ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ರನ್ನು ಅರೆಸೇನಾ ಪಡೆಗಳು ಇಸ್ಲಾಮಾಬಾದ್ ಹೈಕೋರ್ಟ್ ಆವರಣದಲ್ಲಿ ಬಂಧಿಸಲಾಗಿದೆ ಎಂದು ಪಾಕಿಸ್ತಾನದ ಮಾಧ್ಯಮಗಳು ವರದಿ ಮಾಡಿದೆ. ಇಮ್ರಾನ್ ಖಾನ್ ಪಕ್ಷದ ಅಧಿಕೃತ ವಕ್ತಾರ ಫವಾದ್ ಚೌಧರಿ ನೀಡಿರುವ ಮಾಹಿತಿಯ ಪ್ರಕಾರ, ಇಮ್ರಾನ್ ಖಾನ್ರನ್ನು ಹೈಕೋರ್ಟ್ ಆವರಣದಿಂದ ಕರೆದುಕೊಂಡು ಹೋಗಲಾಗಿದೆ. ಇಮ್ರಾನ್ ಖಾನ್ರನ್ನು ಅಪರಿಚಿತರು ಅಜ್ಞಾತ ಸ್ಥಳಕ್ಕೆ ಕೊಂಡೊಯ್ದಿದ್ದಾರೆ . ಅಲ್ಲದೇ ಇಸ್ಲಾಮಾಬಾದ್ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಆಂತರಿಕ ಕಾರ್ಯದರ್ಶಿ ಹಾಗೂ ಐಜಿ ಪೊಲೀಸರಿಗೆ 15 ನಿಮಿಷಗಳಲ್ಲಿ ನ್ಯಾಯಾಲಯಕ್ಕೆ ಹಾಜರಾಗುವಂತೆ ಆದೇಶಿಸಿದ್ದರು ಎಂದಿದ್ದಾರೆ.
ಟ್ವಿಟರ್ನಲ್ಲಿ ಶೇರ್ ಮಾಡಲಾದ ವಿಡಿಯೋದಲ್ಲಿ ಪಿಟಿಐ ನಾಯಕ ಇಮ್ರಾನ್ ಖಾನ್ಗೆ ಚಿತ್ರಹಿಂಸೆ ನೀಡಲಾಗುತ್ತಿದೆ. ಅವರೆಲ್ಲ ಸೇರಿ ನಮ್ಮ ಖಾನ್ ಸಾಹಿಬ್ರಿಗೆ ಹೊಡೆಯುತ್ತಿದ್ದಾರೆ. ಖಾನ್ ಸಾಹಿಬರಿಗೆ ಅವರು ಏನಾದರೂ ಮಾಡುತ್ತಾರೆ ಎಂದು ಹೇಳುತ್ತಿರೋದನ್ನು ಕೇಳಬಹುದಾಗಿದೆ.
ಕಳೆದ ವರ್ಷ ಏಪ್ರಿಲ್ನಲ್ಲಿ ಅಧಿಕಾರದಿಂದ ಕೆಳಗಿಳಿದ ಬಳಿಕ ಇಮ್ರಾನ್ ಖಾನ್ ಹೆಸರು ನೂರಕ್ಕೂ ಹೆಚ್ಚು ಪ್ರಕರಣಗಳಲ್ಲಿ ಕೇಳಿ ಬಂದಿದೆ.