
ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ಸರ್ಕಾರ ಹಳೇ ಕೇಸ್ ಮರು ವಿಚಾರಣೆಗೆ ಸಚಿವ ಸಂಪುಟ ಸಭೆ ನಿರ್ಧಾರ ಮಾಡಿದೆ. ಈ ಹಿಂದೆ ರಾಜ್ಯಪಾಲರ ಬಳಿ ತನಿಖೆಗೆ ಒಪ್ಪಿಗೆ ಸಿಕ್ಕಿರಲಿಲ್ಲ. ಇದೀಗ ಮತ್ತೆ ಯಡಿಯೂರಪ್ಪ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರ ನಿರ್ಣಯ ಪುನಃ ಪರಿಶೀಲನೆಗೆ ರಾಜ್ಯ ಸರ್ಕಾರ ತೀರ್ಮಾನ ಮಾಡಿದೆ. ಇಷ್ಟೆಲ್ಲಾ ಸಂಕಷ್ಟಗಳ ನಡುವೆ ಮಾಜಿ ಸಿಎಂ ಯಡಿಯೂರಪ್ಪ ಮನೆದೇವರ ಮೊರೆ ಹೋಗಿದ್ದಾರೆ.

ಮಂಡ್ಯ ಜಿಲ್ಲೆ ಕೆ.ಆರ್ ಪೇಟೆ ತಾಲೂಕಿನ ಮನೆದೇವರ ದರ್ಶನ ಮಾಡಿದ್ದಾರೆ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ. ಕೆ.ಆರ್.ಪೇಟೆ ತಾಲೂಕಿನ ಕಾಪನಹಳ್ಳಿಯಲ್ಲಿರುವ ಗವಿಮಠದ ಸ್ವತಂತ್ರ ಸಿದ್ದಲಿಂಗೇಶ್ವರ ಸ್ವಾಮಿ ಯಡಿಯೂರಪ್ಪ ಮನೆ ದೇವರು. ಮನೆ ದೇವರರಾದ ಗವಿಮಠದ ಶ್ರೀ ಸ್ವತಂತ್ರ ಸಿದ್ದಲಿಂಗೇಶ್ವರ ಸ್ವಾಮಿಗೆ ಯಡಿಯೂರಪ್ಪ ವಿಶೇಷ ಪೂಜೆ ಸಲ್ಲಿಸಿದ್ದಾರೆ. ತವರಿಗೆ ಬಂದ ಮಾಜಿ ಸಿಎಂ ಯಡಿಯೂರಪ್ಪಗೆ ತವರಿನ ಬಿಜೆಪಿ ಕಾರ್ಯಕರ್ತರು ಆತ್ಮೀಯ ಸ್ವಾಗತ ಕೋರಿದ್ದಾರೆ.
ಮನೆದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಕೆ ಮಾಡಿದ್ದು, ಸಮಸ್ಯೆಗಳ ನಿವಾರಣೆಗಾಗಿ ಮನೆದೇವರಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ. ಆದರೆ ಯತ್ನಾಳ್ ವಿಚಾರದಲ್ಲಿ ಪ್ರತಿಕ್ರಿಯೆ ಕೇಳಿದಾಗ ಮಾಜಿ ಸಿಎಂ ಯಡಿಯೂರಪ್ಪ ನಿರಾಕರಿಸಿದ್ದಾರೆ. ಇದು ನಮ್ಮ ಮನೆಯ ದೇವರು ಇಲ್ಲಿಗೆ ದೇವರ ದರ್ಶನ ಪಡೆದಿದ್ದೇನೆ. ನಮ್ಮ ಅಪ್ಪ ವರ್ಷಗಳ ಕಾಲ ಈ ದೇವರ ಸನ್ನಿದ್ದಿಯಲ್ಲಿದ್ದ ಪೂಜೆ ಮಾಡಿದ್ದಾರೆ. ಇದು ಪವಿತ್ರ ಸ್ಥಳ, ಭಕ್ತಿ ಕೇಂದ್ರ. ನಾನು ಇವತ್ತು ಸ್ವಾಮಿ ದರ್ಶನ ಪಡೆದು ರಾಜ್ಯದ ಒಳಿತಿಗೆ ಪ್ರಾರ್ಥಿಸಿದ್ದೇನೆ. ರಾಜ್ಯದ ಜನರು ಸುಖ ಸಮೃದ್ದಿಯಿಂದ ಮಳೆ ಬೆಳೆಗೆ ಆಗಲಿ ಎಂದು ಕೇಳಿ ಕೊಂಡಿದ್ದೇನೆ ಎಂದಿದ್ದಾರೆ ಯಡಿಯೂರಪ್ಪ.