ಕೊರೊನಾ ಮಾಹಾಮಾರಿಯ ಅಟ್ಟಹಾಸದ ಬಳಿಕ ಕರಾವಳಿಯಲ್ಲಿ ಮೀನುಗಾರಿಕೆ ಆರಂಭಗೊಂಡಿದೆ. ಮಳೆ ಅಬ್ಬರ ಇಳಿಕೆಯಾದ ಬಳಿಕ ಆಳ ಸಮುದ್ರದತ್ತ ಕಡಲ ಮಕ್ಕಳು ಲಗ್ಗೆ ಇಟ್ಟಿದ್ದಾರೆ . ರಾಜ್ಯದ ಕರಾವಳಿಯ ಸಮುದ್ರದಲ್ಲಿ ಕೆಲ ಮೀನುಗಾರರು ನಿಷೇಧಿತ ಲೈಟ್ ಫಿಶಿಂಗ್ ನಡೆಸುತ್ತಿದ್ದಾರೆ ಎಂಬ ಆತಂಕಕಾರಿ ಮಾಹಿತಿ ಹೊರಬಿದ್ದಿದೆ. ಕೇಂದ್ರ ಹಾಗು ರಾಜ್ಯ ಸರಕಾರ ನಿಷೇಧಿಸಿರುವ ಈ ಲೈಟ್ ಫಿಶಿಂಗ್ ಬೇಟೆಯಿಂದಾಗಿ ಮೀನಿನ ಕ್ಷಾಮ ಎದುರಾಗುವ ಭೀತಿ ಮೀನುಗಾರರಲ್ಲಿದೆ. ಕೊರೊನಾ ಸಂಕಷ್ಟ, ಲಾಕ್ಡೌನ್ ಬಳಿಕ ಈಗಷ್ಟೇ ಕಡಲ ಮಕ್ಕಳು ಸಮುದ್ರದತ್ತ ಮುಖ ಮಾಡಿದ್ದಾರೆ. ಕರಾವಳಿಯಲ್ಲಿ ಆಳ ಸಮುದ್ರ ಮೀನುಗಾರಿಕೆ ಆರಂಭಗೊಂಡಿದ್ದು ಕಡಲಿಗಿಳಿದಿರುವ ಪರ್ಸಿನ್ ಹಾಗು ಟ್ರಾಲ್ ಬೋಟ್ಗಳಿಲ್ಲಿ ತಕ್ಕಮಟ್ಟಿಗೆ ಮೀನು ಲಭ್ಯವಾಗುತ್ತಿದೆ. ಈ ನಡುವೆ ಅತೀ ಆಸೆಗೆ ಬಿದ್ದಿರುವ ಕೆಲ ಮೀನುಗಾರರು ನಿಷೇಧಿತ ಲೈಟ್ ಫಿಶಿಂಗ್ ಮಾಡುತ್ತಿರುವುದು ಕಂಡು ಬಂದಿದೆ. ಸಮುದ್ರದಲ್ಲಿ ಲೈಟ್ ಫಿಶಿಂಗ್ ನಡೆಸುವುದಕ್ಕೆ ಕೇಂದ್ರ ಹಾಗು ರಾಜ್ಯ ಸರಕಾರದ ನಿಷೇಧ ಇದೆ. ಆದ್ರೂ ಕೆಲವರು ಈ ಲೈಟ್ ಫಿಶಿಂಗ್ ಮಾಡ್ತಿದ್ದು, ಇದರಿಂದಾಗಿ ಸಣ್ಣ ಮೀನುಗಳೆಲ್ಲ ಈ ಎಡೆಗೆ ಸಿಲುಕಿ ವಿನಾಕಾರಣ ಸಾಯುವುದರಿಂದ ಮೀನಿನ ಕ್ಷಾಮ ಎದುರಾಗುತ್ತದೆ ಎನ್ನುತ್ತಾರೆ ಮೀನುಗಾರರು. ಕರಾವಳಿಯ ತಟದಿಂದ ಕೇವಲ 10ರಿಂದ20 ನಾಟಿಕಲ್ ಮೈಲಿನ ವ್ಯಾಪ್ತಿಯಲ್ಲಿ ಕೆಲವು ಬೃಹತ್ ಟ್ರಾಲ್ ಬೋಟ್ಗಳು ಸೇರಿ ಲೈಟ್ ಫಿಶಿಂಗ್ ಮಾಡುತ್ತಿರುವುದು ಕಂಡು ಬಂದಿದೆ. ಇತ್ತೀಚೆಗೆ ಕಡಲ ತೀರದಿಂದ ಕೇವಲ 20 ನಾಟಿಕಲ್ ಮೈಲ್ಸ್ ದೂರದಲ್ಲಿ ಲೈಟ್ ಫಿಶಿಂಗ್ ಮಾಡುತ್ತಿದ್ದ ಬೋಟ್ ಒಂದನ್ನು ಮೀನುಗಾರರು ಪತ್ತೆ ಹಚ್ಚಿದ್ದಾರೆ. ರಾಜ್ಯದ ಕರಾವಳಿ ವ್ಯಾಪ್ತಿಯಲ್ಲಿ ಅಂಥ ಮೀನುಗಾರಿಕೆ ಮಾಡುವಂತಿಲ್ಲ ಎಂಬ ನಿಯಮ ಇದ್ದು, ಮೀನುಗಾರಿಕಾ ಇಲಾಖೆಯ ಅಧಿಕಾರಿಗಳು ಕೂಡ ಇದೇ ಮಾತನ್ನು ಹೇಳುತ್ತಾರೆ. ಆದರೆ,ಮಂಗಳೂರು , ಉಡುಪಿ, ಕುಂದಾಪುರ, ಕಾರವಾರ ಪ್ರದೇಶದಲ್ಲಿ ಅಲ್ಲಲ್ಲಿ ಕಗ್ಗತ್ತಲ ರಾತ್ರಿಯಲ್ಲಿ ಈ ರೀತಿಯ ಲೈಟ್ ಫಿಶಿಂಗ್ ನಡೆಸುವುದನ್ನು ಪತ್ತೆಯಾಗಿದೆ. ತಮಿಳುನಾಡು, ಆಂಧ್ರದ ಮೀನುಗಾರರು ಮಾತ್ರವಲ್ಲದೇ ನಮ್ಮ ರಾಜ್ಯದ ಕೆಲ ಮೀನುಗಾರರು ಕದ್ದು ಮುಚ್ಚಿ ಈ ಲೈಟ್ ಫಿಶಿಂಗ್ ಮಾಡುತ್ತಿರುವುದೂ ಕೂಡ ಪತ್ತೆಯಾಗಿದೆ. ಇನ್ನೂ ಒಮ್ಮೆಲೇ ಲಾಭ ಬಾಚಿಕೊಳ್ಳಬೇಕು ಎಂಬ ಆಸೆಯಿಂದಾಗಿ ಕೆಲವರು ಇಲಾಖೆಯ, ಕರಾವಳಿ ಕಾವಲು ಪಡೆಯ ಮತ್ತು ಕೋಸ್ಟ್ ಗಾರ್ಡ್ ಕಣ್ಣು ತಪ್ಪಿಸಿ, ಕೆಲ ಮೀನುಗಾರರು ಈ ನಿಷೇಧಿತ ಮೀನುಗಾರಿಕೆ ನಡೆಸುತ್ತಾರೆ. ಸಮುದ್ರ ಮಧ್ಯೆ ಕಣ್ಗಾವಲು ಇಡುವ ಯಾರೂ ಇರುವುದಿಲ್ಲ ಎಂಬ ಅಹಂನಿಂದ ನಿಯಮವನ್ನು ಗಾಳಿಗೆ ತೂರುತ್ತಾರೆ. ಈ ರೀತಿಯ ಅಕ್ರಮಗಳನ್ನು ತಡೆಯದಿದ್ದಲ್ಲಿ ಮುಂಬರುವ ದಿನಗಳಲ್ಲಿ ಕಡಲ ಮಧ್ಯೆ ಮೀನುಗಾರರ ನಡುವೆ ಘರ್ಷಣೆಗೆ ಕಾರಣವಾಗಲಿದೆ. ಹೀಗಾಗಿ ನಿಯಮ ಬಾಹಿರವಾಗಿ ಮೀನುಗಾರಿಕೆ ನಡೆಸುವ ಬೋಟ್ ಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ರಾಜ್ಯಸಭೆಯಲ್ಲಿ ಕಾಂಗ್ರೆಸ್ ವಿರುದ್ಧ ಹೆಚ್.ಡಿ.ದೇವೇಗೌಡರ ಆಕ್ರೋಶ
ನವದೆಹಲಿ, (ರಾಜ್ಯಸಭೆ):ರಾಜ್ಯಸಭೆ ಸಭಾಪತಿಗಳಾದ ಜಗದೀಪ್ ಧನಕರ್ ಅವರ ವಿರುದ್ಧ ಕಾಂಗ್ರೆಸ್ ಮೈತ್ರಿಕೂಟದ ಸದಸ್ಯರು ಅವಿಶ್ವಾಸ ಗೊತ್ತುವಳಿ ಮಂಡಿಸಲು ನೀಡಿರುವ ನೋಟಿಸ್ ವಿರುದ್ಧ ಹರಿಹಾಯ್ದ ಮಾಜಿ ಪ್ರಧಾನಿಗಳಾದ ಹೆಚ್.ಡಿ.ದೇವೇಗೌಡರು;...
Read moreDetails