ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡ (HD Deve Gowda) ಅವರು ಅನಾರೋಗ್ಯ ಹಿನ್ನಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾನೆ ಎಂದು ಸ್ವತ: ಹೆಚ್‌ಡಿ ದೇವೇಗೌಡರೇ ಟ್ವೀಟ್ (Tweet by HD Deve Gowda) ಮೂಲಕ ಆಭಯ ನೀಡಿದ್ರು . ನಿತ್ಯ ತಪಾಸಣೆಗಾಗಿ ಆಸ್ಪತ್ರೆಗೆ ಬಂದಿದ್ದೇನೆ ಎಂದು ಮೊಣಕಾಲು ನೋವಿನಿಂದಾಗಿ ಎಚ್.ಡಿ.ದೇವೇಗೌಡ ಅವರು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ (Manipal Hospital) ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಹೆಚ್‌ಡಿ ದೇವೇಗೌಡರು ಕಾಲು ಊತ ಜಾಸ್ತಿ ಆಗಿದ್ದ ಕಾರಣ ಜನರಲ್ ಚೆಕಪ್‌ಗೆ (For a general checkup) ಆಸ್ಪತ್ರೆಗೆ ಆಗಮಿಸಿದ್ದರು. ಹೆಚ್‌ಡಿಡಿ ಆರೋಗ್ಯ ಪರಿಶೀಲನೆ ಮಾಡಿದ ವೈದ್ಯರು ಒಂದು ವಾರ ಕಾಲ ವಿಶ್ರಾಂತಿ ಪಡೆಯಲು ಸೂಚಿಸಿದ್ದಾರೆ. ವೈದ್ಯರ ಸೂಚನೆ ಮೇರೆಗೆ ದೇವೇಗೌಡರು ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.ತಪಾಸಣೆ ನಡೆಸಿರುವ ವೈದ್ಯರು ಸೂಕ್ತ ಚಿಕಿತ್ಸೆ ನೀಡುತ್ತಿದ್ದಾರೆ. ಫಿಜಿಯೋಥೆರಪಿ ಮಾಡುತ್ತಿದ್ದಾರೆ. ದೇವೇಗೌಡರ ಮೊಣಕಾಲಿನಲ್ಲಿ ವಿಪರೀತ ನೋವು ಕಂಡು ಬಂದಿದ್ದು,
ಕಾಲು ಊದಿಕೊಂಡಿತ್ತು ಎಂದು ತಿಳಿದು ಬಂದಿದೆ.ಈ ಕಾರಣಕ್ಕಾಗಿ ಆಸ್ವತ್ರೆಯಲ್ಲೇ ೭ ದಿನಗಳ ಕಾಲ ವಿಶ್ರಾಂತಿ ಪಡೆಯಬೇಕು ಎಂದು ಮಣಿಪಾಲ್ ಆಸ್ವತ್ರೆಯ ವೈದ್ಯರು ಸಲಹೆ ನೀಡಿದ್ದಾರೆ ಈ ಕಾರಣಕ್ಕಾಗಿ ದೇವೇಗೌಡರ ಕುಟುಂಬಸ್ಥರು ಮಣಿಪಾಲ್ ಆಸ್ಪತ್ರೆಗೆ ದೌಡಾಯಿಸಿದ್ದಾರೆ. ಸದ್ಯ ದೇವೇಗೌಡರಿಗೆ ಚಿಕಿತ್ಸೆ ನೀಡಲಾಗಿದೆ. ಆತಂಕ ಪಡುವ ಅವಶ್ಯಕತೆ ಇಲ್ಲ. ದೇವೇಡೌಡರು ಆರೋಗ್ಯವಾಗಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ವೈದ್ಯರ ಸಲಹೆ ಮೆರೆಗೆ ಒಂದು ವಾರ ಕಾಲ ದೇವೇಗೌಡರು ಆಸ್ಪತ್ರೆಯಲ್ಲೇ ವಿಶ್ರಾಂತಿ ಪಡೆಯುವುದಾಗಿ ಮೂಲಗಳು ತಿಳಿಸಿವೆ. ಮನೆಯಲ್ಲಿ ಕಾರ್ಯಕರ್ತರು ಸೇರಿದಂತೆ ನಿತ್ಯ ನೂರಾರು ಮಂದಿ ಬರುತ್ತಾರೆ. ಹೀಗಾಗಿ ಅವರು ಆಸ್ಪತ್ರೆಯಲ್ಲೇ ಹೆಚ್ಚಿನ ಚಿಕಿತ್ಸೆ ಪಡೆಯಲು ಒಪ್ಪಿದ್ದಾರೆ. ಎಂದು ಮೂಲ ಮಾಹಿತಿ ಇಂದ ತಿಳಿದು ಬಂದಿದೆ …












