ಗರ್ಭಿಣಿಯಾಗಿದ್ದಾಗ ತಾಯಿ ಯಾವ ಆಹಾರವನ್ನ ಸೇವಿಸ್ತಾಳೋ, ಅದರಲ್ಲಿರುವ ಪೋಷಕಾಂಶಗಳು ಮಗುವಿನ ಬೆಳವಣಿಗೆಯ ಮೇಲೆ ಪ್ರಭಾವವನ್ನು ಬೀರುತ್ತದೆ. ಹಾಗಾಗಿ ಆರೋಗ್ಯ ಮತ್ತು ಆಹಾರದ ಮೇಲೆ ಹೆಚ್ಚು ಕಾಳಜಿಯನ್ನ ವಹಿಸಬೇಕು.ಈ ಸಮಯದಲ್ಲಿ ಹೆಚ್ಚಿನ ಮಟ್ಟದಲ್ಲಿ ಹಣ್ಣು ಮತ್ತು ತರಕಾರಿಗಳನ್ನು ಸೇವಿಸುವುದು ಉತ್ತಮ..ಕಾರಣ ಸಾಕಷ್ಟು ನ್ಯೂಟ್ರಿಷನ್ ಅಂಶ ದೇಹಕ್ಕೆ ಸೇರುತ್ತದೆ..ಇನ್ನು ಗರ್ಭಾವಸ್ಥೆಯಲ್ಲಿ ತಿನ್ನಲು ಕೆಲವು ಉತ್ತಮ ಹಣ್ಣುಗಳ ಬಗ್ಗೆ ಹಾಗೂ ಎಷ್ಟನೇ ತಿಂಗಳಲ್ಲಿ ತಿಂದ್ರೆ ಒಳ್ಳೆಯದು ಎಂಬುವುದರ ಮಾಹಿತಿ ಇಲ್ಲಿದೆ..
ವಾರ 1-12 (ಮೊದಲ ಟ್ರೈಮೆಸ್ಟರ್)
- ಒಂದರಿಂದ ೧೨ ವಾರಗಳ ವರೆಗೂ,ಸಿಟ್ರಿಕ್ ಹಣ್ಣುಗಳನ್ನು ತಿನ್ನುವುದು ಉತ್ತಮ..ಅದರಲ್ಲಿ ಕಿತ್ತಳೆ, ದ್ರಾಕ್ಷಿಹಣ್ಣು, ನಿಂಬೆಹಣ್ಣು ತಿನ್ನುವುದು ಉತ್ತಮ. ಇದರಲ್ಲಿ ವಿಟಮಿನ್ ಸಿ ಮತ್ತು ರೋಗನಿರೋಧಕ ಶಕ್ತಿ ಹೆಚ್ಚಿರುತ್ತದೆ.
- ಬರ್ರಿ ಹಣ್ಣುಗಳು ಅಂದ್ರೆ ಸ್ಟ್ರಾಬೆರಿ, ಬ್ಲೂ ಬೆರಿ, ಬ್ಲಾಕ್ಬೆರಿ ಇವುಗಳನ್ನು ತಿನ್ನೋದ್ರಿಂದ ಆಂಟಿಆಕ್ಸಿಡೆಂಟ್ ಅಂಶ ಹೆಚ್ಚಿರುತ್ತದೆ.
- ಆರೋಗ್ಯಕರ ಕೊಬ್ಬುಗಳು ಮತ್ತು ಫೋಲೇಟ್ನಲ್ಲಿ ಹೆಚ್ಚಿರುವ ಆವಕಾಡೊಗಳು ಸೇವಿಸಿ.
- ಬಾಳೆ ಹಣ್ಣು ಪ್ರೋಟೀನ್,ಪೊಟ್ಯಾಶಿಯಂ ಮತ್ತು ವಿಟಮಿನ್ B6 ಇರುವುದರಿಂದ ಆರೋಗ್ಯಕ್ಕೆ ಉತ್ತಮ
- ವಿಟಮಿನ್ ಎ ಹಾಗೂ ಫೈಬರ್ ಅಂಶ ಹೆಚ್ಚಿರುವಂತಹ ಮಾವಿನಹಣ್ಣನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಒಳ್ಳೆಯದು ಇದರಿಂದ ಕಾನ್ಸ್ಟಿಪೇಶನ್ ಸಮಸ್ಯೆ ನಿವಾರಣೆ ಆಗುತ್ತದೆ ಹಾಗೂ ಡೈಜೆಶನ್ಗೆ ಉತ್ತಮ.
(ವಾರ 13-26) ಎರಡನೇ ಟ್ರೈಮೆಸ್ಟರ್
- ಪೀಚ್ ಇದರಲ್ಲಿ ವಿಟಮಿನ್ ಸಿ ಮತ್ತು ಪೊಟ್ಯಾಸಿಯಮ್ ಅಂಶಹೆಚ್ಚಿರುತ್ತದೆ.
- ಕಬ್ಬಿಣದ ಉತ್ತಮ ಹಾಗೂ ವಿಟಮಿನ್ ಎ ಹೆಚ್ಚಿರುವಂತಹ ಏಪ್ರಿಕಾಟ್ಗಳು ಗರ್ಭಿಣಿಯರಿಗೆ ಒಳ್ಳೆಯದು.
- ವಿಟಮಿನ್ ಸಿ ಹಾಗೂ ಫೈಬರ್ ಅಂಶ ಹೆಚ್ಚಿರುವಂತಹ ಸಿಬಿನನ್ನ ತಿನ್ನೋದ್ರಿಂದ ಗರ್ಭಿಣಿಯರ ಆರೋಗ್ಯಕ್ಕೆ ಉತ್ತಮ ಇದು ಜೀರ್ಣಕ್ರಿಯೆ ಸುಧಾರಿಸುತ್ತದೆ.
- ಉತ್ಕರ್ಷಣ ನಿರೋಧಕಗಳು ಹಾಗೂ ನಾರಿನ ಅಂಶ ಹೆಚ್ಚಿರುವಂತಹ ಸೇಬುಹಣ್ಣನ್ನು ದಿನಕ್ಕೊಂದು ತಿನ್ನೋದ್ರಿಂದ ಆರೋಗ್ಯವಾಗಿರಲು ಸಹಾಯಕಾರಿ.
(ವಾರ 27-40) ಮೂರನೇ ಟ್ರೈಮೆಸ್ಟರ್
- ಕಲ್ಲಂಗಡಿ ಹಣ್ಣು,ಇದರಲ್ಲಿ ವಿಟಮಿನ್ ಸಿ ಮತ್ತು ನೀರಿನ ಅಂಶದಲ್ಲಿ ಸಮೃದ್ಧವಾಗಿದೆ.
- ಕಿವಿ ಫ್ರೂಟ್ ಈ ಹಣ್ಣಿನಲ್ಲಿ ವಿಟಮಿನ್ ಸಿ ಅಂಶ ಹಾಗೂ ಫ್ಲೋಲೆಟ್ ಅಂಶ ಹೆಚ್ಚಿರುವುದರಿಂದ ಗರ್ಭಿಣಿಯರಿಗೆ ಉತ್ತಮ.
- ದ್ರಾಕ್ಷಿಗಳು ವಿಟಮಿನ್ ಸಿ ಮತ್ತು ಪೊಟ್ಯಾಸಿಯಮ್ನ ಉತ್ತಮ ಮೂಲ.