ಮಳೆಗಾಲದಲ್ಲಿ ಸಾಕಷ್ಟು ಸಮಸ್ಯೆಗಳು ಕಾಡುವುದು ಸಾಮಾನ್ಯ ಆದರೆ ಇತ್ತೀಚಿನ ದಿನಗಳಲ್ಲಿ ಹೆಚ್ಚು ಜನ ಅನುಭವಿಸುತ್ತಿರುವ ಒಂದು ಕಾಯಿಲೆ ಎಂದರೆ ಡೆಂಗ್ಯೂ. ಡೆಂಗ್ಯೂ ಗೆ ಪ್ರಮುಖ ಕಾರಣ ಸೊಳ್ಳೆ. ಡಿಂಗ್ಯೂರಿಂದ ಒಂದಿಷ್ಟು ಜನ ಚೇತರಿಸಿಕೊಂಡು ಹೊರ ಬಂದರೆ ಕೆಲವರು ಪ್ರಾಣವನ್ನು ಕೂಡ ಕಳೆದುಕೊಂಡಿದ್ದಾರೆ ದೊಡ್ಡವರಿಗೆ ಮಾತ್ರವಲ್ಲದೇ ಚಿಕ್ಕ ಮಕ್ಕಳಿಗೂ ಕೂಡ ತಪ್ಪಿದ್ದಲ್ಲ. ಡೆಂಗ್ಯೂ ಬಂದಾಗ ದೊಡ್ಡವರಿಗೆ ಆ ಸಮಸ್ಯೆಯನ್ನು ತಡೆದುಕೊಳ್ಳಲು ಸಾಧ್ಯವಾಗುವುದಿಲ್ಲ ಇನ್ನು ಚಿಕ್ಕ ಮಕ್ಕಳಿಗೆ ತುಂಬಾನೇ ಕಷ್ಟವಾಗುತ್ತದೆ.
ಡೆಂಗ್ಯೂ ಸಂದರ್ಭದಲ್ಲಿ ತಪಾಸಣೆಯ ಜೊತೆಗೆ ವಿಶ್ರಾಂತಿ ಹಾಗೂ ಆಹಾರ ಸೇವನೆ ಕೂಡ ತುಂಬಾನೇ ಮುಖ್ಯ. ಯಾವುದೇ ಜ್ವರ ಬಂದರೂ ಅಂತ ಸಂದರ್ಭದಲ್ಲಿ ಆಹಾರ ಸೇವಿಸಲು ಕಷ್ಟವಾಗುತ್ತದೆ ಹಸಿವು ಹೆಚ್ಚಿರುವುದಿಲ್ಲ. ಆರೋಗ್ಯ ಚೇತರಿಕೆಗೆ ಸಮತೋರಿತ ಆಹಾರವು ಅತ್ಯಗತ್ಯ. ಹಾಗಿದ್ರೆ ಯಾವ ಆಹಾರವನ್ನ ಸೇವಿಸುವುದರಿಂದ ಡೆಂಗ್ಯೂ ಉತ್ತಮ ಎನ್ನುವುದರ ಮಾಹಿತಿ ಇಲ್ಲಿದೆ.

ಜ್ವರವಿರುವಾ ಸಂದರ್ಭದಲ್ಲಿ ಮೃದುವಾದ ಹಾಗೂ ನುಂಗಲು ಸುಲಭವಾದ ಮತ್ತು ಪೋಷಕಾಂಶಗಳು ಹೆಚ್ಚಿರುವ ಆಹಾರಗಳನ್ನು ಸೇವಿಸುವುದು ಉತ್ತಮ.
ಪಪ್ಪಾಯ ಹಣ್ಣು
ಜೀವಸತ್ವಗಳು ಮತ್ತು ಕಿಣ್ವಗಳಿಂದ ತುಂಬಿರುವ ಪಪ್ಪಾಯಿಯು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತದೆ.

ಹಸಿರು ಸೊಪ್ಪು
ಡೆಂಗ್ಯೂ ಇರುವವೇಳೆ ಪಾಲಕ್ ಸೊಪ್ಪು,ಕೇಲ್ ಮತ್ತು ಕೋಸುಗೆಡ್ಡೆಗಳು ಇವುಗಳನ್ನು ಸೇವಿಸುವುದು ಉತ್ತಮ.ಇದ್ರಲ್ಲಿ ವಿಟಮಿನ್ಸ್ ಮತ್ತು ಮಿನರಲ್ಸ್ ಅಂಶ ಹೆಚ್ಚಿರುತ್ತದೆ.ಹಾಗೂ ಇಮ್ಯೂನಿಟಿ ಹೆಚ್ಚಿಸುತ್ತದೆ.

ಬೆರ್ರೀಸ್
ಬ್ಲಾಕ್ ಬರ್ರಿ, ಬ್ಲೂಬಿರಿ ,ರೆಸ್ಪಿರಿ ,ಸ್ಟ್ರಾಬೆರಿ ಇವುಗಳನ್ನ ಸೇವಿಸುವುದರಿಂದ ಇದರಲ್ಲಿ ಆಂಟಿ ಆಕ್ಸಿಡೆಂಟ್ ಅಂಶ ಹೆಚ್ಚಿರುತ್ತದೆ. ರಾಡಿಕಲ್ ಗಳಿಂದ ಉಂಟಾಗುವ ತೊಂದರೆಗಳಿಂದ ದೇಹವನ್ನ ರಚಿಸಲು ಸಹಾಯಕಾರಿ.

ಆಂಟಿ ಆಕ್ಸಿಡೆಂಟ್ ಹೆಚ್ಚಿರುವ ಆಹಾರ
ಹಾಗೂ ಮುಖ್ಯವಾಗಿ ನೇಮಿಸೇವಿಸುವ ಆಹಾರದಲ್ಲಿ ಆಂಟಿಆಕ್ಸಿಡೆಂಟ್ ಅಂಶ ಹೆಚ್ಚಿರಬೇಕು ಹಾಗೂ ವಿಟಮಿನ್ ಸಿ ಇರುವಂತ ಆಹಾರವನ್ನ ಸೇವಿಸುವುದರಿಂದ ಬೇಗನೆ ಗುಣಮುಖರಗುತ್ತೀರಾ. ಅದರಲ್ಲೂ ಸೇಬು ,ಆನಿಯನ್ ,ಆರೆಂಜ್ ,ಸೀಬೆಹಣ್ಣು ಕಿವಿ ಫ್ರೂಟ್ ,ನೆಲ್ಲಿಕಾಯಿ ,ನಿಂಬೆಹಣ್ಣಿನ ಜ್ಯೂಸ್ ಇವೆಲ್ಲವೂ ಕೂಡ ತುಂಬಾನೇ ಒಳ್ಳೆಯದು