬೇಕದಷ್ಟು ಟೊಮ್ಯಟೊ ರಸವನ್ನು ಹಾಕಿ ಪೇಸ್ಟ್ ತಯಾರಿಸಿ. ನಂತ್ರ ಅದನ್ನು ಮುಖಕ್ಕೆ ಹಚ್ಚಿ ಚನ್ನಾಗಿ ಸ್ಕ್ರಬ್ ಮಾಡಿ ಬಳಿಕ 15 ನಿಮಿಷ ಬಿಟ್ಟು ಬೆಚ್ಚಗಿನ ನೀರಿನಿಂದ ತೊಳೆಯಿರಿ.ಹೀಗೇ ಮಾಡುವುದರಿಂದ ಡರ್ಕ್ ಸರ್ಕಲ್ಸ್ ನಿವಾರಣೆಯಾಗುತ್ತದೆ,ಬ್ಲಾಕ್ ಹೆಡ್ಸ್ ಮತ್ತು ವೈಟ್ ಹೆಡ್ಸ್ ಕಡಿಮೆಯಾಗುತ್ತದೆ..
![](https://pratidhvani.com/wp-content/uploads/2024/05/IMG_7174.jpeg)
ಇದೆಲ್ಲದರ ಜೊತೆಗೆ ಹೆಚ್ಚು ನೀರನ್ನ ಕುಡಿಬೇಕು,ನೀರಿನಾಂಶ ಇರುವಂತಹ ಹಣ್ಣು ತರಕಾರಿಗಳನ್ನ ತಿನ್ನಬೇಕು,ಮುಖಕ್ಕೆ ಬೇಕಾದಂತಹ ಎಕ್ಸರ್ಸೈಜ್ ಮಾಡಬೇಕು,ನಿದ್ದೆ ಸರಿಯಾಗಿ ಆದ್ರೆ ನಿಮ್ಮ ತ್ವಜೆಯು ಕೊರಿಯದವರ ತ್ವಜೆಯಂತೆ ಹೊಳೆಯುತ್ತದೆ..