ಟೋಕಿಯೋ ಒಲಿಂಪಿಕ್ಸ್ನಲ್ಲಿ ಭಾರತದ ಈಕ್ವೆಸ್ಟ್ರಿಯನ್ ಪಟು ಫೌಹಾದ್ ಮಿರ್ಜಾ ಟೋಕಿಯೋ ಫೈನಲ್ ಪ್ರವೇಶಿದ್ದಾರೆ. ಇತ್ತೀಚೆಗೆ ಭಾನುವಾರ ನಡೆದ ಕ್ರಾಸ್ಕಂಟ್ರಿ ಸುತ್ತಿನಲ್ಲಿ 11.20 ಪೆನಾಲ್ಟಿ ಅಂಕ ಗಳಿಸುವ ಮೂಲಕ ಫೌಹಾದ್ 22ನೇ ಸ್ಥಾನ ಪಡೆದುಕೊಂಡಿದ್ದರು. ಬಳಿಕ ಸೋಮವಾರ ಅರ್ಹತಾ ಸುತ್ತಿನಲ್ಲಿ 25ನೇ ಸ್ಥಾನ ಪಡೆದು ಫೈನಲ್ ಪ್ರವೇಶಿಸಿದರು ಫೌಹಾದ್. ಈ ಮೂಲಕ ಫೈನಲ್ನಲ್ಲಿ 23ನೇ ಸ್ಥಾನ ಪಡೆದರು.
ಇನ್ನು, 29 ವರ್ಷದ ಫೌಹಾದ್ ಬೆಂಗಳೂರು ಮೂಲದವರು. ಡ್ರೆಸ್ಸೇಜ್, ಕ್ರಾಸ್ ಕಂಟ್ರಿ ಹಾಗೂ ಜಂಪಿಂಗ್ ಮೂರೂ ವಿಭಾಗಗಳಲ್ಲಿ ಉತ್ತಮ ಪ್ರದರ್ಶನ ತೋರಿದರು. ಈ ಫೈನಲ್ ಪ್ರವೇಶಿಸಿದ ಫೌಹಾದ್ ಸಾಧನೆಗೆ ಸಾಮಾಜಿಕ ತಾಣಗಳಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಈ ಹಿಂದೆಯಷ್ಟೇ ರ್ಯಾಂಕಿಗ್ನ ‘ಜಿ’ ಗುಂಪಿನಲ್ಲಿ (ಆಗ್ನೇಯ ಏಷ್ಯಾ-ಓಷಿಯಾನಿಯಾ) ಅಗ್ರ 2ರಲ್ಲಿ ಸ್ಥಾನ ಪಡೆದು ಒಲಿಂಪಿಕ್ಸ್ಗೆ ಅರ್ಹತೆ ಪಡೆದಿದ್ದರು. ಎರಡು ದಶಕಗಳ ಬಳಿಕ ಈಕ್ವೆಸ್ಟ್ರಿಯನ್ನಲ್ಲಿ ಭಾರತಕ್ಕೆ ಒಲಿಂಪಿಕ್ಸ್ ಅರ್ಹತೆ ಗಳಿಸಿಕೊಟ್ಟ ಕೀರ್ತಿ ಫೌಹಾದ್ ಮಿರ್ಜಾ ಅವರದ್ದು.
2018ರ ಏಷ್ಯನ್ ಕ್ರೀಡಾಕೂಟದಲ್ಲಿ ವೈಯಕ್ತಿಕ ಮತ್ತು ತಂಡ ಸ್ಪರ್ಧೆಗಳಲ್ಲಿ ಬೆಳ್ಳಿ ಪದಕಗಳನ್ನು ಗೆದ್ದ ಕುದುರೆ ಸವಾರಿ ಮಿರ್ಜಾ. ಏಷ್ಯನ್ ಕ್ರೀಡಾಕೂಟದಲ್ಲಿ ವೈಯಕ್ತಿಕ ಸ್ಪರ್ಧೆಯಲ್ಲಿ ಮಿರ್ಜಾ ಅವರು ಎರಡು ಬೆಳ್ಳ ಪದಕಗಳನ್ನು ಗೆದ್ದಿದ್ದಾರೆ.