18 ವರ್ಷ ಮೇಲ್ಪಟ್ಟ ಎಲ್ಲಾ ವಯೋಮಾನದವರಿಗೆ ೭೫ ದಿನಗಳ ಕಾಲ ಉಚಿತ ಬೂಸ್ಟರ್ ಡೋಸ್ ನೀಡುವುದಾಗಿ ಕೇಂದ್ರ ಸರಕಾರ ಘೋಷಿಸಿದೆ.
2021ರಲ್ಲಿ ವಿಶ್ವದಲ್ಲೇ ಪ್ರಪಥಮ ಭಾರಿಗೆ ಕೋವಿಡ್ ವಿರುದ್ದ ಲಸಿಕೆ ಅಭಿಯಾನಕ್ಕೆ ಭಾರತ ಚಾಲನೆ ನೀಡಿತ್ತು ಮತ್ತು ದೇಶದ ಜನರಿಗೆ ಉಚಿತ ಲಸಿಕೆ ಅಭಿಯಾನವನ್ನು ಸಹ ಘೋಷಿಸಿತ್ತು.
ಇದೀಗ ಪ್ರಧಾನಿ ನರೇಂದ್ರ ಮೋದಿ 18 ವರ್ಷ ಮೇಲ್ಪಟ್ಟ ಯುವಕರಿಗೆ ಜುಲೈ 15ರಿಂದ ಮುಂದಿನ 75 ದಿನಗಳವರೆಗೆ ಉಚಿತ ಬೂಸ್ಟರ್ ಡೋಸ್ ಲಸಿಕೆ ನೀಡುವುದಾಗಿ ಘೋಷಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಸಿಎಂ ಬೊಮ್ಮಾಯಿ ಪ್ರಧಾನಿಗೆ ಅಭಿನಂದನೆ ಸಲ್ಲಿಸಿದ್ದಾರೆ ಹಾಗು ಇದರ ಉಪಯೋಗ ಪಡೆಯುವಂತೆ ಹೇಳಿದ್ದಾರೆ.