ವಿಕ್ರಾಂತ್ ರೋಣ ಸ್ಟಾರ್ ನಟ ಕಿಚ್ಚ ಸುದೀಪ್ ಅವರಿಗೆ ಕರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಸುದೀಪ್ ಸದ್ಯ ವಿಕ್ರಾಂತ್ ರೋಣ ಸಿನಿಮಾದ ರಿಲೀಸ್‌ನಲ್ಲಿ ಬ್ಯುಸಿಯಗಿದ್ದರು.
ಕಿಚ್ಚ ಸುದೀಪ್ ಗೆ ಕರೋನಾ ಸೋಂಕು ತಗುಲುತ್ತಿರುವುದು ಎರಡನೇ ಬಾರಿ. ಈ ಮೊದಲು ಕಳೆದ ವರ್ಷ ಸುದೀಪ್ ಕೋವಿಡ್ ಸೋಂಕಿಗೆ ಒಳಗಾಗಿದ್ದರು. ಕರೋನಾಗೆ ಚಿಕಿತ್ಸೆ ಪಡೆದು ಮನೆಯಲ್ಲೇ ವಿಶ್ರಾಂತಿ ಪಡೆದಿದ್ದರು.

ಸಿನಿಮಾದ ಪ್ರಚಾರ ಕೆಲಗಳು ಇನ್ನು ಬಾಕಿ ಇದ್ದು, ಮುಂದಿನ ಪ್ರಚಾರ ಕಾರ್ಯಗಳಲ್ಲಿ ಸುದೀಪ್ ಗೈರಾಗುವ ಸಾಧ್ಯತೆ ಇದೆ. ಸದ್ಯ ವಿಶ್ರಾಂತಿ ಪಡೆಯುತ್ತಿರುವ ಸುದೀಪ್ ಬೇಗ ಗುಣಮುಖರಾಗಲಿ ಎನ್ನುವುದೇ ಅಭಿಮಾನಿಗಳ ಆಶಯ.