ತನಗೆ ಒಂದು ತಿಂಗಳು ರಜೆ ( Leave ) ಬೇಕು ಇಲ್ಲದಿದ್ರೆ ಒತ್ತಡದಿಂದ ಏನಾದರೂ ಆದರೆ ಅದಕ್ಕೆ ನೀವೆ ಜವಬ್ದಾರಿ ಎಂದು ಡಿವೈಎಸ್‌ಪಿ ( Dysp ) ಒಬ್ಬರು ಬರೆದಿರುವ ಪತ್ರ ಸಿಕ್ಕಾಪಟ್ಟೆ ವೈರಲ್ ಆಗಿದೆ
ಹೌದು ಬಳ್ಳಾರಿ ( ballari ) ಜಿಲ್ಲೆಯ ತೋರಣಗಲ್ಲು ( Toranagallu ) ಡಿವೈಎಸ್ಪಿ ಹಿರಿಯ ಅಧಿಕಾರಿಗಳಿಗೆ ಮನವಿ ಪತ್ರ ಕೊಟ್ಟಿದ್ದಾರೆ. ಇನ್ನು ಮುಂದುವರೆದು ರಜೆಗೆ ಕಾರಣ ಬರೆದಿರುವ ಅಧಿಕಾರಿ ಯೋಗ ( yoga ) ಮಾಡಬೇಕು. ಹೀಗಾಗಿ ನನಗೆ ಒಂದು ತಿಂಗಳು ರಜೆ ಬೇಕು ಅಂತ ತೋರಣಗಲ್ಲು ಡಿವೈಎಸ್‌ಪಿ ಎಸ್‌ಎಸ್ ಕಾಶಿ ಎಂಬುವರು ಹಿರಿಯ ಅಧಿಕಾರಿಗಳಿಗೆ ಮನವಿ ಪತ್ರವನ್ನ ಬರೆದಿದ್ದಾರೆ.

ಇನ್ನು ಈ ಡಿವೈಎಸ್‌ಪಿ ಹೀಗೆ ಪತ್ರ ಬರೆಯೋದಕ್ಕೂ ಕಾರಣ ಇದೆಯಂತೆ ಈ ಹಿಂದೆ ಒಂದು ತಿಂಗಳು ರಜೆ ಕೇಳಿದರೆ ಬಳ್ಳಾರಿ ಎಸ್ಪಿ ಕೇವಲ 5 ದಿನ ರಜೆ ಸ್ಯಾಂಕ್ಷನ್ ಮಾಡಿದ್ದಾರಂತೆ. ಇದು ಡಿವೈಎಸ್‌ಪಿ ಕಾಶಿ ಅವರ ಬೇಸರಕ್ಕೆ ಕಾರಣವಾಗಿತ್ತು ಹೀಗಾಗಿ ಎಸ್ಪಿ ಬಳಿಕ ಇದೀಗ ರಜೆಗಾಗಿ ಡಿವೈಎಸ್ಪಿ ಕಾಶಿ ಅವರು ಡಿಜಿಪಿ, ಎಡಿಜಿಪಿಗೆ ಪತ್ರ ಬರೆದಿದ್ದಾರೆ

ಸದ್ಯಕ್ಕೆ ಈ ಪತ್ರ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಈ ಲೀವ್ ಲೆಟರ್ ಎಲ್ಲಾ ಕಡೆ ಸಿಕ್ಕಾಪಟ್ಟೆ ಸದ್ದು ಮಾಡ್ತಾ ಇದೆ. ಇನ್ನು ಈ ಅಧಿಕಾರಿಗಳ ನಡಿವಿನ ರಜೆ ಕಿತ್ತಾಟದಿಂದ ಪೊಲೀಸ್ ಇಲಾಖೆಯ ಮಾನ ಹಾರಾಜಾಗಿರೋದಂತು ಸುಳ್ಳಲ್ಲ.











