• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, August 30, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಅಂಕಣ

ಮಹಿಳೆಯರಿಗೆ ಉಚಿತ ಬಸ್​.. ಸರ್ಕಾರಕ್ಕೆ ನಷ್ಟವೇ ಆಗಲ್ಲ.. ಹೇಗೆ..?

ಕೃಷ್ಣ ಮಣಿ by ಕೃಷ್ಣ ಮಣಿ
June 10, 2023
in ಅಂಕಣ
0
ಮಹಿಳೆಯರಿಗೆ ಉಚಿತ ಬಸ್​.. ಸರ್ಕಾರಕ್ಕೆ ನಷ್ಟವೇ ಆಗಲ್ಲ.. ಹೇಗೆ..?
Share on WhatsAppShare on FacebookShare on Telegram

ರಾಜ್ಯ ವಿಧಾನಸಭೆಗೂ ಮುನ್ನ ಕಾಂಗ್ರೆಸ್​ ಘೋಷಣೆ ಮಾಡಿದ್ದ 5 ಗ್ಯಾರಂಟಿಗಳಲ್ಲಿ ಮೊದಲನೆ ಗ್ಯಾರಂಟಿ ಜಾರಿಗೆ ಬರುತ್ತಿದೆ. ನಾಳೆ ಬಳಗ್ಗೆ 11 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶಕ್ತಿ ಯೋಜನೆಗೆ ಚಾಲನೆ ನೀಡುತ್ತಿದ್ದಾರೆ. ಆ ಬಳಿಕ ಯಾವುದೇ ಮಹಿಳೆ ಸಾಮಾನ್ಯ ಸಾರಿಗೆಯಲ್ಲಿ (AC, ಐಶಾರಾಮಿ ಬಸ್​, ಸ್ಲೀಪರ್​ ಕೋಚ್​ ಹೊರತುಪಡಿಸಿ) ಹಣ ಪಾವತಿ ಮಾಡದೆ ಉಚಿತವಾಗಿ ಸಂಚಾರ ಮಾಡಬಹುದಾಗಿದೆ. ರಾಜ್ಯಾದ್ಯಂತ ಎಲ್ಲಿಂದ ಎಲ್ಲಿಗೆ ಬೇಕಾದರೂ ಸಂಚಾರ ಮಾಡಬಹುದಾಗಿದೆ. ಒಂದು ವೇಳೆ ಬಾರ್ಡರ್​​ ದಾಟಿ ಬೇರೆ ರಾಜ್ಯಕ್ಕೆ ಹೋಗುವುದಾದರೆ ಕರ್ನಾಟಕದ ಬಾರ್ಡರ್​ ತನಕ ಟಿಕೆಟ್​ ಇಲ್ಲದೆ ಪ್ರಯಾಣ ಮಾಡಬಹುದು. ಬೇರೆ ರಾಜ್ಯಕ್ಕೆ ಹೋದಾಗ ಅಲ್ಲಿ ಟಿಕೆಟ್​ ಖರೀದಿ ಅನಿವಾರ್ಯ. ಇನ್ನೊಂದು ವಿಶೇಷ ಸಂಗತಿ ಅಂದರೆ ಒಂದು ವೇಳೆ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್​​ ಕರ್ನಾಟಕದಿಂದ ಹೊರಟು, ಆಂಧ್ರದ ಕೆಲವು ಹಳ್ಳಿಗಳಲ್ಲಿ ಸಂಚರಿಸಿ ಮತ್ತೆ ಕರ್ನಾಟಕಕ್ಕೆ ಎಂಟ್ರಿ ತೆಗೆದುಕೊಳ್ಳುವ ಬಸ್​ನಲ್ಲಿ ಮಧ್ಯದಲ್ಲಿ ಬೇರೆ ರಾಜ್ಯದಲ್ಲಿ ಹೋಗುವಾಗ ಟಿಕೆಟ್​ ಖರೀದಿ ಅವಶ್ಯಕತೆ ಇಲ್ಲ. ಆದರೆ ಈ ಯೋಜನೆಯಿಂದ ಸರ್ಕಾರಕ್ಕೆ ನಷ್ಟ ಆಗುತ್ತಾ..? ಅನ್ನೋದು ಚರ್ಚೆಯ ವಿಚಾರ.

ADVERTISEMENT

ಬಸ್​ನಲ್ಲಿ ಮಹಿಳೆಯರ ಸಂಚಾರ ಹೆಚ್ಚಾಗುತ್ತಾ..?

ಸರ್ಕಾರಿ ಬಸ್​ನಲ್ಲಿ ಮಹಿಳೆಯರಿಗೆ ಫ್ರೀ ಅಂದಾಕ್ಷಣ ಈಗ ಇರುವ ಮಹಿಳಾ ಪ್ರಯಾಣಿಕರ ಸಂಖ್ಯೆ ದ್ವಿಗುಣ ಆಗುವುದಿಲ್ಲ. ಅನಿವಾರ್ಯ ಕಾರಣಕ್ಕಾಗಿ ಸಂಚಾರ ಮಾಡುವ ಮಹಿಳಾ ಉದ್ಯೋಗಿಗಳು ಈ ಯೋಜನೆಯ ಲಾಭ ಪಡೆಯಬಹುದು. ಆದರೆ ಮನೆಯಲ್ಲಿರುವ ಗೃಹಿಣಿಯರು ಈ ಯೋಜನೆಯ ಲಾಭ ಪಡೆಯುತ್ತಾರೆ, ಆದರೂ ಕೆಲವೊಮ್ಮೆ ಮಾತ್ರ. ಇನ್ನು ಮೆಟ್ರೋದಲ್ಲಿ ಸಂಚಾರ ಮಾಡುವ ಮಹಿಳೆಯರು ಬಸ್​ನಲ್ಲಿ ಕೆಲವೊಮ್ಮೆ ಪ್ರಯಾಣ ಮಾಡುತ್ತಾರೆ, ಆದರೂ ಮೆಟ್ರೋ ಪ್ರಯಾಣಿಕರಿಗೆ ಬಿಎಂಟಿಸಿ ಹಾಗು ಕೆಎಸ್​ಆರ್​ಟಿಸಿ ಪ್ರಯಾಣ ಹೊಂದುವುದಿಲ್ಲ. ಹೀಗಾಗಿ ಮೆಟ್ರೋ ಪ್ರಯಾಣಿಕರು ಬಸ್​ಗೆ ಬಂದು ಬಿಡ್ತಾರೆ ಅನ್ನೋದು ಸುಳ್ಳು. ಇನ್ನು ಎಸಿ ಬಸ್​ನಲ್ಲಿ ಸಂಚಾರ ಮಾಡುವ ಮಹಿಳಾ ಪ್ರಯಾಣಿಕರು ಕೆಎಸ್​ಆರ್​ಟಿಸಿ ಬಸ್​ ಹತ್ತುವುದಿಲ್ಲ. ಇನ್ನು ದೂರ ಪ್ರಯಾಣಕ್ಕೆ ಸ್ಲೀಪಿಂಗ್​ ಕೋಚ್​ ಬಸ್​ಗಳಲ್ಲಿ ಪ್ರಯಾಣ ಮಾಡುವ ಮಹಿಳೆಯರು ಸಾಮಾನ್ಯ ಬಸ್​ಗಳಲ್ಲಿ ಪ್ರಯಾಣ ಮಾಡುವುದಿಲ್ಲ. ಸಾಮಾನ್ಯ ಬಸ್​ನಲ್ಲಿ ಸಂಚಾರ ಮಾಡುತ್ತಿದ್ದಾರೆ ಎಂದರೆ ತೀರ ಬಡವರೇ ಆಗಿರುತ್ತಾರೆ ಎನ್ನುವುದು ಮಾತ್ರ ಸತ್ಯ.

ಮಹಿಳಾ ಸಂಘ ಸಂಸ್ಥೆಗಳಿಂದ ಶುರುವಾಗುತ್ತೆ ಪ್ರವಾಸ..!

ಮಹಿಳಾ ಸಂಘ ಸಂಸ್ಥೆಗಳ ಸದಸ್ಯರು ವಾರಾಂತ್ಯದಲ್ಲಿ ಪ್ರವಾಸ ಮಾಡುತ್ತಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಇದು ಸತ್ಯ ಕೂಡ ಹೌದು. ಮಹಿಳಾ ಮಣಿಗಳು ವಾರಾಂತ್ಯದಲ್ಲಿ ಪ್ರವಾಸಕ್ಕೆ ಯೋಜನೆ ಮಾಡಬಹುದು. ಆದರೆ ಪ್ರತಿ ವಾರವೂ ಪ್ರವಾಸ ಹೋಗಲು ಸಾಧ್ಯವೇ ಇಲ್ಲ. ತಿಂಗಳಿಗೋ, ಎರಡು ತಿಂಗಳಿಗೋ ಒಮ್ಮೆ ಪ್ರವಾಸ ಮಾಡಬಹುದು. ಪ್ರತಿ ವಾರವೂ ಪ್ರವಾಸ ಮಾಡುತ್ತಾ ಸಂಸಾರ ಬಿಟ್ಟು ಹೋದರೆ ಸಂಸಾರ ಬೀದಿಗೆ ಬರುತ್ತದೆ ಎನ್ನುವ ಕನಿಷ್ಟ ಜ್ಞಾನ ಎಲ್ಲರಲ್ಲಿಯೂ ಜಾಗೃತವಾಗಿರುತ್ತದೆ. ಇನ್ನು ಕೆಲವು ಕುಟುಂಬದಲ್ಲಿ ಮಹಿಳೆಯರು ಮಾತ್ರ ಪ್ರವಾಸ ಹೋಗುವುದಕ್ಕೆ ಸಾಧ್ಯವಿಲ್ಲ. ಪ್ರವಾಸದಲ್ಲಿ ಇಡೀ ಕುಟುಂಬವೇ ಹಾಜರಿರುತ್ತದೆ. ಮಹಿಳೆಯರಿಗೆ ಬಸ್​ ಪ್ರಯಾಣ ಉಚಿತ ಇದ್ದರೂ ಪುರುಷರು ಬಸ್​ ಚಾರ್ಜ್​ ಕೊಡಲೇ ಬೇಕು. ಇನ್ನು ಈ ರೀತಿ ಜನರು ಪ್ರವಾಸಕ್ಕೆ ಹೊರಟರೆ ಪ್ರವಾಸೋದ್ಯಮ ಅಭಿವೃದ್ಧಿ ಆಗುತ್ತದೆ. ಸರ್ಕಾರಕ್ಕೆ ಹಣ ತೆರಿಗೆ ರೂಪದಲ್ಲಿ ಹರಿದು ಬರುತ್ತದೆ.

ಧಾರ್ಮಿಕ ಕೇಂದ್ರಗಳಿಗೆ ಪ್ರವಾಸ ಹೋಗುವುದು ಹೆಚ್ಚಳ..!

ರಾಜ್ಯದ ಧಾರ್ಮಿಕ ಕೇಂದ್ರಗಳಿಗೆ ಪ್ರವಾಸ ಹೋಗುವವರ ಸಂಖ್ಯೆ ಹೆಚ್ಚಾಗಬಹುದು. ಆದರೆ ಬಸ್​ನಲ್ಲಿ ಉಚಿತ ಎನ್ನುವ ಕಾರಣಕ್ಕೆ ಧಾರ್ಮಿಕ ಕೇಂದ್ರಗಳಿಗೆ ಪ್ರವಾಸ ಹೋಗುವ ಮಹಿಳೆಯರು ದೇವಸ್ಥಾನದ ಹುಂಡಿಗೆ ಹಣ ಹಾಕುತ್ತಾರೆ. ಹರಕೆಗಳನ್ನು ತೀರಿಸುತ್ತಾರೆ. ಇನ್ನು ಹೋಟೆಲ್​ ಉದ್ಯಮ ಹೆಚ್ಚಿನ ಲಾಭದತ್ತ ಮುನ್ನುಗ್ಗುತ್ತದೆ. ಇದರಿಂದಲೂ ಸರ್ಕಾರಕ್ಕೆ ಲಾಭವೇ ಹೊರತು ನಷ್ಟವೇನಿಲ್ಲ. ಜನರು ಮನೆಯಿಂದ ಹೊರಕ್ಕೆ ಬಂದಷ್ಟೂ ಸರ್ಕಾರಗಳಿಂದ ಒಂದಲ್ಲ ಒಂದು ಮೂಲದಿಂದ ಲಾಭ ಬರುತ್ತದೆಯೇ ಹೊರತು ನಷ್ಟ ಆಗುವುದಿಲ್ಲ. ಇನ್ನು ಆಟೋ, ಟ್ಯಾಕ್ಸಿಗಳಿಗೆ ಸಂಕಷ್ಟ ಎದುರಾಗಲಿದೆ ಅನ್ನೋ ಮಾತುಗಳಿವೆ. ಇದು ಸತ್ಯ ಆಗುವ ಸಾಧ್ಯತೆಯಿದೆ. ಮಹಿಳೆಯರು ಬಸ್​ನಲ್ಲಿ 20 ರೂಪಾಯಿ ಕೊಟ್ಟು ಹೋಗುವ ಬದಲು ಆಟೋದಲ್ಲಿ ಸಂಚರಿಸಬಹುದು ಅನ್ನೋ ನಿರ್ಧಾರಕ್ಕೆ ಬರುತ್ತಿದ್ದರು. ಆದರೆ ಇನ್ಮುಂದೆ 10 ನಿಮಿಷ ತಡವಾದರೂ ಬಸ್​ನಲ್ಲೇ ಹೋಗೋಣ ಎನ್ನಬಹುದು. ಇನ್ನು ಗ್ರಾಮೀಣ ಪ್ರದೇಶದಲ್ಲಿ ಸರ್ಕಾರಿ ಬಸ್​​ ಬರುವ ಮುಂಚೆ ಆಟೋ ಓಡಿಸುವ ಪ್ರವೃತ್ತಿ ಇತ್ತು. ಆದರೆ ಇನ್ಮುಂದೆ ಆ ರೀತಿಯ ತಂತ್ರಗಾರಿಗೆ ಇನ್ಮುಂದೆ ನಡೆಯುವುದಿಲ್ಲ. ಜನರು ಬಸ್​ನಲ್ಲೇ ಪ್ರಯಾಣ ಮಾಡುತ್ತಾರೆ ಎನ್ನಬಹುದು.

ಕೃಷ್ಣಮಣಿ

Tags: busCM SiddaramaiahFree Bus TravelGovernment BusShakti Yojanatourism
Previous Post

‘ನಾಳೆಯಿಂದ ಮಹಿಳೆಯರಿಗೆ ಬಸ್​ನಲ್ಲಿ ಉಚಿತ ಪ್ರಯಾಣ ’ : ಸಿಎಂ ಸಿದ್ದರಾಮಯ್ಯ

Next Post

ಇದೇ ನನ್ನ ಕೊನೆ ಚುನಾವಣೆ, ಉಸಿರು ಇರುವವರೆಗೂ ಸಕ್ರಿಯ ರಾಜಕಾರಣದಲ್ಲಿರುವೆ : ಸಿಎಂ ಸಿದ್ದರಾಮಯ್ಯ

Related Posts

2047-ವಿಕಸಿತ ಭಾರತಕ್ಕೊಂದು ಜನ ಪ್ರಣಾಳಿಕೆ
Top Story

2047-ವಿಕಸಿತ ಭಾರತಕ್ಕೊಂದು ಜನ ಪ್ರಣಾಳಿಕೆ

by ನಾ ದಿವಾಕರ
August 27, 2026
0

ನೂರು ತುಂಬಿದ ಭಾರತ ಹೇಗಿರಲಿದೆ ಎಂಬ ಜಿಜ್ಞಾಸೆ ಮತ್ತು ಹೇಗಿರಬೇಕು ಎಂಬ ದೃಢ ನಿರ್ಧಾರ ವರ್ತಮಾನದ ಸಾಮಾಜಿಕ-ರಾಜಕೀಯ ಸಂಕಥನಗಳಲ್ಲಿ ಧ್ವನಿಸಲೇಬೇಕಾದ ಸನ್ನಿವೇಶದಲ್ಲಿ ನಾವಿದ್ದೇವೆ. ಈ ಎರಡೂ ಪ್ರಶ್ನೆಗಳನ್ನು...

Read moreDetails
ಯಶಸ್ಸಿನ ಓಟದಲ್ಲಿ ನೆಮ್ಮದಿ ಕಳೆದುಕೊಳ್ಳುತ್ತಿದೆಯೇ ಇಂದಿನ ಪೀಳಿಗೆ..?

ಯಶಸ್ಸಿನ ಓಟದಲ್ಲಿ ನೆಮ್ಮದಿ ಕಳೆದುಕೊಳ್ಳುತ್ತಿದೆಯೇ ಇಂದಿನ ಪೀಳಿಗೆ..?

August 26, 2026
ಎದೆ ಕಲಕುವ ಭಾವಸ್ಪರ್ಷಾನುಭವ- ಒಥೆಲೊ

ಎದೆ ಕಲಕುವ ಭಾವಸ್ಪರ್ಷಾನುಭವ- ಒಥೆಲೊ

August 25, 2026
ವಿಕಾಸದ ಹಾದಿಯ ಬಹುಮುಖಿ ಮಾಲಿನ್ಯಗಳು -5

ವಿಕಾಸದ ಹಾದಿಯ ಬಹುಮುಖಿ ಮಾಲಿನ್ಯಗಳು -5

August 23, 2026
ವಿಕಾಸದ ಹಾದಿಯ ಬಹುಮುಖಿ ಮಾಲಿನ್ಯಗಳು -4

ವಿಕಾಸದ ಹಾದಿಯ ಬಹುಮುಖಿ ಮಾಲಿನ್ಯಗಳು -4

August 22, 2026
Next Post
ಇದೇ ನನ್ನ ಕೊನೆ ಚುನಾವಣೆ, ಉಸಿರು ಇರುವವರೆಗೂ ಸಕ್ರಿಯ ರಾಜಕಾರಣದಲ್ಲಿರುವೆ : ಸಿಎಂ ಸಿದ್ದರಾಮಯ್ಯ

ಇದೇ ನನ್ನ ಕೊನೆ ಚುನಾವಣೆ, ಉಸಿರು ಇರುವವರೆಗೂ ಸಕ್ರಿಯ ರಾಜಕಾರಣದಲ್ಲಿರುವೆ : ಸಿಎಂ ಸಿದ್ದರಾಮಯ್ಯ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada