ಚಳಿಗಾಲದ ಗಾಳಿ ತುಂಬಾನೇ ತಂಪಾಗಿರುತ್ತದೆ. ಹಾಗಾಗಿ ದೇಹದಲ್ಲಿ ಒಂದಿಷ್ಟು ಬದಲಾವಣೆಗಳಾಗುತ್ತದೆ. ಕೆಲವರಿಗೆ ಆರೋಗ್ಯದಲ್ಲಿ ಸಮಸ್ಯೆಗಳು ಶುರುವಾಗುತ್ತದೆ. ಇದರ ಜೊತೆಗೆ ಕೆಲವರಿಗೆ ಚರ್ಮ ಒಡೆಯುತ್ತದೆ ಹಾಗೂ ಚರ್ಮ ಸುಕ್ಕುಗಟ್ಟುವುದು ಕೂಡ ಹೆಚ್ಚಾಗುತ್ತದೆ. ಹಿಮ್ಮಡಿಯಲ್ಲಿ ಬಿರುಕು ಬೀಳುವುದು,ತುಟಿ ಡ್ರೈಯಾಗುವುದು ಹೀಗೆ ಚರ್ಮಕ್ಕೆ ಸಂಬಂಧಪಟ್ಟ ಒಂದಿಷ್ಟು ಸಮಸ್ಯೆಗಳು ಹೆಚ್ಚಾಗಿ ಕಾಡುತ್ತವೆ. ಈ ಸಂದರ್ಭದಲ್ಲಿ ಚರ್ಮದ ಆರೈಕೆ ಬಗ್ಗೆ ಹೆಚ್ಚಾಗಿ ಕಾಳಜಿಯನ್ನ ವಹಿಸಬೇಕು ಹಾಗೂ ತಪ್ಪದೆ ತ್ವಚೆಯನ್ನ ಮಾಯಿಶ್ಚರೈಸ್ ಮಾಡುವುದು ಕೂಡ ಒಳ್ಳೆಯದು. ಹಾಗೂ ಚಳಿಗಾಲದಲ್ಲಿ ಒಂದಿಷ್ಟು ಹಣ್ಣುಗಳನ್ನ ಸೇವಿಸುವುದರಿಂದ ಚರ್ಮಕ್ಕೆ ಒಳ್ಳೆಯದು ..ಯಾವ ಹಣ್ಣು ಉತ್ತಮ ಅನ್ನುವ ಮಾಹಿತಿ ಹೀಗಿದೆ.
ಕಿತ್ತಳೆ ಹಣ್ಣು
ಕಿತ್ತಳೆ ಹಣ್ಣಿನಲ್ಲಿ ವಿಟಮಿನ್ ಸಿ ಅಂಶ ಹೆಚ್ಚಿರುತ್ತದೆ..ಹಾಗೂ ಇದು ಕಾಲಜನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ ಮತ್ತು ಫ್ರೀ ರಾಡಿಕಲ್ಗಳೊಂದಿಗೆ ಹೋರಾಡುತ್ತದೆ. ಹಾಗೂ ಆಂಟಿಆಕ್ಸಿಡೆಂಟ್‌ಗಳು, ವಿಟಮಿನ್‌ಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿರುವ ಹಣ್ಣುಗಳು ನಿಮ್ಮ ಚರ್ಮವನ್ನು ಆರೋಗ್ಯಕರವಾಗಿಸಲು ಮತ್ತು ಕಠಿಣ ಹವಾಮಾನದಿಂದ ರಕ್ಷಿಸುತ್ತವೆ.
ದಾಳಿಂಬೆ ಹಣ್ಣು
ದಾಳಿಂಬೆ ಹಣ್ಣಿನಲ್ಲಿ ಆಂಟಿ ಓಕ್ಸಿಡೆಂಟ್ ಅಂಶ ಹೆಚ್ಚಿರುತ್ತದೆ ಹಾಗೂ ವಿಟಮಿನ್ ಸಿ ವಿಟಮಿನ್ ಈ ಅಂಶ ಇರೋದ್ರಿಂದ ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ.
ಸೇಬು
ಸೇಬಿನಲ್ಲಿ ಫೈಬರ್ ಅಂಶ ಹೆಚ್ಚಿರುತ್ತದೆ ಹಾಗೂ ವಿಟಮಿನ್ಸ್ ಸಿ, ಮತ್ತು ಆಂಟಿ ಆಕ್ಸಿಡೆಂಟ್ ಹೆಚ್ಚಿರುವುದರಿಂದ ಚರ್ಮದ ಆರೋಗ್ಯವನ್ನು ಹೆಚ್ಚಿಸುತ್ತದೆ.
ಈ ಹಣ್ಣುಗಳ ಜೊತೆಗೆ ದ್ರಾಕ್ಷಿ ,ಮಾವಿನ ಹಣ್ಣು,ರಾಸ್ಬೆರಿ,ಸ್ಟ್ರಾಬೆರಿ , ಪೈನಾಪಲ್ ನಿಂಬೆ ಹಣ್ಣನ್ನು ಕೂಡ ಬಳಸ ಬಹುದು.