• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, April 21, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಸಿನಿಮಾ

ನಾಲ್ಕು ‌ತಲೆಮಾರಿನ ಕಥೆ ಹೇಳುವ “ಮಾನ್ ಸ್ಟರ್” (Monster) ಚಿತ್ರದ ಟೀಸರ್ (Teaser) ಹಾಗೂ ಹಾಡು (Song Release) ಬಿಡುಗಡೆ . ‌‌

ಪ್ರತಿಧ್ವನಿ by ಪ್ರತಿಧ್ವನಿ
June 25, 2024
in ಸಿನಿಮಾ
0
Share on WhatsAppShare on FacebookShare on Telegram

ಪುಟ್ಟರಾಜ ರೆಡ್ಡಿ ನಿರ್ಮಾಣದ, ಆರನ್ ಕಾರ್ತಿಕ್ ವೆಂಕಟೇಶ್ ಕಥೆ, ಚಿತ್ರಕಥೆ ಬರೆದು ಸಂಗೀತ ‌ಸಂಯೋಜಿಸುವುದರೊಂದಿಗೆ ನಿರ್ದೇಶನವನ್ನು ಮಾಡಿರುವ “ಮಾನ್ ಸ್ಟರ್” (Monster Film Teaser and Song)ಚಿತ್ರದ ಟೀಸರ್ ಹಾಗೂ ಹಾಡು ಬಿಡುಗಡೆ ಸಮಾರಂಭ ಇತ್ತೀಚಿಗೆ ಅದ್ದೂರಿಯಾಗಿ ನೆರವೇರಿತು. ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷರಾದ ಉಮೇಶ್ ಬಣಕಾರ್, ಮುನೇಗೌಡ, ನಿರ್ಮಾಪಕ ಹರೀಶ್, ನಟ ರಕ್ಷಕ್ ಬುಲೆಟ್ , ಸಿರಿ ಮ್ಯೂಸಿಕ್ ಸಿರಿ ಚಿಕ್ಕಣ್ಣ ಮುಂತಾದವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಹಾಡು‌ ಬಿಡುಗಡೆ ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.

ADVERTISEMENT

ಇದು ನಾನು ಸಂಗೀತ ಸಂಯೋಜಿಸುತ್ತಿರುವ 57 ನೇ ಚಿತ್ರ (57th Movie) ಹಾಗೂ ನಿರ್ದೇಶಿಸಿರುವ ಆರನೇ ಚಿತ್ರ (6th Movie)ಎಂದು ಮಾತನಾಡಿದ ಆರನ್ ಕಾರ್ತಿಕ್ ವೆಂಕಟೇಶ್, ಈ ಚಿತ್ರದಲ್ಲಿ ನಾಲ್ಕು ತಲೆಮಾರುಗಳ ಕಥೆ ತೋರಿಸಲಾಗಿದೆ.‌ ಆಕ್ಷನ್ ಥ್ರಿಲ್ಲರ್ ಜಾನರ್ ನ ಈ ಚಿತ್ರದಲ್ಲಿ ಡ್ರಗ್ಸ್ ಮಾಫಿಯಾ (Drugs Mafia) ವಿರುದ್ಧ ಹೋರಾಡುವ ಸಾಮಾಜಿಕ ಕಳಕಳಿಯುಳ್ಳ ಅಂಶ ಸಹ ಇದೆ. ಚಿತ್ರದಲ್ಲಿ ಮೂರು ನಾಯಕರಿದ್ದಾರೆ. ಥ್ರಿಲ್ಲರ್ ಮಂಜು, ಧರ್ಮ ಕೀರ್ತಿರಾಜ್ ಹಾಗೂ ಪವನ್ ಎಸ್ ನಾರಾಯಣ್ ನಾಯಕರಾಗಿ ಅಭಿನಯಿಸಿದ್ದಾರೆ. ನಿರ್ಮಾಪಕರ ಪುತ್ರ ಸಂತೋಷ್ ರೆಡ್ಡಿ ಸೂಪರ್ ಹೀರೋ ಆಗಿ ಕಾಣಿಸಿಕೊಂಡಿದ್ದಾರೆ. ರಜನಿಕಾಂತ್ ಆಪ್ತಮಿತ್ರ ರಾಜ್ ಬಹದ್ದೂರ್, ಯತಿರಾಜ್, ಕುರಿ ಬಾಂಡ್ ರಂಗ, ಯಶ್ವಿಕ , ವಿಕ್ಟರಿ ವಾಸು, ಗಣೇಶ್ ರಾವ್, ಸಂಗೀತ, ದುಬೈ ರಫಿಕ್, ರಾಬರ್ಟ್ , ನವಾಜ್ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ. . ಚಿತ್ರೀಕರಣ ಪೂರ್ಣವಾಗಿ ಪೋಸ್ಟ್ ಪ್ರೊಡಕ್ಷನ್ ವರ್ಕ್ (Post Production Work) ನಡೆಯುತ್ತಿದೆ. ಚಿತ್ರದಲ್ಲಿ ಖ್ಯಾತ ಗಾಯಕರು ಹಾಡಿರುವ ಏಳು ಹಾಡುಗಳಿದೆ (7 Songs). ಮುಂದಿನ ತಿಂಗಳು (Next Month)ಚಿತ್ರವನ್ನು ತೆರೆಗೆ ತರುವ ಪ್ರಯತ್ನ ನಡೆಯುತ್ತಿದೆ ಎಂದರು.

ಇದು ನನ್ನ ಮೊದಲ ನಿರ್ಮಾಣದ ಚಿತ್ರ. ನಾನು ಅಷ್ಟು ಓದಿದವನಲ್ಲ. ಆದರೆ ಇಂದು ಕಷ್ಟಪಟ್ಟು ಸಿನಿಮಾ ನಿರ್ಮಾಣ ಮಾಡುವ ಹಂತಕ್ಕೆ ತಲುಪಿದ್ದೇನೆ. ಈ ಚಿತ್ರದ ಮೂಲಕ ನನ್ನ ಮಗ ಸಂತೋಷ್ ರೆಡ್ಡಿ ಚಿತ್ರರಂಗ ಪ್ರವೇಶಿಸುತ್ತಿದ್ದಾನೆ.‌ ಅವನಿಗೆ ಹಾಗೂ ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಿರ್ಮಾಪಕ ಪುಟ್ಟರಾಜ ರೆಡ್ಡಿ.

ನಿರ್ದೇಶಕರು ಹೇಳಿದ ಕಥೆ ಇಷ್ಟವಾಯಿತು. ಚಿತ್ರ ಚೆನ್ನಾಗಿ ಮೂಡಿಬಂದಿದೆ. ನನ್ನ ಪಾತ್ರ ಕೂಡ ಚೆನ್ನಾಗಿದೆ ಎಂದು ನಟ ಧರ್ಮ ಕೀರ್ತಿರಾಜ್ ತಿಳಿಸಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಥ್ರಿಲ್ಲರ್ ಮಂಜು (Thriller Manju), ಸಂತೋಷ್ ರೆಡ್ಡಿ (Santhosh Reddy), ರಾಜ್ ಬಹದ್ದೂರ್ (Raj Bahaddur), ಗಣೇಶ್ ರಾವ್ (Ganesh Rao), ಸಂಗೀತ, ನವಾಜ್ ಮುಂತಾದ ಕಲಾವಿದರು ಹಾಗೂ ತಂತ್ರಜ್ಞರು “ಮಾನ್ ಸ್ಟರ್”(Monster) ಬಗ್ಗೆ ಮಾಹಿತಿ ನೀಡಿದರು.

Tags: Dharma KeerthirajGanesh RaoKannada movieThriller Manju
Previous Post

ಸನ್ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ “ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘ” ದ ನೂತನ ಕಟ್ಟಡ ಉದ್ಘಾಟನೆ .

Next Post

ಕೊಟ್ಟ ಸಾಲ ವಾಪಸ್ ಕೇಳಿದ್ದಕ್ಕೆ ಬಾಲ್ಯ ಸ್ನೇಹಿತನ (Childood Friend) ಕತ್ತು ಕುಯ್ದ ಪಾಪಿ!

Related Posts

ಗುಡ್‌ ನ್ಯೂಸ್‌ ಕೊಟ್ಟ ದೀಪಿಕಾ ಪಡುಕೋಣೆ : ಬಾಲಿವುಡ್‌ ಬೆಡಗಿಯ ಸಿಹಿ ಸುದ್ದಿ ಏನು..?
Top Story

ಗುಡ್‌ ನ್ಯೂಸ್‌ ಕೊಟ್ಟ ದೀಪಿಕಾ ಪಡುಕೋಣೆ : ಬಾಲಿವುಡ್‌ ಬೆಡಗಿಯ ಸಿಹಿ ಸುದ್ದಿ ಏನು..?

by ಪ್ರತಿಧ್ವನಿ
April 19, 2026
0

ಬೆಂಗಳೂರು : ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಮತ್ತು ರಣವೀರ್‌ ಸಿಂಗ್‌ ದಂಪತಿ ತಮ್ಮ ಎರಡನೇ ಮಗುವನ್ನು ಸ್ವಾಗತಿಸಲು ಸಜ್ಜಾಗುತ್ತಿದ್ದಾರೆ. ಈ ಮೂಲಕ ಅಭಿಮಾನಿಗಳಿಗೆ ಸಿಹಿ ಸುದ್ದಿ...

Read moreDetails
ರಾಮಾಯಣ ಹೇಳಿಕೆಗೆ ನಟ ಪ್ರಕಾಶ್ ರಾಜ್ ವಿರುದ್ಧ ಆಕ್ರೋಶ: ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ

ರಾಮಾಯಣ ಹೇಳಿಕೆಗೆ ನಟ ಪ್ರಕಾಶ್ ರಾಜ್ ವಿರುದ್ಧ ಆಕ್ರೋಶ: ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ

April 16, 2026
‘ಕೆಡಿ’ ಚಿತ್ರಕ್ಕೆ ಸೆನ್ಸಾರ್ ಅಡೆತಡೆ: ಕೇಂದ್ರ ಮಂಡಳಿ ವಿರುದ್ಧ ಅನ್ಯಾಯ ಆರೋಪ

‘ಕೆಡಿ’ ಚಿತ್ರಕ್ಕೆ ಸೆನ್ಸಾರ್ ಅಡೆತಡೆ: ಕೇಂದ್ರ ಮಂಡಳಿ ವಿರುದ್ಧ ಅನ್ಯಾಯ ಆರೋಪ

April 14, 2026
ಬಿಗ್‌ಬಾಸ್ ರಕ್ಷಿತಾ ಶೆಟ್ಟಿ ಹೊಸ ಹೆಜ್ಜೆ: ‘ಪಟಾಕಿ ಕಿಚನ್’ ಆರಂಭ

ಬಿಗ್‌ಬಾಸ್ ರಕ್ಷಿತಾ ಶೆಟ್ಟಿ ಹೊಸ ಹೆಜ್ಜೆ: ‘ಪಟಾಕಿ ಕಿಚನ್’ ಆರಂಭ

April 14, 2026
‘ಕೋಟಿಗೊಬ್ಬ’ ರಿ-ರಿಲೀಸ್: ಮೊದಲ ದಿನದ ಕಲೆಕ್ಷನ್ ಎಷ್ಟು?

‘ಕೋಟಿಗೊಬ್ಬ’ ರಿ-ರಿಲೀಸ್: ಮೊದಲ ದಿನದ ಕಲೆಕ್ಷನ್ ಎಷ್ಟು?

April 12, 2026
Next Post

ಕೊಟ್ಟ ಸಾಲ ವಾಪಸ್ ಕೇಳಿದ್ದಕ್ಕೆ ಬಾಲ್ಯ ಸ್ನೇಹಿತನ (Childood Friend) ಕತ್ತು ಕುಯ್ದ ಪಾಪಿ!

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada