ಕೊಟ್ಟಿದ್ದ ಸಾಲ ವಾಪಸ್ ಕೇಳಿದ್ದಕ್ಕೆ ಬಾಲ್ಯ ಸ್ನೇಹಿತನೇ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಬೀದರ್ ತಾಲೂಕಿನ ಯಾಕತ್ಪುರ್ ಗ್ರಾಮದ ಬಳಿ ನಡೆದಿದೆ.
ಮೊಹಮ್ಮದ್ ಸಿರಾಜ್ , ಕೊಲೆಯಾದ ದುರ್ದೈವಿ. ಯಾಸಿನ್ ಕೊಲೆಗೈದ ಆರೋಪಿ. ಇಬ್ಬರೂ ಬಾಲ್ಯ ಸ್ನೇಹಿತರಾಗಿದ್ದಾರೆ.
ಬಾಲ್ಯ ಸ್ನೇಹಿತರಾಗಿದ್ದರಿಂದ ಹಿಂದೆ ಮುಂದೆ ಯೋಚಿಸದೇ ಯಾಸೀನ್ಗೆ 12 ಲಕ್ಷ ರೂ. ಸಾಲ ನೀಡಿದ್ದ ಸ್ನೇಹಿತ ಸಿರಾಜ್. ಸಾಲ ಪಡೆದ 12 ಲಕ್ಷ ರೂಪಾಯಿ ಪೈಕಿ 11 ಲಕ್ಷ ರೂ. ಮರಳಿ ನೀಡಿದ್ದ ಯಾಸೀನ್. ಆದರೆ ಇನ್ನುಳಿದ 1 ಲಕ್ಷ ರೂ. ಬಾಕಿ ಹಣ ಕೊಡದೇ ಪೀಡಿಸುತ್ತಿದ್ದ. ಪದೇಪದೆ ಕೊಡ್ತೇನೆ ಎಂದು ಹೇಳುತ್ತಿದ್ದವನು ಕೊಡದೇ ಬಾಕಿ ಉಳಿಸಿಕೊಂಡಿದ್ದ ಯಾಸೀನ್ ಇದರಿಂದ ಸಿರಾಜ್ಗೆ ತಾಳ್ಮೆ ಕಳೆದುಕೊಂಡು ಯಾಸೀನ್ ಮೇಲೆ ಕೋಪಗೊಂಡಿದ್ದ.