ನಿಯಮಗಳನ್ನ ಮೀರಿ ಸಾರ್ವಜನಿಕರಿಗೆ ತೊಂದರೆ ಕೊಡ್ತಿದ್ದ ಬೈಕ್ಗಳ ಸೈಲೆನ್ಸರ್ ಗಳನ್ನು ವಶಪಡಿಸಿಕೊಂಡಿದ್ದ ಪೊಲೀಸರು ಅವುಗಳನ್ನು ಗದಗ ಎಸ್ ಪಿ ಕಚೇರಿ ಮುಂದೆ ಸಾಲಾಗಿ ರಸ್ತೆಯಲ್ಲಿ ಹಾಕಿ ರೋಲರ್ ಹತ್ತಿಸೋ ಮೂಲಕ ನಾಶಪಡಿಸಿದ್ದಾರೆ.
ಜಿಲ್ಲೆಯಾದ್ಯಂತ ಸುಮಾರು 158 ಬೈಕ್ಗಳ ಸೈಲೆನ್ಸರ್ ಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಶಾಲಾ ಕಾಲೇಜ್, ರಸ್ತೆ, ಮಾರ್ಕೆಟ್, ಜನನಿಬಿಡ ಪ್ರಧೇಶಗಳಲ್ಲಿ ಕರ್ಕಶ ಶಬ್ದ ಮಾಡಿಕೊಂಡು ಓಡಾಡ್ತಿದ್ದ ಬೈಕ್ ಗಳ ಢಿಫೆಕ್ಟಿವ್ ಸೈಲೆನ್ಸರ್ ಗಳನ್ನು ಪೊಲೀಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದರು.
ಮೋಟಾರ್ ವಾಹನಗಳ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ದಂಡ ವಿಧಿಸಿದ್ದು ಡಿಫೆಕ್ಟಿವ್ ಸೈಲೆನ್ಸರ್ಗಳನ್ನ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಎಸ್ಪಿ ಶಿವಪ್ರಕಾಶ್ ದೇವರಾಜು ತಿಳಿಸಿದ್ದಾರೆ.




