ಬೆಂಗಳೂರು : ಮಾಜಿ ಕಾನೂನು ಸಚಿವ ದಿವಂಗತ ಎಲ್.ಜಿ.ಹಾವನೂರು (LG Havanuru) ಅವರ ಪುತ್ರ ಅಶೋಕ್ ಹಾವನೂರು (62) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬೆಂಗಳೂರಿನ ಬಾಗಲಗುಂಟೆ (Bagalagunte) ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಕಾನೂನು ಕಾಲೇಜಿನ (Law College) ಮಾಲೀಕರಾಗಿರುವ ಅವರು ತಮ್ಮ ಮನೆಯಲ್ಲಿ ನೇಣಿಗೆ ಕೊರಳೊಡ್ಡಿದ್ದಾರೆ.
ಹಾವನೂರು ಲೇಔಟ್ ನಿವಾಸಿ ಅಶೋಕ್ ಹಾವನೂರು ಅವರು ರಾಮಮೂರ್ತಿ ನಗರದಲ್ಲಿ ಕಾನೂನು ಕಾಲೇಜು ನಡೆಸುತ್ತಿದ್ದರು. ಕಳೆದ 15 ದಿನಗಳಿಂದ ಇವರು ಯಾರೊಂದಿಗೆ ಅಷ್ಟಾಗಿ ಬೆರೆಯುತ್ತಿರಲಿಲ್ಲ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಎಷ್ಟು ಹೊತ್ತಾದರೂ ಅಶೋಕ್ ಕೊಠಡಿಯಿಂದ ಹೊರಕ್ಕೆ ಬಂದಿರಲಿಲ್ಲ. ಆಗ ಅನುಮಾನಗೊಂಡು ಬಾಗಿಲು ತೆರೆದು ನೋಡಿದಾಗ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ. ಘಟನೆ ಸಂಬಂಧ ತನಿಖೆ ಮುಂದುವರೆದಿದೆ.