ನಿಮಗೆ ಸ್ಟಾಕ್ ಮಾರ್ಕೆಟ್ (Stock market) ನಲ್ಲಿ ಹೂಡಿಕೆ ಮಾಡಲು ಆಸಕ್ತಿ ಇದ್ದು ಸ್ಟಾಕ್ ಮಾರ್ಕೆಟ್ ಬಗ್ಗೆ ಏನೇನೋ ಗೊತ್ತಿಲ್ಲದಿದ್ದರೆ ಯಾರದಾದರೂ ಮಾರ್ಗದರ್ಶನ ಪಡೆದದ್ರು ಸ್ಟಾಕ್ ಮಾರ್ಕೆಟ್ನಲ್ಲಿ ಹೂಡಿಕೆ ಮಾಡಿ ಹಣ ಗಳಿಸಬೇಕು ಅನ್ನೋ ಲೆಕ್ಕಾಚಾರದಲ್ಲಿ ನೀವಿದ್ರೆ ಹುಷಾರಾಗಿರಿ . ನೀವು ಸೈಬರ್ ಖದೀಮರ ಬಲಗೆ ಬೀಳಬಹುದು ಎಚ್ಚರ.
ಇದೇ ರೀತಿ ತುಮಕೂರಿನ ತಿಪಟೂರು ಮೂಲದ ಲಿಖಿತ್ ವೈ ಪಾಟೀಲ್ (Likith Y patil ) ಎಂಬ ಇಂಜಿನಿಯರ್ ಇನ್ಸ್ಟಾಗ್ರಾಮ್ (instagram) ಮೂಲಕ ಸ್ಟಾಕ್ ಮಾರ್ಕೆಟ್ ಬಗ್ಗೆ ತಿಳಿಸಿಕೊಡುವ ವಾಟ್ಸಪ್ಪ್ ಕಮ್ಯುನಿಟಿ (Whatsapp community) ಒಂದಕ್ಕೆ ಜಾಯಿನ್ ಆಗಿದ್ದಾರೆ. ಈ ಗ್ರೂಪ್ನಲ್ಲಿ ಒಂದಷ್ಟು ಕಾಲ ಚಾಟ್ (chat) ಮಾಡಿದ ಬಳಿಕ ಪ್ರತ್ಯೇಕವಾಗಿ ಒಬ್ಬ ವ್ಯಕ್ತಿಯ ಜೊತೆಗೆ ತಮ್ಮ ಚಾಟಿಂಗ್ ಮುಂದುವರಿಸಿದ್ದಾರೆ. ಆ ವ್ಯಕ್ತಿಯ ಮಾರ್ಗದರ್ಶನದಂತೆ ಆರು ಲಕ್ಷ ಹಣ ವರ್ಗಾವಣೆ ಮಾಡಿ ತಾನು ಸ್ಟಾಕ್ ಮಾರ್ಕೆಟ್ನಲ್ಲಿ ಹೂಡಿಕೆ ಮಾಡಿರೋದಾಗಿ ಭಾವಿಸಿದ್ದಾರೆ.
ಇದಾದ ನಂತರ ಲಿಖಿತ್ ವೈ ಪಾಟೀಲ್ ಇದೇ ರೀತಿ ಮತ್ತೆ 10 ಲಕ್ಷ ಹಣವನ್ನು (10 lakhs) ಹೂಡಿಕೆಯ ನೆಪದಲ್ಲಿ ಈ ವ್ಯಕ್ತಿಗೆ ವರ್ಗಾವಣೆ ಮಾಡಿದ್ದಾರೆ ಮೇಲಿಂದ ಮೇಲೆ ಇದೇ ರೀತಿ ಹಣ ಹಾಕಿಸಿಕೊಂಡ ವ್ಯಕ್ತಿ ನಂತರ ಲಿಖಿತ್ ವೈ ಪಾಟೀಲ್ ಗೆ ಪ್ರತಿಕ್ರಿಯಿಸುವುದನ್ನು ನಿಲ್ಲಿಸಿರ್ತಾರೆ ಇದರಿಂದ ಅನುಮಾನ ಗೊಂಡ ಲಿಕಿತ್ ತಮ್ಮ ಹಣವನ್ನು ವಾಪಸ್ ಕೇಳಿದಾಗ ತಾವು ವಂಚನೆಗೆ ಒಳಗಾಗಿರುವುದು ಗೊತ್ತಾಗಿದೆ ಆದರೆ ಅಷ್ಟೊತ್ತಿಗಾಗಲೇ ಬಹಳ ತಡವಾಗಿದ್ದು ಲಿಖಿತ್ ಬರೋಬ್ಬರಿ 36.8 (36.8 lakhs) ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ.
ತಕ್ಷಣ ಪೊಲೀಸ್ ಠಾಣೆಯಲ್ಲಿ (police station) ಲಿಖಿತ್ ವೈ ಪಾಟೀಲ್ ದೂರು ದಾಖಲಿಸಿದ್ದಾರೆ ಆದರೆ ಸೈಬರ್ ಕ್ರೈಂ (cyber crime) ನಂತಹ ಪ್ರಕರಣದಲ್ಲಿ ಖದೀಮರನ ಪತ್ತೆ ಹಚ್ಚಿ ಹಣ ಮರಳಿ ಪಡೆಯುವುದು ಸವಾಲಿನ ಕೆಲಸವೇ ಸರಿ . ಅನಕ್ಷರಸ್ಥರು ಅವಿದ್ಯಾವಂತರು ಈ ರೀತಿಯ ವಂಚನೆಯ ಜಾಲಕ್ಕೆ ಬಲಿಯಾಗುತ್ತಿದ್ದರು . ಆದರೆ ವಿದ್ಯಾವಂತರಾಗಿರುವ ಲಿಖಿತ್ ವೈ ಪಾಟೀಲ್ ಕೂಡ ಈ ರೀತಿ ಹೂಡಿಕೆ ನೆಪದಲ್ಲಿ ಲಕ್ಷಾಂತರ ರೂಪಾಯಿ ಕಳೆದುಕೊಂಡಿರುವುದು ವಿಪರ್ಯಾಸ . ಯಾವುದೇ ಹೂಡಿಕೆ ಅಥವಾ ಯಾರದ್ದೇ ಸಲಹೆಯನ್ನ ಪಾಲಿಸುವ ಮುನ್ನ ಎಚ್ಚರದಿಂದ ಇರಿ.