ಜೋಡೋ ಭವನದಲ್ಲಿ ಎಲ್ಲ ಜನಪ್ರತಿನಿಧಿಗಳು, ಪದಾಧಿಕಾರಿಗಳು ಸೇರಿ ಸಭೆ ಮಾಡಿದ್ದೇವೆ. ಮಹಾತ್ಮಾ ಗಾಂಧಿಜಿಯವರು ಸ್ವಾತಂತ್ರ್ಯ ಹೋರಾಟ ಮಾಡಿದ್ರು. ಅವರ ಬೆಳಗಾವಿ ಕಾಂಗ್ರೆಸ್ ಅಧಿವೇಶನದ 100ನೇ ವರ್ಷಾಚರಣೆ ಕಾರ್ಯಕ್ರಮ ಮಾಡುತ್ತಿದ್ದೇವೆ. ಮಾಜಿ ಪ್ರಧಾನಿಗಳ ನಿಧನದಿಂದ ಕಾರ್ಯಕ್ರಮ ಜನವರಿ 21ಕ್ಕೆ ಮುಂದೂಡಿಕೆ ಮಾಡಿದ್ದೆವು. ಹೀಗಾಗಿ ಅದನ್ನು ಅಚ್ಚುಕಟ್ಟಾಗಿ ನಡೆಸಲು ತೀರ್ಮಾನ ಮಾಡಿದ್ದೇವೆ.
ಎಲ್ಲ ಕ್ಷೇತ್ರದಿಂದ 100 ಜನರನ್ನು ಕರೆತರಲು ಹೇಳಿದ್ದೇವೆ.. ಎಲ್ಲ ಕಡೆ ಪೂರ್ವಭಾವಿ ಸಭೆ ಕರೆದು ಕಾರ್ಯಕ್ರಮ ಯಶಸ್ವಿಗೆ ಶ್ರಮಿಸಲು ಕರೆ ನೀಡಿದ್ದೇವೆ ಎಂದಿದ್ದಾರೆ. ಜೈ ಬಾಪು, ಜೈ ಭೀಮ, ಜೈ ಸಂವಿಧಾನ ಎಂದು ಕಾರ್ಯಕ್ರಮಕ್ಕೆ ಹೆಸರಿಟ್ಟಿದ್ದೇವೆ.. ಎಲ್ಲರಿಗೂ ಆಯಾ ಆಯಾ ಜವಾಬ್ದಾರಿ ನೀಡಿದ್ದೇವೆ.. ಆ ಕೆಲಸ ನಿರ್ವಹಿಸುವಂತೆ ಸೂಚನೆ ನೀಡಿದ್ದೇವೆ.. ಗ್ರಾಮ ಪಂಚಾಯತ್ ಮಟ್ಟದಿಂದ ಎಲ್ಲ ಬ್ಲಾಕ್ ಮಟ್ಟದಲ್ಲಿ ಪಕ್ಷ ಸಂಘಟನೆ ಮಾಡಬೇಕಿದೆ..
ಇದರ ಜೊತೆಗೆ ರಾಜ್ಯದಲ್ಲಿ ಉದಯಪುರದಲ್ಲಿ ಘೋಷಣೆಯಂತೆ ಕಾರ್ಯಕ್ರಮ ರೂಪಿಸುತ್ತೇವೆ ಎಂದಿದ್ದಾರೆ. ಈ ವರ್ಷ ಬ್ಲಾಕ್ವಾರು ಸಮಿತಿಗಳ ರಚನೆ ಮಾಡುತ್ತೇವೆ. ಎಲ್ಲೆಲ್ಲಿ ಡಿಫಾಲ್ಟ್ ಆಗಿದೆ. ಯಾರು ಬಹಳ ವರ್ಷ ಉಳಿದಿದ್ದಾರೆ, ಅವರ ನೇಮಕಕ್ಕೆ ಸೂಚನೆ ಬಂದಿದೆ. ಜಿಲ್ಲಾ, ತಾಲೂಕು, ಬ್ಲಾಕ್ ಮಟ್ಟದಲ್ಲಿ ಸಮಿತಿ ರಚನೆ ಮಾಡುತ್ತೇವೆ. ಅದರ ಮೂಲಕ ಪಕ್ಷ ಬಲವರ್ಧನೆಗೆ ಶ್ರಮ ಹಾಕ್ತೇವೆ. ಶಾಸಕಾಂಗ ಪಕ್ಷದ ಸಭೆಯಲ್ಲೂ ಕೆಲವು ವಿಚಾರ ಚರ್ಚೆಯಾಗಲಿದೆ.. ಆಸಕ್ತಿಯಿಂದ ಮಾಡುವವರ ವರದಿ ಕೊಡಬೇಕು.. ಯಾರಿಗೆ ಆಸಕ್ತಿ ಇಲ್ಲ ಅವರನ್ನ ಬಿಡುವ ಬಗ್ಗೆ ಬೆಳಗ್ಗೆ ಚರ್ಚೆಯಾಗಿದೆ ಎಂದಿದ್ದಾರೆ.
=============