ಬಿಗ್ ಬಾಸ್ ಕನ್ನಡ ಸೀಸನ್ 12ರ(Bigg Boss Kannada season 12) ಫಿನಾಲೆ ಹತ್ತಿರವಾಗುತ್ತಿದ್ದಂತೆ ಕರ್ನಾಟಕದಲ್ಲಿ ಗಿಲ್ಲಿ ನಟ(Gilli Nata) ಕ್ರೇಜ್ ಹೆಚ್ಚಾಗಿದೆ. ಗಿಲ್ಲಿ ಅಭಿಮಾನಿಗಳು ಮಾತ್ರವಲ್ಲದೇ ಸಿನಿಮಾ ನಟ ನಟಿಯರು, ರಾಜಕೀಯ ನಾಯಕರು ಗಿಲ್ಲಿಗೆ ಬೆಂಬಲ ನೀಡುತ್ತಿದ್ದು, ಕರ್ನಾಟಕದ ಜನತೆಗೆ ಗಿಲ್ಲಿಗೆ ಮತ ಹಾಕುವಂತೆ ಮನವಿ ಮಾಡುತ್ತಿದ್ದಾರೆ. ಇದೀಗ ವಿಶೇಷ ವ್ಯಕ್ತಿಯೊಬ್ಬರು ಗಿಲ್ಲಿ ಈ ಬಾರಿಯ ಬಿಗ್ ಬಾಸ್ ಗೆದ್ದೇ ಗೆಲ್ಲುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ.

ಹೌದು ಕರುನಾಡ ಚಕ್ರವರ್ತಿ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್(Shivarajkumar) ಗಿಲ್ಲಿಯೇ ಬಿಗ್ ಬಾಸ್ ಗೆಲ್ಲಲಿದ್ದಾರೆ ಎಂದು ಭವಿಷ್ಯ ನುಡಿದಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ನಟ ಶಿವರಾಜ್‌ಕುಮಾರ್ ಹಾಗೂ ಗಿಲ್ಲಿ ನಟ ಅವರ ನಡುವಿನ ಒಳ್ಳೆಯ ಬಾಂಧವ್ಯ ಮೊದಲಿನಿಂದಲೂ ಇತ್ತು. ಜೀ ಕನ್ನಡದಲ್ಲಿ ಪ್ರಸಾರವಾಗಿದ್ದ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ವೇದಿಕೆಯಲ್ಲಿ ಗಿಲ್ಲಿಯ ಪರಿಚಯ ಶಿವಣ್ಣ ಅವರಿಗೆ ಆಗಿದ್ದು, ಅಂದೇ ಗಿಲ್ಲಿಯ ಪ್ರತಿಭೆಗೆ ಮನಸೋತು ತಮ್ಮ ಸಂಪೂರ್ಣ ಬೆಂಬಲ ನೀಡುತ್ತಿದ್ದರು.
ಇದನ್ನೂ ಓದಿ: BIGG BOSS 12 – ಗಿಲ್ಲಿ ಗೆಲ್ಲಿಸಿದ ಗೂಗಲ್ : ರನ್ನರ್ ಅಪ್ ಯಾರು ಗೊತ್ತಾ..?
ಇದೀಗ ಮತ್ತೊಮ್ಮೆ ಗಿಲ್ಲಿಯ ಬಲಕ್ಕೆ ಶಿವಣ್ಣ ನಿಂತಿದ್ದು, ಈ ಬಾರಿ ಬಿಗ್ ಬಾಸ್‌ನಲ್ಲಿ ಗಿಲ್ಲಿಯೇ ಗೆಲ್ಲೋದು ಎಂದು ಟೇಬಲ್ ತಟ್ಟಿ ಆತ್ಮವಿಶ್ವಾಸದಿಂದ ಹೇಳಿದ್ದಾರೆ. ಅಲ್ಲದೇ ಗಿಲ್ಲಿ ಪರ ರಾಜಕೀಯ ನಾಯಕರು ಮತ ಕೇಳುತ್ತಿರುವುದು ಒಳ್ಳೆಯ ವಿಚಾರ ಎಂದು ಶಿವಣ್ಣ ಖುಷಿ ವ್ಯಕ್ತಪಡಿಸಿದ್ದಾರೆ.












