• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, June 17, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಸಿನಿಮಾ

ಕಾಮಿಡಿಯಿಂದ ಹೀರೋವರೆಗೆ: ಗಿಲ್ಲಿ ನಟನ ಹೊಸ ಸಿನಿ ಜರ್ನಿ ಆರಂಭ

ಪ್ರತಿಧ್ವನಿ by ಪ್ರತಿಧ್ವನಿ
June 16, 2026
in ಸಿನಿಮಾ
0
ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಹಬ್ಬದ ದಿನ: ಒಂದೇ ದಿನ ಮೂರು ತಂಡಗಳ ಪಂದ್ಯ, 12 ಗಂಟೆಗಳ ಕ್ರಿಕೆಟ್ ರಸದೌತಣ
Share on WhatsAppShare on FacebookShare on Telegram

‘ಬಿಗ್ ಬಾಸ್ ಕನ್ನಡ ಸೀಸನ್ 12’ರ ವಿಜೇತ ಹಾಗೂ ‘ಗಿಲ್ಲಿ ನಟ’ ಎಂದೇ ಜನಪ್ರಿಯರಾಗಿರುವ ನಟರಾಜ್ ಅವರು ತಮ್ಮ ಅಭಿಮಾನಿಗಳಿಗೆ ಸಿಹಿಸುದ್ದಿಯೊಂದನ್ನು ನೀಡಿದ್ದಾರೆ. ಇದುವರೆಗೆ ರಿಯಾಲಿಟಿ ಶೋಗಳು ಮತ್ತು ಹಾಸ್ಯ ಪಾತ್ರಗಳ ಮೂಲಕ ಪ್ರೇಕ್ಷಕರ ಮನಗೆದ್ದಿದ್ದ ಗಿಲ್ಲಿ ನಟ, ಇದೀಗ ಮೊದಲ ಬಾರಿಗೆ ಪೂರ್ಣಪ್ರಮಾಣದ ನಾಯಕ ನಟನಾಗಿ ಬೆಳ್ಳಿತೆರೆಗೆ ಪದಾರ್ಪಣೆ ಮಾಡುತ್ತಿದ್ದಾರೆ.ಗಿಲ್ಲಿ ನಟ ಅಭಿನಯದ ಹೊಸ ಚಿತ್ರದ ಘೋಷಣೆ ಆಗಿದ್ದು, ಚಿತ್ರದ ಮುಹೂರ್ತ ಸಮಾರಂಭಕ್ಕೆ ಸಕಲ ಸಿದ್ಧತೆಗಳು ನಡೆಯುತ್ತಿವೆ. ವಿಶೇಷವೆಂದರೆ, ಸ್ಯಾಂಡಲ್‌ವುಡ್‌ನ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಾಗಿರುವ ಕೆವಿಎನ್ ಪ್ರೊಡಕ್ಷನ್ಸ್ ಈ ಚಿತ್ರಕ್ಕೆ ಬೆಂಬಲ ನೀಡುತ್ತಿದೆ.

ADVERTISEMENT
Krishna Byre Gowda : ಬೆಂಗಳೂರು ನಗರದಲ್ಲಿ ಸುಧಾರಣೆ ಮಾಡ್ತೀವಿ..! #bengaluru #gba #pratidhvani

ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್’ ಹಾಗೂ ದಳಪತಿ ವಿಜಯ್ ನಟನೆಯ ‘ಜನ ನಾಯಗನ್’ ಸೇರಿದಂತೆ ಹಲವು ಬಹುಭಾಷಾ ಚಿತ್ರಗಳನ್ನು ನಿರ್ಮಿಸಿರುವ ಕೆವಿಎನ್ ಪ್ರೊಡಕ್ಷನ್ಸ್, ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವ ತನ್ನ ಪರಂಪರೆಯನ್ನು ಮುಂದುವರಿಸಿದೆ. “ಹೊಸ ಪ್ರತಿಭೆಗಳಿಗೆ ನಾವು ಸದಾ ಬೆಂಬಲವಾಗಿ ನಿಲ್ಲುತ್ತೇವೆ. ಉತ್ತಮ ಕಥೆ ಮತ್ತು ಗುಣಮಟ್ಟದ ಸಿನಿಮಾ ನಿರ್ಮಾಣವಾಗಲಿ ಎಂಬುದು ನಮ್ಮ ಆಶಯ” ಎಂದು ಸಂಸ್ಥೆಯ ಮುಖ್ಯಸ್ಥ ಕೆ. ವೆಂಕಟ್ ನಾರಾಯಣ ತಿಳಿಸಿದ್ದಾರೆ.

Priyank Kharge : ನಾವು ನೀಲಿ ಬಾವುಟದಡಿಯಲ್ಲಿ ದೇಣಿಗೆ ಸಂಗ್ರಹಿಸಿದ್ರೆ ಓಕೆನಾ? ಎಂದ ಸಚಿವ ಖರ್ಗೆ..! #pratidhvani

ಕೆವಿಎನ್ ಪ್ರೊಡಕ್ಷನ್ಸ್ ಅರ್ಪಿಸುತ್ತಿರುವ ಈ ಚಿತ್ರವನ್ನು ಸಂಸ್ಥೆಯ ಕಾರ್ಯಕಾರಿ ನಿರ್ಮಾಪಕರಾದ ನವೀನ್ ಮತ್ತು ಹರೀಶ್ ಜಂಟಿಯಾಗಿ ನಿರ್ಮಿಸುತ್ತಿದ್ದಾರೆ. ಗಿಲ್ಲಿ ನಟ ಅವರ ಜನ್ಮದಿನವಾದ ಜೂನ್ 21ರಂದು ಚಿತ್ರದ ಮುಹೂರ್ತ ನಡೆಯಲಿದ್ದು, ಅದನ್ನು ಘೋಷಿಸುವ ವಿಭಿನ್ನ ಪ್ರೋಮೋ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

PM Modi : ಸ್ಲೊವಾಕಿಯಾದ ಅಧ್ಯಕ್ಷ ಪೀಟರ್‌ ಪೆಲ್ಲೆಗ್ರಿನ್‌ ಅವರು ಮೋದಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.!

ಚಿತ್ರಕ್ಕೆ ನಿರ್ದೇಶಕ ಚಂದ್ರಮೋಹನ್ ಆ್ಯಕ್ಷನ್-ಕಟ್ ಹೇಳಲಿದ್ದಾರೆ. ಈ ಹಿಂದೆ ಚಿಕ್ಕಣ್ಣ ನಟನೆಯ ‘ಬೊಂಬೆ ಮಿಠಾಯಿ’, ‘ಡಬಲ್ ಇಂಜಿನ್’, ‘ಫಾರೆಸ್ಟ್’ ಹಾಗೂ ಸತೀಶ್ ನೀನಾಸಂ ಅಭಿನಯದ ‘ಬ್ರಹ್ಮಚಾರಿ’ ಚಿತ್ರಗಳನ್ನು ನಿರ್ದೇಶಿಸಿದ್ದ ಅವರು, ಇದೀಗ ಗಿಲ್ಲಿ ನಟ ಜೊತೆಗೂಡಿ ಹೊಸ ಕಾಮಿಡಿ ಎಂಟರ್‌ಟೇನರ್ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುತ್ತಿದ್ದಾರೆ.ಮಂಡ್ಯ ಶೈಲಿಯ ಹಾಸ್ಯ ಮತ್ತು ಮನರಂಜನೆಯ ಅಂಶಗಳಿಂದ ಕೂಡಿರುವ ಈ ಸಿನಿಮಾ ಪಕ್ಕಾ ಫ್ಯಾಮಿಲಿ ಎಂಟರ್‌ಟೇನರ್ ಆಗಿರಲಿದೆ ಎನ್ನಲಾಗಿದೆ. ಚಿತ್ರದ ಶೀರ್ಷಿಕೆ, ನಾಯಕಿ ಹಾಗೂ ಇತರ ಕಲಾವಿದರ ವಿವರಗಳನ್ನು ಚಿತ್ರತಂಡ ಶೀಘ್ರದಲ್ಲೇ ಅಧಿಕೃತವಾಗಿ ಪ್ರಕಟಿಸಲಿದೆ.ಬಿಗ್ ಬಾಸ್ ಟ್ರೋಫಿ ಗೆದ್ದ ಬಳಿಕ ಗಿಲ್ಲಿ ನಟ ಅವರಿಗೆ ಸಿಕ್ಕಿರುವ ಈ ದೊಡ್ಡ ಅವಕಾಶದಿಂದ ಅಭಿಮಾನಿಗಳು ಸಂಭ್ರಮದಲ್ಲಿದ್ದು, ಅವರ ನಾಯಕನಾಗಿ ಮೊದಲ ಹೆಜ್ಜೆ ಹೇಗಿರಲಿದೆ ಎಂಬ ಕುತೂಹಲ ಹೆಚ್ಚಾಗಿದೆ.

Tags: #ActorNataraj#BiggBossWinner#ComedyToHero#GhilliNata#HeroDebut#kannadafilmindustry#KVNProductions ##MovieLaunch#Nataraj#newmovie#sandalwood#SandalwoodNews#UpcomingFilmBiggBossKannadaChandramohanCinemaUpdateEntertainmentNewskannadaactorkannadacinema
Previous Post

ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಹಬ್ಬದ ದಿನ: ಒಂದೇ ದಿನ ಮೂರು ತಂಡಗಳ ಪಂದ್ಯ, 12 ಗಂಟೆಗಳ ಕ್ರಿಕೆಟ್ ರಸದೌತಣ

Next Post

ಕರ್ನಾಟಕ ಬಿಜೆಪಿ ಅಧ್ಯಕ್ಷರ ರೇಸ್‌ನಲ್ಲಿ ಪ್ರಹ್ಲಾದ್ ಜೋಶಿ ಮುಂಚೂಣಿ? ರಾಜ್ಯ ರಾಜಕಾರಣದಲ್ಲಿ ಹೊಸ ಚರ್ಚೆ

Related Posts

ಕನ್ನಡ ಕಿರುತೆರೆ ನಟ ಸಿದ್ದಾರ್ಥ ಪರಸನೋರ ಅನುಮಾನಾಸ್ಪದ ಸಾ**
Top Story

ಕನ್ನಡ ಕಿರುತೆರೆ ನಟ ಸಿದ್ದಾರ್ಥ ಪರಸನೋರ ಅನುಮಾನಾಸ್ಪದ ಸಾ**

by ಪ್ರತಿಧ್ವನಿ
June 16, 2026
0

ಬೀದರ್: ಕನ್ನಡ ಕಿರುತೆರೆಯ ಜನಪ್ರಿಯ ಹಾಸ್ಯ ಕಲಾವಿದ ನಟ ಸಿದ್ದಾರ್ಥ ಪರಸನೋರ ಮೃತದೇಹ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿದೆ. ಬೀದರ್ ಜಿಲ್ಲೆಯ ಹುಮನಾಬಾದ್ ತಾಲೂಕಿನ ಹಣಕುಣಿ ರಸ್ತೆಯ ಪಕ್ಕದ...

Read moreDetails
ನಟ ವಿಜಯ್ ರಾಘವೇಂದ್ರ, ಶ್ರೀಮುರಳಿ ತಾಯಿ ಜಯಮ್ಮ ನಿಧನ

ನಟ ವಿಜಯ್ ರಾಘವೇಂದ್ರ, ಶ್ರೀಮುರಳಿ ತಾಯಿ ಜಯಮ್ಮ ನಿಧನ

June 16, 2026
ಬೆಂಗಳೂರು ವಾಹನ ಸವಾರರೇ ಗಮನಿಸಿ: ವಾಹನ ಸಂಚಾರಕ್ಕೆ ತಡೆ; ಪರ್ಯಾಯ ಮಾರ್ಗಗಳ ಪಟ್ಟಿ ಪ್ರಕಟ

ವಾರದಲ್ಲಿ 4 ದಿನ ಟ್ರಯಲ್‌, ಖುದ್ದು ಹಾಜರಾತಿ ಕೇಳಿದ ದರ್ಶನ್‌ ನಿರ್ಣಾಯಕ ಹಂತಕ್ಕೆ ರೇಣುಕಾಸ್ವಾಮಿ ಕೊಲೆ ಪ್ರಕರಣ ವಿಚಾರಣೆ

June 15, 2026
ದರ್ಶನ್‌ ನಟನೆಯ ಕಲಾಸಿಪಾಳ್ಯ ರೀ-ರಿಲೀಸ್: ಫ್ಯಾನ್ಸ್‌ ಖುಷ್‌, ಟಿಕೆಟ್ಸ್ ಸೋಲ್ಡ್‌ ಔಟ್!

ದರ್ಶನ್‌ ನಟನೆಯ ಕಲಾಸಿಪಾಳ್ಯ ರೀ-ರಿಲೀಸ್: ಫ್ಯಾನ್ಸ್‌ ಖುಷ್‌, ಟಿಕೆಟ್ಸ್ ಸೋಲ್ಡ್‌ ಔಟ್!

June 15, 2026
ನಾನಿ ಸಿನಿಮಾಗೆ ರುಕ್ಮಿಣಿ ವಸಂತ್‌ ನಾಯಕಿ : ಜೂ. ಎನ್​​ಟಿಆರ್ ಬಳಿಕ ಟಾಲಿವುಡ್‌ ನಲ್ಲಿ ಕನ್ನಡತಿ ಮಿಂಚು..

ನಾನಿ ಸಿನಿಮಾಗೆ ರುಕ್ಮಿಣಿ ವಸಂತ್‌ ನಾಯಕಿ : ಜೂ. ಎನ್​​ಟಿಆರ್ ಬಳಿಕ ಟಾಲಿವುಡ್‌ ನಲ್ಲಿ ಕನ್ನಡತಿ ಮಿಂಚು..

June 14, 2026
Next Post
ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಹಬ್ಬದ ದಿನ: ಒಂದೇ ದಿನ ಮೂರು ತಂಡಗಳ ಪಂದ್ಯ, 12 ಗಂಟೆಗಳ ಕ್ರಿಕೆಟ್ ರಸದೌತಣ

ಕರ್ನಾಟಕ ಬಿಜೆಪಿ ಅಧ್ಯಕ್ಷರ ರೇಸ್‌ನಲ್ಲಿ ಪ್ರಹ್ಲಾದ್ ಜೋಶಿ ಮುಂಚೂಣಿ? ರಾಜ್ಯ ರಾಜಕಾರಣದಲ್ಲಿ ಹೊಸ ಚರ್ಚೆ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada