• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, May 15, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಮಂಗಳೂರಿನಲ್ಲಿ ಶುರುವಾಯ್ತು ನಿಷೇಧಿತ ಲೈಟ್ ಫಿಶಿಂಗ್: ಮೀನಿನ ಕ್ಷಾಮ ಎದುರಾಗುವ ಭೀತಿಯಲ್ಲಿ ಸ್ಥಳೀಯರು

ನಚಿಕೇತು by ನಚಿಕೇತು
November 24, 2021
in ಕರ್ನಾಟಕ
0
ಮಂಗಳೂರಿನಲ್ಲಿ ಶುರುವಾಯ್ತು ನಿಷೇಧಿತ ಲೈಟ್ ಫಿಶಿಂಗ್: ಮೀನಿನ ಕ್ಷಾಮ ಎದುರಾಗುವ ಭೀತಿಯಲ್ಲಿ ಸ್ಥಳೀಯರು
Share on WhatsAppShare on FacebookShare on Telegram
ಕೊರೊನಾ ಮಾಹಾಮಾರಿಯ ಅಟ್ಟಹಾಸದ ಬಳಿಕ ಕರಾವಳಿಯಲ್ಲಿ ಮೀನುಗಾರಿಕೆ ಆರಂಭಗೊಂಡಿದೆ. ಮಳೆ ಅಬ್ಬರ ಇಳಿಕೆಯಾದ ಬಳಿಕ ಆಳ ಸಮುದ್ರದತ್ತ ಕಡಲ ಮಕ್ಕಳು  ಲಗ್ಗೆ ಇಟ್ಟಿದ್ದಾರೆ . ರಾಜ್ಯದ ಕರಾವಳಿಯ ಸಮುದ್ರದಲ್ಲಿ ಕೆಲ ಮೀನುಗಾರರು  ನಿಷೇಧಿತ  ಲೈಟ್  ಫಿಶಿಂಗ್ ನಡೆಸುತ್ತಿದ್ದಾರೆ ಎಂಬ ಆತಂಕಕಾರಿ ಮಾಹಿತಿ ಹೊರಬಿದ್ದಿದೆ. 

ಕೇಂದ್ರ ಹಾಗು ರಾಜ್ಯ ಸರಕಾರ ನಿಷೇಧಿಸಿರುವ ಈ ಲೈಟ್ ಫಿಶಿಂಗ್  ಬೇಟೆಯಿಂದಾಗಿ ಮೀನಿನ ಕ್ಷಾಮ ಎದುರಾಗುವ ಭೀತಿ ಮೀನುಗಾರರಲ್ಲಿದೆ.

ಕೊರೊನಾ ಸಂಕಷ್ಟ, ಲಾಕ್ಡೌನ್ ಬಳಿಕ ಈಗಷ್ಟೇ ಕಡಲ ಮಕ್ಕಳು ಸಮುದ್ರದತ್ತ ಮುಖ ಮಾಡಿದ್ದಾರೆ. ಕರಾವಳಿಯಲ್ಲಿ ಆಳ ಸಮುದ್ರ ಮೀನುಗಾರಿಕೆ ಆರಂಭಗೊಂಡಿದ್ದು ಕಡಲಿಗಿಳಿದಿರುವ  ಪರ್ಸಿನ್ ಹಾಗು ಟ್ರಾಲ್ ಬೋಟ್ಗಳಿಲ್ಲಿ ತಕ್ಕಮಟ್ಟಿಗೆ ಮೀನು ಲಭ್ಯವಾಗುತ್ತಿದೆ.

ಈ ನಡುವೆ ಅತೀ ಆಸೆಗೆ ಬಿದ್ದಿರುವ ಕೆಲ ಮೀನುಗಾರರು ನಿಷೇಧಿತ ಲೈಟ್ ಫಿಶಿಂಗ್ ಮಾಡುತ್ತಿರುವುದು ಕಂಡು ಬಂದಿದೆ. ಸಮುದ್ರದಲ್ಲಿ ಲೈಟ್ ಫಿಶಿಂಗ್  ನಡೆಸುವುದಕ್ಕೆ ಕೇಂದ್ರ ಹಾಗು ರಾಜ್ಯ ಸರಕಾರದ ನಿಷೇಧ ಇದೆ. ಆದ್ರೂ ಕೆಲವರು ಈ ಲೈಟ್ ಫಿಶಿಂಗ್ ಮಾಡ್ತಿದ್ದು, ಇದರಿಂದಾಗಿ ಸಣ್ಣ ಮೀನುಗಳೆಲ್ಲ ಈ ಎಡೆಗೆ ಸಿಲುಕಿ ವಿನಾಕಾರಣ ಸಾಯುವುದರಿಂದ ಮೀನಿನ ಕ್ಷಾಮ ಎದುರಾಗುತ್ತದೆ ಎನ್ನುತ್ತಾರೆ ಮೀನುಗಾರರು.

ಕರಾವಳಿಯ ತಟದಿಂದ ಕೇವಲ 10ರಿಂದ20 ನಾಟಿಕಲ್ ಮೈಲಿನ ವ್ಯಾಪ್ತಿಯಲ್ಲಿ ಕೆಲವು ಬೃಹತ್ ಟ್ರಾಲ್ ಬೋಟ್ಗಳು  ಸೇರಿ ಲೈಟ್ ಫಿಶಿಂಗ್  ಮಾಡುತ್ತಿರುವುದು ಕಂಡು ಬಂದಿದೆ. ಇತ್ತೀಚೆಗೆ  ಕಡಲ ತೀರದಿಂದ ಕೇವಲ 20 ನಾಟಿಕಲ್ ಮೈಲ್ಸ್ ದೂರದಲ್ಲಿ ಲೈಟ್ ಫಿಶಿಂಗ್ ಮಾಡುತ್ತಿದ್ದ ಬೋಟ್ ಒಂದನ್ನು ಮೀನುಗಾರರು ಪತ್ತೆ ಹಚ್ಚಿದ್ದಾರೆ.

ರಾಜ್ಯದ ಕರಾವಳಿ ವ್ಯಾಪ್ತಿಯಲ್ಲಿ ಅಂಥ ಮೀನುಗಾರಿಕೆ ಮಾಡುವಂತಿಲ್ಲ ಎಂಬ ನಿಯಮ ಇದ್ದು, ಮೀನುಗಾರಿಕಾ ಇಲಾಖೆಯ ಅಧಿಕಾರಿಗಳು ಕೂಡ ಇದೇ ಮಾತನ್ನು ಹೇಳುತ್ತಾರೆ. ಆದರೆ,ಮಂಗಳೂರು , ಉಡುಪಿ, ಕುಂದಾಪುರ, ಕಾರವಾರ ಪ್ರದೇಶದಲ್ಲಿ ಅಲ್ಲಲ್ಲಿ ಕಗ್ಗತ್ತಲ ರಾತ್ರಿಯಲ್ಲಿ ಈ ರೀತಿಯ ಲೈಟ್  ಫಿಶಿಂಗ್ ನಡೆಸುವುದನ್ನು ಪತ್ತೆಯಾಗಿದೆ. 

ತಮಿಳುನಾಡು, ಆಂಧ್ರದ ಮೀನುಗಾರರು ಮಾತ್ರವಲ್ಲದೇ ನಮ್ಮ ರಾಜ್ಯದ ಕೆಲ ಮೀನುಗಾರರು ಕದ್ದು ಮುಚ್ಚಿ ಈ ಲೈಟ್ ಫಿಶಿಂಗ್ ಮಾಡುತ್ತಿರುವುದೂ ಕೂಡ ಪತ್ತೆಯಾಗಿದೆ.

ಇನ್ನೂ ಒಮ್ಮೆಲೇ ಲಾಭ ಬಾಚಿಕೊಳ್ಳಬೇಕು ಎಂಬ ಆಸೆಯಿಂದಾಗಿ ಕೆಲವರು ಇಲಾಖೆಯ, ಕರಾವಳಿ ಕಾವಲು ಪಡೆಯ ಮತ್ತು ಕೋಸ್ಟ್ ಗಾರ್ಡ್ ಕಣ್ಣು ತಪ್ಪಿಸಿ, ಕೆಲ ಮೀನುಗಾರರು ಈ  ನಿಷೇಧಿತ ಮೀನುಗಾರಿಕೆ ನಡೆಸುತ್ತಾರೆ.

ಸಮುದ್ರ ಮಧ್ಯೆ ಕಣ್ಗಾವಲು ಇಡುವ ಯಾರೂ ಇರುವುದಿಲ್ಲ ಎಂಬ ಅಹಂನಿಂದ ನಿಯಮವನ್ನು ಗಾಳಿಗೆ ತೂರುತ್ತಾರೆ. ಈ ರೀತಿಯ ಅಕ್ರಮಗಳನ್ನು ತಡೆಯದಿದ್ದಲ್ಲಿ ಮುಂಬರುವ ದಿನಗಳಲ್ಲಿ ಕಡಲ ಮಧ್ಯೆ ಮೀನುಗಾರರ ನಡುವೆ ಘರ್ಷಣೆಗೆ ಕಾರಣವಾಗಲಿದೆ. ಹೀಗಾಗಿ ನಿಯಮ ಬಾಹಿರವಾಗಿ ಮೀನುಗಾರಿಕೆ ನಡೆಸುವ ಬೋಟ್ ಗಳ  ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ADVERTISEMENT
Tags: Forbidden light fishing in Mangalore
Previous Post

ತುಮರಿ ಶಾಲೆಯ ಭೂವಿವಾದ : ಸರ್ಕಾರದಿಂದ ಸರ್ವೆ ಕಾರ್ಯ ಆರಂಭ!

Next Post

ನವೆಂಬರ್ 26ಕ್ಕೆ ಪ್ರಬಲ ವಾಯುಭಾರ ಕುಸಿತ; ರಾಜ್ಯಾದ್ಯಂತ ಮತ್ತೆ ಭಾರೀ ಮಳೆಯಾಗುವ ಸಾಧ್ಯತೆ

Related Posts

ಮೋದಿ ಎಚ್ಚರಿಕೆಯ ಬೆನ್ನಲ್ಲೆ ದಿಢೀರ್‌ ಪೆಟ್ರೋಲ್‌, ಡಿಸೇಲ್‌ ಬೆಲೆ ಏರಿಕೆ
Top Story

ಮೋದಿ ಎಚ್ಚರಿಕೆಯ ಬೆನ್ನಲ್ಲೆ ದಿಢೀರ್‌ ಪೆಟ್ರೋಲ್‌, ಡಿಸೇಲ್‌ ಬೆಲೆ ಏರಿಕೆ

by ಪ್ರತಿಧ್ವನಿ
May 15, 2026
0

ಬೆಂಗಳೂರು : ಮಧ್ಯಪ್ರಾಚ್ಯದಲ್ಲಿ ಯುದ್ಧದ ಸ್ಥಿತಿ ಹಾಗೂ ಉದ್ವಿಗ್ನ ಪರಿಸ್ಥಿತಿ ಪರಿಣಾಮ ಇದೀಗ ಭಾರತಕ್ಕೂ ತಟ್ಟಿದೆ, ಇದರ ಮುನ್ನೇಚ್ಚರಿಕೆ ಕ್ರಮವಾಗಿ ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ...

Read moreDetails
ವಸ್ತ್ರಸಂಹಿತೆ ವಿವಾದಕ್ಕೆ ಹೊಸ ತಿರುವು; ಸರ್ಕಾರದ ಆದೇಶಕ್ಕೆ ಖಾಸಗಿ ಶಾಲೆಗಳ ವಿರೋಧ

ವಸ್ತ್ರಸಂಹಿತೆ ವಿವಾದಕ್ಕೆ ಹೊಸ ತಿರುವು; ಸರ್ಕಾರದ ಆದೇಶಕ್ಕೆ ಖಾಸಗಿ ಶಾಲೆಗಳ ವಿರೋಧ

May 15, 2026
ಹೋಂಗಾರ್ಡ್ಸ್, ರಿಸರ್ವ್ ಪೊಲೀಸರು ವಾಹನ ತಪಾಸಣಾ ಮಾಡಿದ್ರೆ ಕಠಿಣ ಕ್ರಮ : ಮೋಹನ್‌ ಕುಮಾರ್‌ ದಾನಪ್ಪ ಮನವಿಗೆ ಡಿಜಿಪಿ ಸ್ಪಂದನೆ

ಹೋಂಗಾರ್ಡ್ಸ್, ರಿಸರ್ವ್ ಪೊಲೀಸರು ವಾಹನ ತಪಾಸಣಾ ಮಾಡಿದ್ರೆ ಕಠಿಣ ಕ್ರಮ : ಮೋಹನ್‌ ಕುಮಾರ್‌ ದಾನಪ್ಪ ಮನವಿಗೆ ಡಿಜಿಪಿ ಸ್ಪಂದನೆ

May 14, 2026
ವಿದ್ಯುತ್ ಉತ್ಪಾದನೆಯಲ್ಲಿ ಮಹಿಳಾ ಸಿಬ್ಬಂದಿ ಸೇವೆ ಶ್ಲಾಘನೀಯ: ಗೌರವ್ ಗುಪ್ತ

ವಿದ್ಯುತ್ ಉತ್ಪಾದನೆಯಲ್ಲಿ ಮಹಿಳಾ ಸಿಬ್ಬಂದಿ ಸೇವೆ ಶ್ಲಾಘನೀಯ: ಗೌರವ್ ಗುಪ್ತ

May 14, 2026
ನವೀಕರಿಸಬಹುದಾದ ಇಂಧನ ವಲಯದಲ್ಲಿ ಹೆಚ್ಚು ಉದ್ಯೋಗಾವಕಾಶ: ಕ್ರೆಡಲ್ ಎಂ.ಡಿ. ಕೆ.ಪಿ. ರುದ್ರಪ್ಪಯ್ಯ

ನವೀಕರಿಸಬಹುದಾದ ಇಂಧನ ವಲಯದಲ್ಲಿ ಹೆಚ್ಚು ಉದ್ಯೋಗಾವಕಾಶ: ಕ್ರೆಡಲ್ ಎಂ.ಡಿ. ಕೆ.ಪಿ. ರುದ್ರಪ್ಪಯ್ಯ

May 14, 2026
Next Post
ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ; ರಾಜ್ಯದಲ್ಲಿ ಮುಂದಿನ ಮೂರು ದಿನ ಭಾರೀ ಮಳೆಯಾಗುವ ಸಾಧ್ಯತೆ

ನವೆಂಬರ್ 26ಕ್ಕೆ ಪ್ರಬಲ ವಾಯುಭಾರ ಕುಸಿತ; ರಾಜ್ಯಾದ್ಯಂತ ಮತ್ತೆ ಭಾರೀ ಮಳೆಯಾಗುವ ಸಾಧ್ಯತೆ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada